

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ನ ಟಾಪ್ ನಟರಲ್ಲಿ ಒಬ್ಬರು ಇವರು. ಮದುವೆಗೆ ಮೊದಲಿನ ತಮ್ಮ ಸಂಬಂಧಗಳ ಬಗ್ಗೆ ನಟ ವಿವೇಕ್ ಒಬೆರಾಯ್ ಬಹಿರಂಗಪಡಿಸಿದ್ದಾರೆ. ಬ್ರೇಕಪ್ ಆಗುವುದು ಇಷ್ಟಪಡದ ಕಾರಣ ನಾನು ಯಾವುದೇ ಸಿರಿಯಸ್ ರಿಲೇಷನ್ ಶಿಪ್ಗೆ ಬದ್ಧನಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿವೇಕ್ ಒಬೆರಾಯ್ ನಾನು ಕಾಲೇಜಿನಲ್ಲಿರುವಾಗಲೇ ಪ್ರೀತಿ ವಿಚಾರವಾಗಿ ತುಂಬಾ ಸ್ಪಷ್ಟವಾಗಿದ್ದೆ. ವ್ಯಾಪಾರ ಆರಂಭಿಸಿದ್ದೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೆ. ನನಗೆ ಸಮಯವಿರಲಿಲ್ಲ. ಯಾವುದೇ ದೀರ್ಘಾವಧಿಯ ಸಂಬಂಧದ ಬದ್ಧತೆ ನನ್ನಲಿಲ್ಲ. ಆ ರೀತಿಯ ಸಂಬಂಧವನ್ನು ಹೊಂದುವ ಆಸಕ್ತಿಯ ನನಗಿಲ್ಲ ಎಂದು ಕಾಲೇಜಿನಲ್ಲಿದ್ದ ನನ್ನ ಜತೆ ಕ್ಲೋಸ್ ಆಗಿದ್ದ ಗೆಳತಿಯರಿಗೂ ಸ್ಪಷ್ಟವಾಗಿ ಹೇಳಿದ್ದೆ. ಇದಕ್ಕೆ, ಬಾಲ್ಯದಲ್ಲಿನ ನನ್ನ ಆತ್ಮೀಯ ಸ್ನೇಹಿತೆಯು ಕ್ಯಾನ್ಸರ್ನಿಂದ ಮೃತಪಟ್ಟಿದ್ದು ಇನ್ನೊಂದು ಕಾರಣವಾಗಿರಬಹುದು ಎಂದು ಹೇಳಿದರು.
ಅದಷ್ಟೆ ಅಲ್ಲದೆ ಬ್ರೇಕಪ್ ಪದೇಪದೆ ಸಂಭವಿಸುವುದು ನನಗೆ ಇಷ್ಟವಿರುವುದಿಲ್ಲ. ಯಾವುದೇ ಆಳವಾದ ಮತ್ತು ದೀರ್ಘಾವಧಿಯ ಸಂಬಂಧ ಕೆಲಸ ಮಾಡುವುದಿಲ್ಲ ಎಂದು ನಾನು ನಿರ್ಧರಿಸಿದೆ. ನನಗೆ ಪರಿಚಯವಾದ ಅನೇಕರನ್ನು ನನ್ನ ಗೆಳತಿಯರು ಎಂದು ನಾನು ಪರಿಗಣಿಸುವುದಿಲ್ಲ. ಆದರೆ ನಾನು ಪ್ರೀತಿಸಿದಾಗ ಯಾವಾಗಲೂ ಪ್ರಾಮಾಣಿಕನಾಗಿರುತ್ತೇನೆ. ಯಾರಿಗೂ ಮೋಸ ಮಾಡಿಲ್ಲ. ಪಾರದರ್ಶಕವಾಗಿ, ನಿಜವಾಗಿದ್ದೇನೆ ಎಂದು ತಿಳಿಸಿದರು.
ಈ ಹಿಂದೆ ಸಂದರ್ಶನವೊಂದರಲ್ಲಿ, ವಿವೇಕ್ ಅವರ ಮದುವೆಯಲ್ಲಿ ಅವರ ಮಾಜಿ ಗೆಳತಿಯರೆಲ್ಲಾ ಪಾಲ್ಗೊಂಡಿದ್ದರು ಎಂಬ ವಿಷಯಕ್ಕೆ ನನಗೆ ಪರಿಚಯರಾದವರಲ್ಲಿ ಕೆಲವರು ನನಗೆ ಸ್ನೇಹಿತರಾಗಿದ್ದರು ಅವರು ನನ್ನ ವಿಶೇಷ ದಿನದಂದು ಉಪಸ್ಥಿತರಿದ್ದರು ಎಂದು ಹೇಳಿದ್ದರು.
ವಿವೇಕ್ ಹಿರಿಯ ನಟ ಸುರೇಶ್ ಒಬೆರಾಯ್ ಮತ್ತು ಯಶೋಧರ ಪುತ್ರ. ಅವರ ಮೂಲ ಹೆಸರು ವಿವೇಕಾನಂದ. ಅವರು 2010 ಅಕ್ಟೋಬರ್ 29ರಂದು ಕರ್ನಾಟಕದ ಸಚಿವ ಜೀವರಾಜ್ ಆಳ್ವ ಅವರ ಪುತ್ರಿ ಪ್ರಿಯಾಂಕಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರಿಗೀಗಾ ವಿವಾನ್ ಮತ್ತು ಅಮೆಯಾ ಎಂಬ ಇಬ್ಬರು ಮಕ್ಕಳಿದ್ದಾರೆ.(ಏಜೆನ್ಸೀಸ್)