

ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆ ನಾಳೆ ನಡೆಯಲಿದೆ. ನಾಲ್ಕು ವರ್ಷಗಳಿಂದ ಜೈಲುವಾಸ ಅನುಭವಿಸಿ ಬಂದಿರುವ ವಿ.ಕೆ.ಶಶಿಕಲಾ ಎಎಂಎಂಕೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ. ಚುನಾವಣೆಗೆ ಒಂದು ದಿನವಿರುವಾಗಲೇ ರಾಜ್ಯದಲ್ಲಿ ಮತ್ತೊಂದು ಕುತೂಹಲಕಾರಿ ಘಟನೆಯಾಗಿದೆ.
ಶಶಿಕಲಾ ಅವರ ಹೆಸರನ್ನು ಮತದಾರರ ಪಟ್ಟಿಯಿಂದಲೇ ಕೈಬಿಡಲಾಗಿದೆ. ಸುಮಾರು 20 ವರ್ಷಗಳಿಂದ ಶಶಿಕಲಾ ಅವರು ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಮತದಾನ ಮಾಡುತ್ತಿದ್ದರು. ಆದರೆ ಈ ಫೋಯೆಸ್ ಗಾರ್ಡನ್ನಲ್ಲಿದ್ದ ಶಶಿಕಲಾ ಅವರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅದಾದ ನಂತರ ಅವರ ಹೆಸರನ್ನು ಅಲ್ಲಿನ ವೋಟರ್ ಲಿಸ್ಟ್ನಿಂದ ಕೈ ಬಿಟ್ಟಿರುವುದಾಗಿ ಹೇಳಲಾಗಿದೆ.
ನಾಳೆ ಮತದಾನವಿದ್ದು, ಇಂದು ಈ ವಿಚಾರ ಬೆಳಕಿಗೆ ಬಂದಿದೆ. ಈ ಕೆಲಸದ ಹಿಂದೆ ಎಐಡಿಎಂಕೆ ಪಕ್ಷದ ಕೈವಾಡವಿದೆ ಎಂದು ಎಎಂಎಂಕೆ ಪಕ್ಷ ಆರೋಪಿಸಿದೆ. (ಏಜೆನ್ಸೀಸ್)