ದುರ್ಗಾದೇವಿಗೆ ವೃಷಭವಾಹಿನಿ ತ್ರಿಮೂರ್ತಿ ಅಲಂಕಾರ

durga devi kls
ಕಳಸದ ದುರ್ಗಾ ಮಂಟಪದಲ್ಲಿ ಪ್ರತಿಷ್ಟಾಪಿಸಲಾದ ದುರ್ಗಾದೇವಿಗೆ ಹೂವಿನ ಪೂಜೆ ನೆರವೇರಿತು.
Published on

ಕಳಸ: ಶ್ರೀ ದುರ್ಗಾಪೂಜಾ ಸಮಿತಿಯಿಂದ 35ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾಪೂಜಾ ಮಹೋತ್ಸವ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಪಟ್ಟಣದ ದುರ್ಗಾ ಮಂಟಪದಲ್ಲಿ ಪ್ರತಿಷ್ಟಾಪಿಸಿದ ಶ್ರೀ ದುರ್ಗಾದೇವಿಗೆ ಎಂಟನೇ ಅವತಾರವಾದ ವೃಷಭವಾಹಿನಿ ತ್ರಿಮೂರ್ತಿಯಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.
ದುರ್ಗಾಹೋಮ, ಹೂವಿನಪೂಜೆ, ಪಾರಾಯಣ, ರಂಗಪೂಜೆ, ಅನ್ನದಾನ ನೆರವೇರಿತು. ರಾಜಲಕ್ಷ್ಮೀ ಜೋಷಿ ಸಂಗಡಿಗರಿಂದ ಸೌಂದರ್ಯ ಲಹರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ಪ್ರಸಾದ ಸ್ವೀಕರಿಸಿದರು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಕಲಾವೃಂದ ಕಳಸ ಗಾಯಕ ಶಂಕರ್ ಶ್ಯಾನುಭೋಗ್ ಮತ್ತು ತಂಡದಿಂದ ಭಕ್ತಿ ಭಾವಗೀತ ಲಹರಿ ಕಾರ್ಯಕ್ರಮ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net