ಪಾವಗಡ: ರಾಜ್ಯ ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳನ್ನು ಮನೆಬಾಗಿಲಲ್ಲೇ ಪರಿಹರಿಸಲು 'ಪ್ರಜಾಸೇವಾ ಯೋಜನೆ' ಜಾರಿಗೆ ತಂದಿದ್ದು, ನಾಗಲಮಡಿಕೆಯಲ್ಲಿ ಎರಡನೇ ಪ್ರಜಾಸೇವಾ ಕಾರ್ಯಕ್ರಮವು ಅಧಿಕಾರಿಗಳ ನಿರ್ಲಕ್ಷ್ಯದಿಂದ 12 ಗಂಟೆಯಾದರೂ ಪ್ರಾರಂಭವಾಗಿಲ್ಲಾ.
ತಾಲ್ಲೂಕಿನ ನಾಗಲಮಡಿಕೆಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಎರಡನೇ ಪ್ರಜಾಸೇವಾ ಆಂದೋಲನೆ ಸಭೆಗೆ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ದೂರು ಅರ್ಜಿ ಹಿಡಿದು ಕಾದುಕುಳಿತರು ತಾಲ್ಲೂಕು ಆಡಳಿತ ಮಾತ್ರ ಪ್ರಜಾಸೇವಾ ಕಾರ್ಯಕ್ರಮದ ಪ್ರೋಟೊಕಾಲ್ ನ್ನು ಮರೆತಿದೆ.
ಜನಸಾಮಾನ್ಯರು ತಮ್ಮ ಸಣ್ಣಪುಟ್ಟ ಕೆಲಸಗಳು, ಪಿಂಚಣಿ, ಪಹಣಿ, ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸಾಲ ಸೌಲಭ್ಯ ತ್ವರಿತವಾಗಿ ಸಿಗುವ ಆಸೆಯಿಂದ ಬಂದ ಸಾರ್ವಜನಿಕರಿಗೆ ತಹಶೀಲ್ದಾರ್, ಶಾಸಕರು ಯಾವೊಬ್ಬ ಅಧಿಕಾರಿಯೂ ಸಭೆಗೆ ಹಾಜರಾಗದಿರುವುದರಿಂದ ನಿರಾಸೆ ಉಂಟಾಗಿದೆ.
ನಾನಾ ಇಲಾಖೆಗಳ ಸಮಸ್ಯೆಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಮನೆಬಾಗಿಲಲ್ಲೇ ಅಹವಾಲುಗಳನ್ನು ಆಲಿಸಿ ಕಾಲಮಿತಿಯಲ್ಲಿ ಪರಿಹರಿಸಲು ಸರ್ಕಾರ ರೂಪಿಸಿರುವ ಹೊಸ ವ್ಯವಸ್ಥೆಯೇ ಪ್ರಜಾಸೇವಾ ಸಕಾಲದಲ್ಲಿ ಪ್ರಾರಂಭವಾಗದೇ ಸಾರ್ವಜನಿಕರಲ್ಲಿ ನಿರಾಸೆ ಉಂಟಾಗಿ ಒಬ್ಬೊಬ್ಬರಾಗಿಯೇ ಮನೆ ಕಡೆ ತೆರಳುತ್ತಿದ್ದಾರೆ.