

ಸಹೋದರ ಸಹೋದರಿಯರ ನಡುವಿನ ಸಂಬಂಧವು ಈ ಜಗತ್ತಿನಲ್ಲಿ ಅತ್ಯಂತ ವಿಶೇಷವಾಗಿದೆ. ಈ ಸಂಬಂಧದಲ್ಲಿ ಸಹೋದರಿ ಹಿರಿಯಳಾಗಿದ್ದರೆ ಅವಳು ಬಾಲ್ಯದಿಂದಲೂ ಸಹೋದರನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲು ಪ್ರಯತ್ನಿಸುತ್ತಾಳೆ. ಹಾಗಾಗಿ ಆ ಸಹೋದರ ಯಾವುದೇ ತಪ್ಪು ಸಹವಾಸಕ್ಕೆ ಬೀಳುವುದಿಲ್ಲ. ಹುಡುಗನ ಜೀವನದಲ್ಲಿ ಅವನ ಪಾಲಕರ ನಂತರ ಸಹೋದರಿಯರಿಗೆ ವಿಶೇಷ ಸ್ಥಾನವಿದೆ. ಸಹೋದರ ಮತ್ತು ಸಹೋದರಿಯ ಇಂತಹದ್ದೇ ಮುದ್ದಾ ವಿಡಿಯೋವೊಂದ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೋದಲ್ಲಿ ಸಹೋದರಿ ತನ್ನ ಸಹೋದರನನ್ನು ನಿಂದಿಸುತ್ತಿರುವುದನ್ನು ನೋಡಬಹುದು. ಪುಟ್ಟ ಬಾಲಕಿ ತನ್ನ ಸಹೋದರನಿಗೆ ನಾನು ನಿನಗಿಂತ ದೊಡ್ಡವಳು ನಿನಗೆ ಭಯವಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಉತ್ತರವಾಗಿ ಮಗು ನಿನಗೂ ಭಯವಿಲ್ಲ ಎಂದು ಹೇಳುತ್ತಾನೆ. ಇಬ್ಬರ ವಾಗ್ವಾದದ ಬಳಿಕವು ಸಹೋದರನು ಅವಳಿಗೆ ತಲೆಬಾಗುವುದಿಲ್ಲ. ಕೊನೆಯಲ್ಲಿ ಇಬ್ಬರು ಹೊಡೆದಾಡಿಕೊಳ್ಳುತ್ತಾರೆ.
ವಿಡಿಯೋ ವೈರಲ್ ಆದಗಿನಿಂದ ಇದುವರೆಗೆ 2 ಕೋಟಿ 68 ಲಕ್ಷ ಮಂದಿ ವೀಕ್ಷಿಸಿದ್ದಾರೆ. 15 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು 15 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ಬೇಬಿ ಡಾನ್ ದರೋಡೆಕೋರ, ಬಿಗ್ ಬಾಸ್ ನೋಡುವ ಮಕ್ಕಳಂತೆ ಕಾಣುತ್ತಾರೆ, ಏನು ನಡೆಯುತ್ತಿದೆ?, ಮುಂದಿನ ಬಾರಿ ಈ ಮಕ್ಕಳ ನಡುವೆ ಕುಸ್ತಿ ಪಂದ್ಯ ನಡೆಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ.