More

    ದೆಹಲಿ ಮೆಟ್ರೋ ರೈಲಿನಲ್ಲಿ ಲವರ್ಸ್​ ಲಿಪ್​ಲಾಕ್​! ವಿಡಿಯೋ ಸೆರೆಹಿಡಿದವನಿಗೆ ತರಾಟೆ, ಪರ-ವಿರೋಧ ಚರ್ಚೆ

    ನವದೆಹಲಿ: ಕೆಲ ದಿನಗಳ ಹಿಂದೆ ಯುವತಿಯೊಬ್ಬಳ ಅರೆಬೆತ್ತಲೆ ವಿಡಿಯೋ ವಿಚಾರದಲ್ಲಿ ಭಾರೀ ಸದ್ದು ಮಾಡಿದ್ದ ದೆಹಲಿ ಮೆಟ್ರೋ ಇದೀಗ ಅಸಭ್ಯತೆ ಕುರಿತಾಗಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ. ಪ್ರೇಮಿಗಳಿಬ್ಬರು ಮೆಟ್ರೋ ರೈಲಿನಲ್ಲೇ ಲಿಪ್​ಲಾಕ್​ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

    ಈ ಹಿಂದೆ ಪಂಜಾಬ್​ ಮೂಲದ ರಿದಮ್​ ಚಾನನ ಎಂಬಾಕೆ ಮೆಟ್ರೋದಲ್ಲಿ ಬ್ರಾ ಮತ್ತು ಮಿನಿ ಸ್ಕರ್ಟ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಬಳಿಕ ಪರ-ವಿರೋಧದ ಚರ್ಚೆಯಾಗಿತ್ತು. ಸಾರ್ವಜನಿಕ ಪ್ರದೇಶವಾದ್ದರಿಂದ ಮೆಟ್ರೋ ಒಳಗೆ ಸಭ್ಯತೆಯಿಂದ ವರ್ತಿಸಬೇಕೆಂದು ದೆಹಲಿ ಮೆಟ್ರೋ ಸೂಚನೆ ನೀಡಿತ್ತು. ಆದರೆ, ಮೆಟ್ರೋ ಸೂಚನೆಗೆ ಕ್ಯಾರೆ ಎನ್ನದೆ ಪ್ರೇಮಿಗಳಿಬ್ಬರು ರೈಲಿನ ಒಳಗಡೆಯೇ ಲಿಪ್​ಲಾಕ್​ ಮಾಡಿದ್ದಾರೆ. ಅನೇಕ ನೆಟ್ಟಿಗರು ಇದನ್ನು “ನಾಚಿಕೆಗೇಡಿನ ಕೃತ್ಯ” ಎಂದು ಕರೆದರೆ, ಕೆಲವರು ಇದನ್ನು ಸಾಮಾನ್ಯಗೊಳಿಸಬೇಕು ಎಂದು ವಾದಿಸಿದ್ದಾರೆ.

    ಇದನ್ನೂ ಓದಿ: ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಅಮ್ಮ-ಮಗಳ ಮೇಲೆ ಆನೆ ದಾಳಿ: ಪುತ್ರಿ ಸಾವು, ತಾಯಿಯ ಸ್ಥಿತಿ ಗಂಭೀರ

    ರಿಚಾ ಶರ್ಮಾ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ವಿಡಿಯೋದಲ್ಲಿ ಯುವಕ ಮತ್ತು ಯುವತಿ ಪ್ರಯಾಣಿಕರು ತುಂಬಿರುವ ಚಲಿಸುವ ಮೆಟ್ರೋ ರೈಲಿನ ಒಳಗೆ ನಿಂತು ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವಿದೆ.

