ವೋಟರ್​ಐಡಿ-ಆಧಾರ್ ಲಿಂಕ್; ಚುನಾವಣಾ ವ್ಯವಸ್ಥೆ ಬಲವೃದ್ಧಿ, ಮಸೂದೆ ಮಂಡನೆಗೆ ಸಿದ್ಧತೆ

fdsfsdfsgsgsg
Published on

ವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಕೇಂದ್ರ ಸರ್ಕಾರವು ಮತದಾರರ ಗುರುತಿನ ಚೀಟಿಯಾಗಿ ಆಧಾರ್ ಬಳಕೆ ಸೇರಿ ನಾಲ್ಕು ಮಹತ್ವದ ಸುಧಾರಣಾ ಕ್ರಮವನ್ನು ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಹಾಲಿ ಸಂಸತ್ ಅಧಿವೇಶನದಲ್ಲೇ ಮಸೂದೆಯನ್ನು ಮಂಡಿಸಲಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಮತದಾರರ ಪಟ್ಟಿ ಪರಿಷ್ಕರಣೆ, ಮತದಾನ ಪ್ರಕ್ರಿಯೆಯಲ್ಲಿ ಎಲ್ಲರ ಭಾಗವಹಿಸುವಿಕೆ, ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ, ಡೂಪ್ಲಿಕೇಟ್ ಆಗುವುದನ್ನು ತಪ್ಪಿಸುವ ಅಂಶವೂ ಇದರಲ್ಲಿ ಅಡಗಿದೆ. ಪ್ಯಾನ್-ಆಧಾರ್ ಜೋಡಿಸಿದಂತೆ, ಮತದಾರರ ಗುರುತಿನ ಚೀಟಿ ಅಥವಾ ಇಲೆಕ್ಟೋರಲ್ ಕಾರ್ಡ್ ಅನ್ನೂ ಆಧಾರ್​ಗೆ ಜೋಡಿಸುವ ಕೆಲಸ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಇದಕ್ಕೆ ಸಂಬಂಧಿಸಿದ ಪ್ರಾಯೋಗಿಕ ಯೋಜನೆ ಅನುಷ್ಠಾನವಾಗಿದ್ದು, ಅದರ ಫಲಿತಾಂಶವೂ ಯಶಸ್ವಿಯಾಗಿದೆ. ಮತದಾರರ ಪಟ್ಟಿ ಬಲಪಡಿಸಲು ಮತ್ತು ಅದರಲ್ಲಿ ಡೂಪ್ಲಿಕೇಶನ್ ಅನ್ನು ಇದು ತಪ್ಪಿಸಲು ಸಹಕಾರಿ.

4 ಬಾರಿ ಸೇರ್ಪಡೆಗೆ ಅವಕಾಶ: ಮುಂದಿನ ವರ್ಷ ಜನವರಿ 1ರಿಂದ ಮತದಾರರ ಪಟ್ಟಿಗೆ ಹೊಸ ಮತದಾರರ (18 ವರ್ಷ ತುಂಬಿದವರು) ಸೇರ್ಪಡೆಗೆ ವರ್ಷಕ್ಕೆ ನಾಲ್ಕು ಸಲ ನಿಶ್ಚಿತ ಗಡುವಿನೊಳಗೆ ಅವಕಾಶ ನೀಡಲಾಗುತ್ತದೆ. ಪ್ರಸ್ತುತ ಇದು ವರ್ಷಕ್ಕೆ ಒಂದು ಸಲ ಮಾತ್ರ ಸಾಧ್ಯವಿದೆ.

ಮತದಾನ ಕೇಂದ್ರಗಳ ನಿರ್ಧಾರ: ಮತದಾನ ಕೇಂದ್ರಗಳಾಗಿ ಶಿಕ್ಷಣ ಸಂಸ್ಥೆಗಳ ಆವರಣ ವನ್ನು ಬಳಸುವುದಕ್ಕೆ ಕೆಲವೊಮ್ಮೆ ವಿರೋಧ ಗಳು ವ್ಯಕ್ತವಾಗುತ್ತವೆ. ಇಂತಹ ಸನ್ನಿವೇಶದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಸಿಗಲಿದೆ.

