

ಶಿವಮೊಗ್ಗ: ತಾಲೂಕಿನ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಮತದಾರರಿಗೆ ಉಪಾಹಾರ ವ್ಯವಸ್ಥೆ ಮಾಡುತ್ತಿದ್ದ ತೋಟದ ಮನೆ ಮೇಲೆ ಚುನಾವಣಾ ನೀತಿ ಸಂಹಿತೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದು ಅಡುಗೆ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ.
ಹೊಸಹಳ್ಳಿ ಗ್ರಾಪಂಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚಲು ಪಲಾವ್ ಮಾಡಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳಾದ ಎನ್.ಚಂದ್ರಪ್ಪ ಮತ್ತು ಕಲ್ಲಪ್ಪ ದಾಳಿ ನಡೆಸಿದ್ದಾರೆ. ಪಲಾವ್. ಮೊಸರು ಬಜ್ಜಿ, ಪಾತ್ರೆಗಳು, ಸಿದ್ಧವಾಗಿದ್ದ ಪಲಾವ್ ಹಾಗೂ ಆಹಾರ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಪಾಹಾರ ತಯಾರಿಸಿದ ಅಭ್ಯರ್ಥಿ ಯಾರೆಂಬುದು ತಿಳಿದುಬಂದಿಲ್ಲ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.