    https://twitter.com/Rich_aaaaa/status/1642794526615175169?s=20

    ವಿಡಿಯೋ ರೆಕಾರ್ಡ್​ಗೆ ಖಂಡನೆ

    ಸಾರ್ವಜನಿಕವಾಗಿ ಚುಂಬಿಸಿದ್ದಕ್ಕಾಗಿ ಕೆಲವು ನೆಟ್ಟಿಗರು ಪ್ರೇಮಿಗಳಿಬ್ಬರನ್ನು ಟೀಕಿಸಿದ್ದಾರೆ. ಆದರೆ, ಹೆಚ್ಚಿನ ನೆಟ್ಟಿಗರು ಅನುಮತಿಯಿಲ್ಲದೆ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಖಂಡಿಸಿದ್ದಾರೆ. ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದನ್ನು ಸಾಮಾನ್ಯಗೊಳಿಸಬೇಕು ಎಂದು ಅನೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶಿಕ್ಷಾರ್ಹ ಅಪರಾಧ

    ಒಪ್ಪಿಗೆಯಿಲ್ಲದೆ ಚಿತ್ರೀಕರಿಸುವುದು ಅಥವಾ ಅದರ ವಿಡಿಯೋವನ್ನು ಪೋಸ್ಟ್ ಮಾಡುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 C ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ. ಅದರೆ, ಸಾರ್ವಜನಿಕ ಪ್ರದೇಶದಲ್ಲಿ ಸಭ್ಯತೆಯಿಂದ ನಡೆದುಕೊಳ್ಳಬೇಕೆಂದು ಕೆಲವರು ವಾದಿಸಿದ್ದಾರೆ.

    ಇದನ್ನೂ ಓದಿ: ಪತ್ನಿ, ಪುತ್ರನ ಜತೆ ವಿನೋದ್​ ರಾಜ್​!? ಚಂದನವನದಲ್ಲಿ ಸಂಚಲನ ಮೂಡಿಸಿದೆ ಈ ನಿರ್ದೇಶಕನ ಮಾತು

    ಡಿಎಂಆರ್​ಸಿ ಸೂಚನೆ ಏನು?

    ಕೆಲ ದಿನಗಳ ಹಿಂದೆ ರಿಧಮ್​ ಅವರ ವಿಡಿಯೋ ವೈರಲ್​ ಆಗಿತ್ತು. ವಿಡಿಯೋದಲ್ಲಿ ರಿಧಮ್​ ಬ್ರಾ ಮತ್ತು ಮಿನಿ ಸ್ಕರ್ಟ್​ ಮಾತ್ರ ಧರಿಸಿದ್ದಳು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿತು. DMRCಯು ತನ್ನ ಪ್ರಯಾಣಿಕರು ಸಮಾಜದಲ್ಲಿ ಸ್ವೀಕಾರಾರ್ಹವಾದ ಎಲ್ಲ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕೆಂದು ನಿರೀಕ್ಷಿಸುತ್ತದೆ. ಪ್ರಯಾಣಿಕರು ಯಾವುದೇ ಅಸಭ್ಯ ಚಟುವಟಿಕೆಯಲ್ಲಿ ತೊಡಗಬಾರದು ಅಥವಾ ಇತರ ಸಹ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರುವಂತಹ ಯಾವುದೇ ಉಡುಗೆಯನ್ನು ಧರಿಸಬಾರದು. ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಸಭ್ಯತೆಯಿಂದ ನಡೆದುಕೊಳ್ಳಲು ಎಲ್ಲ ಪ್ರಯಾಣಿಕರಿಗೆ ನಾವು ಮನವಿ ಮಾಡುತ್ತೇವೆ ಎಂದು ಹೇಳಿತ್ತು. ಆದರೆ ಮತ್ತೊಮ್ಮೆ ಈ ಘಟನೆ ನಡೆದಿರುವುದು DMRC ಸೂಚನೆಗೆ ಬೆಲೆ ಇಲ್ಲದಂತಾಗಿದೆ. (ಏಜೆನ್ಸೀಸ್​)

    ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ

    ದೆಹಲಿ ಮೆಟ್ರೋ ರೈಲಿನಲ್ಲಿ ಅರೆ ಬೆತ್ತಲಾಗಿ ಕಾಣಿಸಿಕೊಂಡ ಯುವತಿಯ ಗುರುತು ಕೊನೆಗೂ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts