ಮಾಲ್‌ಗೆ ನುಗ್ಗಿದ ಕೋತಿ ಕುಚೇಷ್ಟೆಗೆ ಬೇಸತ್ತ ಮಂದಿ; Viral Video ನೋಡಿ ನೆಟ್ಟಿಗರು ಹೇಳಿದ್ದೀಗೆ. | Viral Video

Untitled design - 2025-01-11T195457.576
Published on

ಲಖನೌ: ಮಂಗಗಳು ಮರದ ಕೊಂಬೆಗಳಿಂದ ಇನ್ನೊಂದು ಮರಕ್ಕೆ ಹಾರುತ್ತಿದ್ದರೆ ನೋಡಲು ಚೆನ್ನಾಗಿರುತ್ತದೆ. ಅಪ್ಪಿತಪ್ಪಿಯೂ ಮನೆ ಒಳಗೆ ಬಂದರೆ ಯಾರೂ ಸಹಿಸಲಾರರು. ಕೋತಿ ಸ್ವಭಾವತಃ ಚೇಷ್ಟೆಯ ಪ್ರಾಣಿ. ಅಂತಹ ಸಮಯದಲ್ಲಿ ಜನ ತುಂಬಿರುವ ಜಾಗಕ್ಕೆ ಬಂದರೆ ಗಲಾಟೆ ಮಾಡುವುದು ಸಹಜ. ಇದಕ್ಕೆ ಜೀವಂತ ಉದಾಹರಣೆ ಎಂಬಂತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್( Viral Video) ಆಗಿದೆ. ಈ ವಿಡಿಯೋ ಉತ್ತರ ಪ್ರದೇಶದ ಝಾನ್ಸಿಯ ಮೌರಾನಿಪುರದಲ್ಲಿರುವ ಮಾಲ್‌ನಲ್ಲಿ ನಡೆದಿದೆ.

ವೈರಲ್ ವಿಡಿಯೋದಲ್ಲಿ ಕೋತಿ ಮಾಲ್‌ನೊಳಗೆ ಇರುವುದನ್ನು ನೋಡಬಹುದು. ಒಬ್ಬರ ತಲೆಯ ಮೇಲೆ ಏರುತ್ತದೆ, ಮತ್ತೆ ಕೆಲವೊಮ್ಮೆ ಇನ್ನೊಬ್ಬರ ಕೂದಲನ್ನು ಎಳೆಯಲು ಪ್ರಾರಂಭಿಸುವುದನ್ನು ನೋಡಬಹುದು. ಹುಡಗಿಯೊಬ್ಬಳಿಗೆ ಕೋತಿ ನೀಡುವ ತೊಂದರೆಯಿಂದ ಆಕೆ ಕಿರುಚಲು ಪ್ರಾರಂಭಿಸುವುದನ್ನು ಕಾಣಬಹುದು.

ಈ ವಿಡಿಯೋವನ್ನು ನೋಡಿದವರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೋತಿ ಕೂಡ ಶಾಪಿಂಗ್ ಹೋಗಿರಬೇಕು, ತನ್ನ ಕೋಪವನ್ನು ಹೊರಹಾಕುತ್ತಿದೆ, ಎಲ್ಲರ ಕೂದಲನ್ನು ಕಿತ್ತುಹಾಕು, ಈ ಜನರು ಶಾಪಿಂಗ್ ಹೊರತುಪಡಿಸಿ ಏನನ್ನೂ ಮಾಡುವುದಿಲ್ಲ ಇನ್ನೂ ತೊಂದರೆ ನೀಡು ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net