ಮತದಾರರ ಪಟ್ಟಿಗೂ ಆಧಾರ್ ಸಂಖ್ಯೆ ನೋಂದಣಿ

Election Commission of India
Published on

ತುಮಕೂರು: ಮತದಾರರ ಪಟ್ಟಿಯಲ್ಲಿರುವ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಹೆಸರು, ವಿಳಾಸ ಇತ್ಯಾದಿಗಳನ್ನು ದೃಢೀಕರಿಸಲು ಆಧಾರ್ ಸಂಖ್ಯೆ ನೋಂದಣಿಗೆ ಭಾರತ ಚುನಾವಣಾ ಆಯೋಗ ಸೂಚಿಸಿದೆ.

ಆಧಾರ್ ಸಂಖ್ಯೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಮೂನೆ-6ಬಿ ರಲ್ಲಿ ಆಧಾರ ಸಂಖ್ಯೆಯನ್ನು ಭರ್ತಿ ಮಾಡಿ ದೃಢೀಕರಿಸಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮತದಾರರಿಗೆ ಮನವಿ ಮಾಡಿದ್ದಾರೆ.

ಆಧಾರ್ ಸಂಖ್ಯೆ ದೃಢೀಕರಣ ಕಾರ್ಯ 2022 ಆ.1ರಿಂದ ಮಾರ್ಚ್ 31, 2023ರ ವರೆಗೆ ನಡೆಯಲಿದೆ.

ರಾಷ್ಟಿçÃಯ ಮತದಾರರ ಸೇವಾ ಪೋರ್ಟಲ್ ಆಪ್‌ನಲ್ಲಿ ಆನ್‌ಲೈನ್ ಮತದಾರರೇ ಖುದ್ದು, ನಮೂನೆ-6ಬಿ ಭರ್ತಿ ಮಾಡಿ ಸಲ್ಲಿಸಲು ಅವಕಾಶವಿದೆ.

ಆಫ್‌ಲೈನ್ ಮೂಲಕ ದೃಢೀಕರಣ ನೀಡಲಿಚ್ಛಿಸುವ ಮತದಾರರು ನಮೂನೆ-6ಬಿಯನ್ನು ಭರ್ತಿಮಾಡಿ ಆಧಾರ್ ಕಾರ್ಡ್, ಮತ್ತು ಇತರೆ ದಾಖಲಾತಿಗಳ ಪ್ರತಿಯೊಂದಿಗೆ ಸಂಬAಧಿಸಿದ ಬಿಎಲ್‌ಒಗಳಿಗೆ ಸಲ್ಲಿಸಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net