ಯುಪಿಐ ಮತ್ತು ರುಪೇ ಡೆಬಿಟ್: ಕಾರ್ಡ್​ಗಳನ್ನು ಬಳಸಿಕೊಂಡು ಡಿಜಿಟಲ್ ಮೂಲಕ ನಡೆಸಲಾದ ವಹಿವಾಟಿಗೆ 1,300 ಕೋಟಿ ರೂಪಾಯಿ ಮರುಪಾವತಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರಿಂದ ಹೆಚ್ಚೆಚ್ಚು ಜನರು ಜನರು ಡಿಜಿಟಲ್ ಪಾವತಿಗೆ ಮುಂದಾಗಲಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ನವೆಂಬರ್​ನಲ್ಲಿ 7.56 ಲಕ್ಷ ಕೋಟಿ ರೂ. ಮೌಲ್ಯದ 423 ಕೋಟಿ ಡಿಜಿಟಲ್ ವಹಿವಾಟು ನಡೆದಿದೆ. ಅನುಮೋದಿತ ಯೋಜನೆಯು ರೂಪೇ ಡೆಬಿಟ್ ಕಾರ್ಡ್​ಗಳು ಮತ್ತು ಭೀಮ್​ಚಞಟ;ಯುಪಿಐ ಬಳಸಿಕೊಂಡು 2000 ರೂ. ವರೆಗಿನ ಮರುಪಾವತಿ ಸಿಗುವ ವ್ಯವಸ್ಥೆಯೂ ಇದೆ ಎಂದು ಸಚಿವರು ಹೇಳಿದ್ದಾರೆ.

76 ಸಾವಿರ ಕೋಟಿ ರೂ. ನೆರವು: ಭಾರತವನ್ನು ವಿದ್ಯುನ್ಮಾನ ವ್ಯವಸ್ಥೆ ಮತ್ತು ಉತ್ಪಾದನೆಯ ಜಾಗತಿಕ ತಾಣವಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸುಸ್ಥಿರ ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ಉತ್ಪಾದನಾ ವಲಯ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದೆ. ಇದಕ್ಕೆ ಪಿಎಲ್​ಐ ಯೋಜನೆ ಅಡಿ 76 ಸಾವಿರ ಕೋಟಿ ರೂಪಾಯಿಗಳ ನೆರವು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಸಮ್ಮತಿಸಿದೆ. ಯೋಜನೆಯು ಸೆಮಿ ಕಂಡಕ್ಟರ್​ಗಳು ಮತ್ತು ಡಿಸ್ ಪ್ಲೇ ಉತ್ಪಾದನೆ ಮತ್ತು ವಿನ್ಯಾಸದ ಕಂಪನಿಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಪೋ›ತ್ಸಾಹಕ ಪ್ಯಾಕೇಜ್ ಒದಗಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ಕೇಂದ್ರ ಹೇಳಿದೆ.

