VIDEO| ಚಲಿಸುವ ರೈಲಿನಲ್ಲಿ ಜೋಡಿ ಪ್ರಣಯದಾಟ; ಸಿಡಿಮಿಡಿಗೊಂಡ ನೆಟ್ಟಿಗರು

Train
Published on

ಬಿಹಾರ: ಇತ್ತೀಚಿನ ಸಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಅದಕ್ಕೆ ತಕ್ಕಂತೆ ನೆಟ್ಟಿಗರು ಪ್ರತಿಕ್ರಿಯಿಸಿ ಸುಮ್ಮನಾಗುತ್ತಾರೆ.

ಆದರೆ, ಇಲ್ಲಿ ನಡೆದಿರುವ ಘಟನೆಯ ವಿಡಿಯೋವನ್ನು ನೋಡಿ ನೆಟ್ಟಿಗರು ಹೌಹಾರಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಕಮೆಂಟ್ಸ್​ ಮಾಡುವ ಮೂಲಕ ಪಾಠ ಮಾಡಿದ್ದಾರೆ.

ಜೋಡಿಗಳ ಪ್ರಣಯದಾಟ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಜೋಡಿ ಚಲಿಸುವ ರೈಲಿನಲ್ಲಿ ಪ್ರಣಯದಾಟ ಆಡುತ್ತಿರುವುದನ್ನು ಕಾಣಬಹುದು.

ಬಿಹಾರದಲ್ಲಿ ಘಟನೆ ನಡೆದಿದ್ದು ರೈಲಿನಲ್ಲಿ ಚಲಿಸುವ ವೇಳೆ ಸಹ ಪ್ರಯಾಣಿಕ ಒಬ್ಬ ಈ ವಿಡಿಯೋವನ್ನು ಮಾಡಿದ್ದು ಸಹ ಪ್ರಯಾಣಿಕರು ಇದ್ದರು ಸಹ ದಂಪತಿ ಕೇರ್​ ಮಾಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದೇ ಮೊದಲಲ್ಲ

ಇತ್ತೀಚಿನ ದಿನಗಳಲ್ಲಿ ಮೆಟ್ರೋ ಹಾಗೂ ರೈಲಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿಗೆ ತುಂಡುಡುಗೆ ತೊಟ್ಟು ಯುವತಿ ಒಬ್ಬಳು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದು.

ಮೆಟ್ರೋ ರೈಲಿನಲ್ಲಿ ಲವರ್ಸ್​ ಲಿಪ್​ಲಾಕ್​, ಆಲಿಂಗನ, ಚುಂಬನ ಹಾಗೂ ಯುವಕನೊಬ್ಬ ಒಂದು ಹನಿ ನೀರು ಚೆಲ್ಲದಂತೆ ಸ್ನಾನ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು ಮತ್ತು ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net