More

    ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!

    ಮುಂಬೈ: ಗಾಯಕಿ ನೇಹಾ ಕಕ್ಕರ್​ ಮದುವೆಯಾಗಿ ಎರಡು ತಿಂಗಳು ಕಳೆದಿದೆಯಷ್ಟೇ. ಅಷ್ಟರಲ್ಲಾಗಲೇ ನಟಿ ಹೊಟ್ಟೆ ಹಿಡಿದುಕೊಂಡಿರುವ ಫೋಟೋವನ್ನು ಹರಿಬಿಟ್ಟು, ಸುದ್ದಿಗೆ ಬಂದುಬಿಟ್ಟಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ಗಾಯಕಿಗೆ ಯೌವನದ ಮಗ ಕೂಡ ಇದ್ದಾನೆ!

    ಇದನ್ನೂ ಓದಿ: ಪ್ರಾಪ್ತಳು ಮತಾಂತರಗೊಂಡು ತವರಿಗೆ ಬರದಿದ್ದರೂ ಮಧ್ಯೆ ಪ್ರವೇಶಿಸುವ ಅಗತ್ಯವಿಲ್ಲ ಎಂದ ಹೈಕೋರ್ಟ್​

    ಹೌದು. ನೇಹಾ ಅವರ ಹೊಸ ಆಲ್ಬಾಂ ಸಾಂಗ್​ ಮಂಗಳವಾರದಂದು ಬಿಡುಗಡೆಯಾಗಿದೆ. ನೇಹಾ ಅವರ ಜೀವನದ ವಿವಿಧ ಹಂತಗಳನ್ನು ಆಲ್ಬಂ ಸಾಂಗ್​ನಲ್ಲಿ ಚಿತ್ರಿಸಲಾಗಿದೆ. ಬಾಲಕಿಯಾಗಿರುವ ನೇಹಾ, ತನ್ನ ಸಹಪಾಠಿಯ ರಕ್ಷಣೆ ಮಾಡುವುದು, ನಂತರ ಕಾಲೇಜಿನಲ್ಲೂ ಅದೇ ರೀತಿ ರಕ್ಷಣೆಗೆ ನಿಲ್ಲುವುದು ಹಾಡಿನ ಮೊದಲ ಭಾಗ. ನಂತರ ನೇಹಾ ಮತ್ತು ರೋಹನ್​ಪ್ರೀತ್​ ದಾಂಪತ್ಯಕ್ಕೆ ಕಾಲಿಡುತ್ತಾರೆ. ನೇಹಾ ಗರ್ಭಿಣಿಯಾಗುತ್ತಾಳೆ. ಗರ್ಭವತಿ ನೇಹಾಳನ್ನು ಪ್ರೀತಿಯಿಂದ ಆರೈಕೆ ಮಾಡುವ ರೋಹನ್​ ಅಪಘಾತದಲ್ಲಿ ಮೃತರಾಗುತ್ತಾರೆ.

    ಇದನ್ನೂ ಓದಿ: ಪಾರ್ಟಿ ತ್ಯಜಿಸಿ, ಬಿಜೆಪಿ ಸೇರಿದ್ದ ನಾಯಕನನ್ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಕಾಂಗ್ರೆಸ್​!

    ನೇಹಾಳ ಪತಿ ಸಾವಿನ ನಂತರ ಮತ್ತೊಮ್ಮೆ ನೇಹಾಳ ಮಗುವಾಗಿ ಜನಿಸುತ್ತಾರೆ. ಮಗ ಸ್ನೇಹಿತರೊಂದಿಗೆ ಕೆಟ್ಟ ಚಟ ಕಲಿತಾಗಲೂ ಮಧ್ಯೆ ಬರುವ ನೇಹಾ, ಆತನನ್ನು ರಕ್ಷಿಸಿಕೊಳ್ಳುತ್ತಾಳೆ. ಇದು ನೇಹಾ ಅವರ ಅಪನಾ ಕಯಾಲ್​ ರಖನಾ ಕರ್​ ಹಾಡಿನಲ್ಲಿರುವ ಸಣ್ಣ ಕಥೆ. ಈ ಹಾಡಿಗೋಸ್ಕರವೇ ನೇಹಾ ಇತ್ತೀಚೆಗೆ ಗರ್ಭವತಿ ವೇಷ ಧರಿಸಿದ್ದರು. ಅದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅಭಿಮಾನಿಗಳಿಗೆ ಶಾಕ್​ ನೀಡಿದ್ದರು.

    ನೇಹಾ ಅವರು ಹಾಡು ಮಂಗಳವಾರದಂದು ಯೂಟ್ಯೂಬ್​ನಲ್ಲಿ ಬಿಡುಗಡೆಗೊಂಡಿದ್ದು, ಟಾಪ್​ 1 ಸ್ಥಾನದಲ್ಲಿ ಕಾಣಿಸಿಕೊಂಡಿದೆ. (ಏಜೆನ್ಸೀಸ್​)

    ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts