

Snake : ಹಾವೊಂದು ತನ್ನ ಪೊರೆಯನ್ನು ಕಳಚುವಾಗ ಕಣ್ಣುಗಳನ್ನು ಮುಚ್ಚಿಕೊಂಡಿದ್ದ ತನ್ನ ಚರ್ಮವನ್ನು ಸೂಕ್ಷ್ಮವಾಗಿ ತೆಗೆಯುವ ಮಂತ್ರಮುಗ್ಧಗೊಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ, ಹಾವುಗಳ ಆಕಾರವು ಅವುಗಳ ಪೊರೆಯಿಂದ ಅಂದರೆ ಚರ್ಮದಿಂದ ರೂಪುಗೊಳ್ಳುತ್ತದೆ. ಸಮಯಕ್ಕೆ ತಕ್ಕಂತೆ ಹಾವುಗಳು ಸ್ವಾಭಾವಿಕವಾಗಿ ತಮ್ಮ ಪೊರೆಗಳನ್ನು ಕಳಚುತ್ತವೆ. ಈ ಪ್ರಕ್ರಿಯೆಯನ್ನು ಎಕ್ಡಿಸಿಸ್ ಅಥವಾ ಮೌಲ್ಟಿಂಗ್ ಎಂದು ಕರೆಯಲಾಗುತ್ತದೆ.
ಹಾವಿನ ಹಳೆಯ ಚರ್ಮವು ಅದರ ಬೆಳವಣಿಗೆಗೆ ತಡೆಗೋಡೆಯಾದಾಗ, ಹಾವು ಅದರ ಪೊರೆಯನ್ನು ಕಳಚಲು ಪ್ರಾರಂಭಿಸುತ್ತದೆ. ಪುರಾಣಗಳಲ್ಲಿ ಈ ದೃಶ್ಯವನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಅಲ್ಲದೆ, ಹಾವಿನ ಪೊರೆಯನ್ನು ಇಟ್ಟುಕೊಳ್ಳಬಾರದು ಅಂತಾನೂ ಹೇಳಲಾಗುತ್ತದೆ. ಇದರಿಂದ ಹಾವಿನ ದೋಷ ಬರುತ್ತದೆ ಎನ್ನುತ್ತಾರೆ. ಆದರೆ, ವೈಜ್ಞಾನಿಕ ಇದೊಂದು ಮನಮೋಹಕ ದೃಶ್ಯ ಎಂದು ಹೇಳಲಾಗುತ್ತದೆ.
ಹಾವು ತನ್ನ ಚರ್ಮವನ್ನು ಕಳಚುವ ವಿಡಿಯೋ ಇದೀಗ ವೈರಲ್ ಆಗಿದೆ. ಪೊರೆ ಕಳಚುವ ಪ್ರಕ್ರಿಯೆಯಲ್ಲಿ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿದ್ದ ಚರ್ಮವನ್ನು ಹಾವು ಸೂಕ್ಷ್ಮವಾಗಿ ತೆಗೆದುಹಾಕುವ ಅಪರೂಪದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮರದ ಒರಟಾದ ಭಾಗಕ್ಕೆ ತಲೆಯನ್ನು ಉಜ್ಜಿ ಚರ್ಮ ಕಳಚುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಈ ವಿಡಿಯೋವನ್ನು ವರ್ಲ್ಡ್ ಆಫ್ ಸ್ನೇಕ್ಸ್ ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ನಿನ್ನೆಯಷ್ಟೇ ಅಪ್ಲೋಡ್ ಮಾಡಲಾಗಿದ್ದು, ಈವರೆಗೂ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, ಸಾವಿರಾರು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)