ಅಂದು ವಿದೇಶದಲ್ಲಿ ಯುವತಿ ಜತೆ ಸಿಕ್ಕಿಬಿದ್ದ ಖ್ಯಾತ ನಟ ಇಂದು ಗಳಗಳನೆ ಕಣ್ಣೀರಿಟ್ಟ; ಕಾರಣ ಮಾತ್ರ ವಿಭಿನ್ನ...

vishal
Published on

ಬೆಂಗಳೂರು: ಟಾಲಿವುಡ್​ನ ಖ್ಯಾತ ನಟ ವಿಶಾಲ್ ವಿದೇಶದಲ್ಲಿ ಯುವತಿ ಜತೆ ಸುತ್ತಾಡುತ್ತಿದ್ದಾರೆ ಎನ್ನುವ ವಿಡಿಯೋವೊಂದು ಕಳೆದ ಮೂರು ದಿನಗಳಿಂದ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ಕುರಿತಾಗಿ ಸೋಶಿಯಲ್​ ಮೀಡಯಾದಲ್ಲಿ ಚರ್ಚೆ ಕೂಡಾ ಆಗುತ್ತಿತ್ತು. ಈ ಕುರಿತಾಗಿ ನಟ ವಿಶಾಲ್​ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದೀಗ ನಟ ವಿಶಾಲ್ ಗಳಗಳನೆ ಕಣ್ಣೀರಿಟ್ಟ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ನಟ ವಿಶಾಲ್ ನ್ಯೂ ಯಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ನಟ ವಿಶಾಲ್ ಕೂಡ ಗೆಳತಿ ಜೊತೆ ನೈಟ್ ವಾಕ್ ​ ಮಾಡಿಕೊಂಡು ಬರುತ್ತಿದ್ದಾಗ, ಪಾದಾಚಾರಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕ್ಯಾಮೆರಾ ನೋಡುತ್ತಿದ್ದಂತೆ ವಿಶಾಲ್ ತಮ್ಮ ಮುಖ ಮಾತ್ರವಲ್ಲದೆ ಆ ಗೆಳತಿ ಮುಖ ಕೂಡ ಮುಚ್ಚಿಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿತ್ತು.

ನಾನು ನ್ಯೂಯಾರ್ಕ್‌ನಲ್ಲಿದ್ದೇನೆ ಇದು ನಿಜ. ವರ್ಷವಿಡೀ ಕಷ್ಟಪಟ್ಟು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ನಾನು ನ್ಯೂಯಾರ್ಕ್‌ನಲ್ಲಿರುವ ನನ್ನ ಸೋದರಸಂಬಂಧಿ ಇರುವ ಸ್ಥಳಕ್ಕೆ ಹೋಗುತ್ತೇನೆ. ಮತ್ತು ಉಳಿದ ಅರ್ಧವು ತಮಾಷೆಯಾಗಿದೆ. ನಾನು ಮತ್ತು ನನ್ನ ಸೋದರಸಂಬಂಧಿಗಳು ಕ್ರಿಸ್ಮಸ್ ದಿನವನ್ನು ಮೋಜು ಮಾಡಿದ್ದೇವೆ. ಕೆಲವರು ಟಾರ್ಗೆಟ್ ಮಾಡಿ ತುಂಬಾ ಬರೆಯುತ್ತಾರೆ. ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಲವ್ ಯು ಆಲ್ ಎಂದು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದರು. ಆದರೆ ಇದೆ ಬೆನ್ನಲ್ಕೇ ಮತ್ತೊಂಡು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕೆಲವು ದಿನಗಳ ಹಿಂದೆ ಪ್ರಸಿದ್ಧ ನಟ-ರಾಜಕಾರಣಿ ಇಂದು ಚೆನ್ನೈನಲ್ಲಿ ತಮ್ಮ 71 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಈ ಕುರತಾಗಿ ನಟ ವಿಶಾಲ್​ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ.

ವೀಡಿಯೋದಲ್ಲಿ ಏನಿದೆ?: ವಿಶಾಲ್ ಅಳುತ್ತಾ, ಕ್ಯಾಪ್ಟನ್ ವಿಜಯಕಾಂತ್ ನಿಧನರಾದ ಸುದ್ದಿ ಕೇಳಿ ಆಘಾತವಾಯಿತು, ದಯವಿಟ್ಟು ನನ್ನನ್ನು ಕ್ಷಮಿಸಿ, ಈ ಕ್ಷಣದಲ್ಲಿ ನಾನು ನಿಮ್ಮ ಪಕ್ಕದಲ್ಲಿ ಇರಬೇಕಿತ್ತು, ನಿಮ್ಮ ಮುಖವನ್ನು ನೋಡುತ್ತಾ, ನಿಮ್ಮ ಕಾಲು ಮುಟ್ಟಿ ನಮಸ್ಕರಿಸಿ, ಇತರರಿಗೆ ಸಹಾಯ ಮಾಡುವುದು ಸಾಮಾನ್ಯವಲ್ಲ.  ನಿಮ್ಮನ್ನು ನೋಡುವ ಮೂಲಕ ನಾವು ಇತರರಿಗೆ ಸಹಾಯ ಮಾಡಲು ಕಲಿತಿದ್ದೇವೆ ಎಂದು ಹೇಳುತ್ತಾ ಕಣ್ಣೀರು  ಹಾಕಿದ್ದಾರೆ.

ಈ ವಿಡಿಯೋ ಇದೀಗ ವೈರಲ್​ ಆಗಿದ್ದು. ಅಭಿಮಾನಿಗಳು ತರಹೆವಾರಿ ಕಾಮೆಂಟ್​​ ಮಾಡಿದ್ದಾರೆ. ಮೊನ್ನೆ ಹುಡುಗಿ ಜತೆ ಓಡ್ತಾ ಇದ್ದಾ.  ನಂತ್ರ ವಿಡಿಯೋ ವೈರಲ್​ ಆಗುತ್ತಿದ್ದಂತೆ  ಅವಳು ನನ್ನ ಸೋದರಸಂಬಂಧಿ ಟ್ರೋಲ್​ ಮಾಡುವುದು ಬಿಡಿ ಅಂತಾ ಹೇಳಿದಾ ಆದರೆ ಇದೀಗ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾನೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net