'Thar Roxx' ಖರೀದಿಸಿದ ಖುಷಿಯಲ್ಲಿ ವ್ಯಕ್ತಿಯ ವಿಚಿತ್ರ ಸಂಭ್ರಮ; ವಿಡಿಯೋ ನೋಡಿ ನೆಟ್ಟಿಗರು ಗರಂ

Untitled design - 2024-11-20T184710.059
Published on

ಥಾರ್('Thar Roxx') ಕೇವಲ ವಾಹನವಲ್ಲ ಆದರೆ ಅದು ಅನೇಕ ಜನರ ಭಾವನೆ ಮತ್ತು ಕನಸು!. ಈ ಕಾರಿನಲ್ಲಿ ಆಫ್​ ರೋಡಿಂಗ್​ ಮಾಡುವ ಯುವಕರ ವಿಡಿಯೋವನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಸದ್ಯ ಈ ಕಾರಿಗೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಥಾರ್​ ಖರೀದಿಸಿದ ನಂತರ ವ್ಯಕ್ತಿಯೊಬ್ಬರು ಉತ್ಸುಕರಾಗಿ ಮಾಡಿರುವ ಕೃತ್ಯ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಈ ವಿಡಿಯೋ ಮಧ್ಯಪ್ರದೇಶದ್ದು ಎನ್ನಲಾಗಿದೆ.

ವೈರಲ್​ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹೊಸ ಮಹೀಂದ್ರ ಥಾರ್ ರಾಕ್ಸ್ ಅನ್ನು ಖರೀದಿಸಿರುವುದನ್ನು ಕಾಣಬಹುದು. ಅವರು ಕಾರು ಖರೀದಿಸಿರುವ ಖುಷಿಯಿಂದ ಕಾರಿನ ಷೋರೂಂ ಮುಂದೆಯೇ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಂಭ್ರಮಿಸುತ್ತಿರುವುದನ್ನು ನೋಡಬಹುದು.

ವಿಡಿಯೋ ನೋಡಿದ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅವರ ಕ್ರಮವು ಟ್ರೆಂಡ್ ಆಗುತ್ತದೆ ಎಂದು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net