'ಸಲಾರ್' ರಿಲೀಸ್​​ ದಿನವೇ 'ದ ವ್ಯಾಕ್ಸಿನ್ ವಾರ್'!; ಈ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದೇನು?

Untitled design - 2023-07-27T194954.400
Published on

ಮುಂಬೈ: 'ದ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದ ವ್ಯಾಕ್ಸಿನ್ ವಾರ್' ಬಗ್ಗೆ ತೀವ್ರ ಕುತೂಹಲ ಕೆರಳಿದ್ದು, ಈ ಮಧ್ಯೆ ಇದೀಗ ಹೊಸ ಗೊಂದಲವೊಂದು ಸೃಷ್ಟಿಯಾಗಿದೆ.

ರೆಬಲ್​ ಸ್ಟಾರ್​ ಪ್ರಭಾಸ್​ ನಟನೆಯ ಬಹುನಿರೀಕ್ಷಿತ 'ಸಲಾರ್' ಚಿತ್ರದ ಬಿಡುಗಡೆ ದಿನದಂದೇ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ 'ದ ವ್ಯಾಕ್ಸಿನ್ ವಾರ್' ರಿಲೀಸ್​​ ಆಗಲಿದೆ ಎಂಬ ವದಂತಿ ಚಿತ್ರರಂಗದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ಹಿಂದೆ ಕಾಶ್ಮೀರ್​​ ಫೈಲ್ಸ್​ ಪ್ರಭಾಸ್​ ನಟನೆಯ ರಾಧೆಶ್ಯಾಮ್​ ಚಿತ್ರದೊಂದಿಗೆ ಪೈಪೋಟಿ ನೀಡಿತ್ತು. ಇದೀಗ ಸಲಾರ್ ಜತೆಗೆ ರಿಲೀಸ್​ ಮಾಡುವ ಮುಖೇನ ಪ್ರಭಾಸ್​ಗೆ ಮತ್ತೊಮ್ಮೆ ಸವಾಲು ಹಾಕಲು ಸಿದ್ಧರಿದ್ದಾರೆ ಎಂಬ ಸುದ್ದಿಗೆ ಇದೀಗ ಸ್ವತಃ ನಿರ್ದೇಶಕ ವಿವೇಕ್​ ಅವರೇ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ವಿವೇಕ್​ ಅಗ್ನಿಹೋತ್ರಿ, "ನಾನು ಪ್ಯಾನ್ ಇಂಡಿಯಾ ಸ್ಟಾರ್ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ. ನಕಲಿ ಉಲ್ಲೇಖಗಳನ್ನು ಆರೋಪಿಸುವ ಇಂತಹ ಸುಳ್ಳು ಸುದ್ದಿಯನ್ನು ಯಾರು ಹರಡುತ್ತಿದ್ದಾರೆ? ಪ್ರಭಾಸ್ ಅವರನ್ನು ನಾನು ಗೌರವಿಸುತ್ತೇನೆ. ನಮ್ಮದು ದೊಡ್ಡ ಬಜೆಟ್​ ಚಿತ್ರಗಳಲ್ಲ. ಸಣ್ಣ-ಬಜೆಟ್ ಸಿನಿಮಾಗಳು. ನಮ್ಮ ನಡುವೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ಇದನ್ನು ಬಿಟ್ಟು ಬಿಡಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net