ಡಾ.ಶ್ರೀಹರ್ಷ ಸೋರಲಮಾವು
ಡಾ.ಶ್ರೀಹರ್ಷ ಸೋರಲಮಾವು ಅವರು ವಿಜಯವಾಣಿ ತುಮಕೂರು ಜಿಲ್ಲಾ ವರದಿಗಾರನಾಗಿ ಕಳೆದ 13 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ತುಮಕೂರು ವಿವಿ ಸಮಾಜಕಾರ್ಯ ವಿಭಾಗದಲ್ಲಿ ಪಿಎಚ್.ಡಿ.ಪದವಿ ಪೂರ್ಣಗೊಳಿಸಿರುವ ಶ್ರೀಹರ್ಷ ಚಿಕ್ಕನಾಯಕನಹಳ್ಳಿ ತಾಲೂಕು ಸೋರಲಮಾವು ಗ್ರಾಮದವರು. ಗ್ರಾಮೀಣಾಭಿವೃದ್ಧಿ, ಸಮಾಜಕಾರ್ಯ, ಶಿಕ್ಷಣ, ಸಾಹಿತ್ಯ, ಕ್ರೀಡೆ, ರಾಜಕೀಯ ಹಾಗೂ ಮಾನವಾಸಕ್ತ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಅಭಿವೃದ್ಧಿ ಪತ್ರಿಕೋದ್ಯಮಕ್ಕೆಆದ್ಯತೆ ನೀಡಿದ್ದಾರೆ.