ಬಾಗಲಕೋಟೆ ಉಪ ವಿಭಾಗಾಽಕಾರಿಗಳ ಕಚೇರಿ, ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದೆ. ಈ ವೇಳೆ ಮೂರು ಜನ ಮಹಿಳಾ ಸಿಬ್ಬಂದಿ, ಓರ್ವ ಪುರಷ ಸಿಬ್ಬಂದಿ ಪೋನ್ ಫೆನಲ್ಲಿ ಹಣ ವರ್ಗಾವಣೆ ಅನುಮಾನ ಮೂಡಿಸಿದೆ. ಫೆ.೨೪ ರಂದು ೧,೫೦,೦೦೦, ಮಾರ್ಚನಲ್ಲಿ ೪,೮೦,೦೦೦, ಮೇ ನಲ್ಲಿ ೩,೦೦,೦೦೦, ನವೆಂಬರನಲ್ಲಿ ೨,೦೦,೦೦೦ ಲಕ್ಷ ರೂ. ಹಣ ವರ್ಗಾವಣೆ ಆಗಿದೆ. ಸಿಬ್ಬಂದಿಗಳಲ್ಲಿ ತಮ್ಮ ತಮ್ಮಲಿಯೇ ಹಣವು ವರ್ಗಾವಣೆ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೇ ಬ್ಯಾಂಕಿನ ಸಾಲ ಅಂತ ಹೇಳುತ್ತಿದ್ದಾರೆ. ಹೀಗಾಗಿ ಕಳೆದ ೨ ವರ್ಷದ ಬ್ಯಾಂಕ್ ಹಣ ವರ್ಗಾವಣೆ ವರದಿ ಪಡೆದುಕೊಳ್ಳುವಂತೆ ಹಾಗೂ ಸಾಲಕ್ಕೆ ಪರವಾಣಿಗೆ ಪಡೆದುಕೊಂಡಿದ್ದಾರೇ ಅಂತ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ ಅಂತ ತಿಳಿಸಿದರು.