More

    ಅಯೋಧ್ಯೆಯಲ್ಲಿ ಡಾ.ಬ್ರೋ; ನ್ಯೂ ಇಯರ್​ನ ಹೊಸ ಹುರುಪಿನೊಂದಿಗೆ ಬ್ರೋ ಈಸ್​​ ಬ್ಯಾಕ್

    ಬೆಂಗಳೂರು: ಡಾ. ಬ್ರೋ ಎನ್ನುವ ಹೆಸರಿನಲ್ಲಿ ಯೂಟ್ಯೂಬ್​ ಖಾತೆ ತೆರೆದು ತಮ್ಮ ವೀಕ್ಷಕರ ಅಭಿರುಚಿಗೆ ತಕ್ಕಂತೆ ದೇಶ-ವಿದೇಶ ಪ್ರವಾಸ ಮಾಡುತ್ತಾ ತನ್ನ ಪ್ರವಾಸ ವಿಡಿಯೋವನ್ನು ಹಂಚಿಕೊಳುತ್ತಿದ್ದ ಯೂಟ್ಯೂಬರ್​ ಡಾ. ಬ್ರೋ ಖ್ಯಾತಿಯ ಗಗನ್​​ ಶ್ರೀನಿವಾಸ್​ ಅವರು ಕಳೆದ ಒಂದು ತಿಂಗಳಿನಿಂದ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಡಾ ಬ್ರೋ ಕೆ ಸೈಲೆಂಟ್‌ ಆಗಿದ್ದಾರೆ? ಚಾನೆಲ್​ನಲ್ಲಿ ಒಂದೇ ಒಂದು ವಿಡಿಯೋ ಕೂಡಾ ಅಪ್ಲೋಡ್ ಆಗುತ್ತಿಲ್ಲ. ಎನ್ನುವ ಎಲ್ಲ ಪ್ರಶ್ನೆಗಳಿಗೆ ಇದೀಗ ಡಾ ಬ್ರೋ ಸರಿಸುಮಾರು 2 ತಿಂಗಳ ನಂತರ ಅವರೇ ಉತ್ತರ ಕೊಟ್ಟಿದ್ದಾರೆ.

    ಡಾ.ಬ್ರೋ ​ ಅವರು ಇದೀಗ ಶ್ರೀರಾಮನ ಪುಣ್ಯಭೂಮಿ ಅಯೋಧ್ಯೆಯಲ್ಲಿ ಹೊಸ ವರ್ಷದಂದು ಕಾಣಿಸಿಕೊಂಡಿದ್ದಾರೆ. ಅಯೋಧ್ಯೆಯ ಜತೆಗೆ ರಾಮಾಯಣಕ್ಕೆ ನಂಟಿರುವ ನೇಪಾಳಕ್ಕೂ ಭೇಟಿ ಕೊಟ್ಟು ಹಲವಾರು ವಿಷಯಗಳನ್ನು ಶೇರ್​  ಮಾಡಿಕೊಂಡಿದ್ದಾರೆ. ಈ ಮೂಲಕ ಡಾ.ಬ್ರೋ ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​ ನೀಡಿದ್ದಾರೆ.

    ಅಯೋಧ್ಯೆಯಲ್ಲಿ ಡಾ.ಬ್ರೋ; ನ್ಯೂ ಇಯರ್​ನ ಹೊಸ ಹುರುಪಿನೊಂದಿಗೆ ಬ್ರೋ ಈಸ್​​ ಬ್ಯಾಕ್

    ಮೊದಲು ಡಾ.ಬ್ರೊ. ಸರಯೂ ನದಿಗೆ ಭೇಟಿ ಕೊಟ್ಟಿದ್ದಾರೆ. ರಾಮನ ಜನ್ಮಭೂಮಿಯಾದ ಅಯೋಧ್ಯೆ ಉತ್ತರ ಪ್ರದೇಶದ ಸರಯೂ ನದಿಯ ದಂಡೆಯಲ್ಲಿದೆ. ಇಂಥ ಸರಯೂ ನದಿಯ ಪರಿಚಯ ಮಾಡಿಸಿದರು.  ಅಯೋಧ್ಯೆಯ ಹಲವಾರು ಸ್ಥಳ, ದೇಗುಲಗಳ ದರ್ಶನವನ್ನೂ ಡಾ.ಬ್ರೋ ಮಾಡಿಸಿದ್ದಾರೆ. ಅದಾದ ಬಳಿಕ ಅಲ್ಲಿರುವ ಸಾಲಿಗ್ರಾಮದ ಪರಿಚಯವನ್ನೂ ಮಾಡಿಸಿದ್ದಾರೆ.

    ಶ್ರೀರಾಮ-ಸೀತಾಮಾತೆಯ ವಿಗ್ರಹ ಮಾಡಲು ಬಳಸಿಕೊಂಡಿರುವ ಈ ಕಲ್ಲು ನೇಪಾಳದಿಂದ ಸುಮಾರು 1,100 ಕಿಲೋ ಮೀಟರ್​ ದಾಟಿ ಅಯೋಧ್ಯೆಗೆ ಬಂದಿರುವುದಾಗಿ ಹೇಳಿರುವ ಗಗನ್​ ಅವರು, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಹಲವಾರು ವಿಗ್ರಹಗಳಿಗೆ ಕರ್ನಾಟಕದ ಕಲ್ಲುಗಳನ್ನೂ ಬಳಸಿಕೊಂಡಿರುವ ಮಾಹಿತಿ ನೀಡಿದ್ದಾರೆ. ಅಯೋಧ್ಯೆಯಿಂದ ರಾಮಾಯಣ ಮಾಹಿತಿ ನೀಡಿದ್ದಾರೆ.

    ಈ ವಿಡಿಯೋ ನೋಡಿದ ಅಭಿಮಾನಿಗಳೂ ನಮಸ್ಕಾರ ದೇವ್ರು ಇಷ್ಟು ದಿನ ಕಾದಿದ್ದಕ್ಕೆ ಸಾರ್ಥಕ ಆಯಿತು ಬ್ರೋ ಜೈ ಶ್ರೀ ರಾಮ್..ದೇವರು ಎಂಥ ಅಯೋಧ್ಯೆಯ ಸುಂದರವಾದ ರಾಮ ಮಂದಿರದ ನಿರ್ಮಾಣ ಕಾರ್ಯ ತೋರಿಸಿದ ನಮ್ಮ ಡಾ. ಬ್ರೋ ದೇವರಿಗೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಎಂದು ಕಾಮೆಂಟ್​​ ಮಾಡಿದ್ದಾರೆ.

    ನಮಸ್ಕಾರ ದೇವರು Coming soon ಎಂದ್ರು ಡಾ.ಬ್ರೋ; ‘ನನ್ನ ದೇವ್ರು ಇಷ್ಟು ದಿನ ಎಲ್ಲಿದ್ರಿ’ ಎಂದ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts