ಹಂಪಿ ಸ್ಮಾರಕಗಳ ಬಗ್ಗೆ ಅವಹೇಳನ; ಸ್ಟಾಂಡ್ ಅಪ್​ ಕಾಮಿಡಿಯನ್ ವಿರುದ್ದ ದೂರು ದಾಖಲು

dfgdfgdgfdfg
Published on

ವಿಜಯನಗರ: ವಿಶ್ವ ವಿಖ್ಯಾತ ಹಂಪಿ ಸ್ಮಾರಕಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆ, ಬೆಂಗಳೂರು ಮೂಲದ ಕಾಮಿಡಿಯನ್ (ಹಾಸ್ಯನಟ)ಗೆ ಸಂಕಷ್ಟ ಎದುರಾಗಿದೆ.

ಐತಿಹಾಸಿಕ ಸ್ಮಾರಕ, ವಿಶ್ವ ಪಾರಂಪರಿಕ ತಾಣ ಹಂಪಿಯ ಸಂಗೀತ ಕಂಬಗಳು ಮತ್ತು ಇತರ ಕಟ್ಟಡಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಈ ಬಗ್ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು.

ವಿಜಯನಗರ ಸ್ಮಾರಕ ಸಂರಕ್ಷಣಾ ಸಮಿತಿ ಮತ್ತು ವಿದ್ಯಾರಣ್ಯ ಗೈಡ್ಸ್ ಅಸೋಸಿಯೇಷನ್ ನಿಂದ ದೂರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಪಿ. ಶ್ರವಣ್ ವಿರುದ್ಧ ಹಂಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಂಪಿ ಪೊಲೀಸರು ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net