ಸಬ್ ಅಸೆಂಬ್ಲಿಗಳು ಮತ್ತು ಸಿದ್ಧವಸ್ತುಗಳು ಸೇರಿದಂತೆ ಪೂರೈಕೆ ಸರಪಳಿಯ ಪ್ರತಿಯೊಂದು ಭಾಗಕ್ಕೂ ಪೋ›ತ್ಸಾಹಕಗಳನ್ನು ಘೊಷಿಸಲಾಗಿದೆ. ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಐಟಿ ಯಂತ್ರಾಂಶಕ್ಕಾಗಿ ಪಿಎಲ್​ಐ, ಎಸ್.ಪಿ. ಇ.ಸಿ.ಎಸ್. ಯೋಜನೆ ಮತ್ತು ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಗುಚ್ಛಗಳು (ಇಎಂಸಿ 2.0) ಯೋಜನೆಗೆ ಪಿಎಲ್​ಐ ಅಡಿಯಲ್ಲಿ 55,392 ಕೋಟಿ ರೂ.ಗಳ ಪೋ›ತ್ಸಾಹಕ ಬೆಂಬಲವು ಈ ಅನುಮೋದನೆ ಒಳಗೊಂಡಿದೆ. ಎಸಿಸಿ ಬ್ಯಾಟರಿ, ವಾಹನ ಘಟಕಗಳು, ಟೆಲಿಕಾಂ ಮತ್ತು ನೆಟ್​ವರ್ಕಿಂಗ್ ಉತ್ಪನ್ನಗಳು, ಸೌರ ಪಿವಿ ಮಾಡ್ಯೂಲ್​ಗಳು ಒಳಗೊಂಡ ಸಂಬಂಧಿತ ವಲಯಗಳಿಗೆ 98,000 ಕೋಟಿ ರೂ.ಗಳ ಪಿಎಲ್.ಐ ಪೋ›ತ್ಸಾಹಕಗಳನ್ನು ಅನುಮೋದಿಸಲಾಗಿದೆ. ಒಟ್ಟಾರೆಯಾಗಿ, ಸೆಮಿ ಕಂಡಕ್ಟರ್​ಗಳನ್ನು ಮೂಲಾಧಾರವಾಗಿ ಹೊಂದಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ತಾಣವಾಗಿ ಭಾರತವನ್ನು ಸಾಂಸ್ಥೀಕರಿಸಲು ಭಾರತ ಸರ್ಕಾರವು 2,30,000 ಕೋಟಿ ರೂ. ಬೆಂಬಲಕ್ಕೆ ಬದ್ಧವಾಗಿದೆ ಎಂದು ಕೇಂದ್ರ ವಿವರಿಸಿದೆ.

ಸೆಮಿಕಂಡಕ್ಟರ್ ವಿನ್ಯಾಸ ಕಂಪನಿಗಳು: ವಿನ್ಯಾಸ ಸಂರ್ಪತ ಪೋ›ತ್ಸಾಹಕ (ಡಿಎಲ್​ಐ) ಯೋಜನೆಯು ಐದು ವರ್ಷಗಳವರೆಗೆ ನಿವ್ವಳ ಮಾರಾಟದ ಮೇಲೆ ಶೇ.6 ಶೇ.4 ಅರ್ಹ ವೆಚ್ಚದ ಶೇ.50 ವರೆಗೆ ಉತ್ಪನ್ನ ವಿನ್ಯಾಸ ಸಂರ್ಪತ ಪೋ›ತ್ಸಾಹಕವನ್ನು ಮತ್ತು ಉತ್ಪನ್ನ ನಿಯೋಜನೆ ಸಂರ್ಪತ ಪೋ›ತ್ಸಾಹಕವನ್ನು ವಿಸ್ತರಿಸುತ್ತದೆ. ಪಿಎಂ ಕಿಸಾನ್ ಸಿಂಚಾಯೀ ಯೋಜನೆಯನ್ನು 2021-26ರವರೆಗೆ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ. 

ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಡಿಸ್ ಪ್ಲೇ ಫ್ಯಾಬ್ಸ್: ದೇಶದಲ್ಲಿ ಕನಿಷ್ಠ ಎರಡು ಹಸಿರು ವಲಯ ಸೆಮಿಕಂಡಕ್ಟರ್ ಫ್ಯಾಬ್​ಗಳು ಮತ್ತು ಎರಡು ಡಿಸ್ ಪ್ಲೇ ಫ್ಯಾಬ್​ಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಅನುಮೋದಿಸಲು ಭೂಮಿ, ಸೆಮಿಕಂಡಕ್ಟರ್ ಗ್ರೇಡ್ ಜಲ, ಉತ್ತಮ ಗುಣಮಟ್ಟದ ವಿದ್ಯುತ್, ಸಾಗಣೆ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯ ದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳೊಂದಿಗೆ ಹೈಟೆಕ್ ಗುಚ್ಛಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಕೆಲಸ ಮಾಡಲಿದೆ.

ಕಂಡಕ್ಟರ್ ಪ್ರಯೋಗಾಲಯ (ಎಸ್.ಸಿಎಲ್): ಸೆಮಿ-;ಕಂಡಕ್ಟರ್ ಪ್ರಯೋಗಾಲಯದ ಆಧುನೀಕರಣ ಮತ್ತು ವಾಣಿಜ್ಯೀಕರಣಕ್ಕೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net