

ಭಾರತೀಯ ಆಹಾರ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದರೆ ಅವರು ಖಂಡಿತವಾಗಿಯೂ ಇಲ್ಲಿನ ಆಹಾರದ ರುಚಿಯನ್ನು ಸವಿಯುತ್ತಾರೆ. ಅದರಲ್ಲೂ ಭಾರತದಲ್ಲಿ ರಸ್ತೆಬದಿಯಲ್ಲಿ ಸಿಗುವ ಸ್ಟ್ರೀಟ್ ಫುಡ್ ಜನರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕೊರಿಯನ್ ಹುಡುಗಿ ಭಾರತದಲ್ಲಿ ವಡಾಪಾವ್ ಸ್ಟಾಲ್ ಬಳಿ ಹೋಗುವುದನ್ನು ನೋಡಬಹುದು. ಅಂಗಡಿ ಮಾಲೀಕನನ್ನು ಇದೇನು ಎಂದು ಹುಡುಗಿ ಕೇಳುತ್ತಾಳೆ. ಅಂಗಡಿಯವರು ಹೇಳುವುದು ಹುಡುಗಿಗೆ ಅರ್ಥವಾಗುವುದಿಲ್ಲ, ಬಳಿಕ ಸುತ್ತಮುತ್ತಲಿನ ಜನರು ವಡಾಪಾವ್ ಅನ್ನು ಇಂಡಿಯನ್ ಬರ್ಗರ್ ಎಂದು ಹೇಳುತ್ತಾರೆ. ನಂತರ ಹುಡುಗಿ ಅಂಗಡಿಯವನಿಗೆ ವಡಾಪಾವ್ ಕೊಡುವಂತೆ ಕೇಳುತ್ತಾಳೆ. ರುಚಿ ನೋಡಿದ ಹುಡುಗಿ ವಾವ್ ಸಖತ್ ಹಾಟ್ ಆಗಿದೆ ಎಂದು ಹೇಳುತ್ತಾ ವಡಾಪಾವ್ ಅನ್ನು ಎಂಜಾಯ್ ಮಾಡುತ್ತಾಳೆ. ವಡಾಪಾವ್ ತಿಂದ ಬಳಿಕ 10 ಔಟ್ ಆಫ್ 10 ನೀಡುತ್ತೇನೆ ಎಂದು ಹೇಳುತ್ತಾಳೆ. ಅಂಗಡಿಯವರಿಗೆ ಹಣ ಪಾವತಿಸಲು ಹೋದಾಗ ಮಾಲೀಕರು ಹಣ ಪಡೆಯಲು ನಿರಾಕರಿಸುತ್ತಾರೆ. ವಡಾಪಾವ್ ತಿಂದು ಹುಡುಗಿ ಖುಷಿಯಾಗುವುದನ್ನು ನೋಡಬಹುದು.
55 ಸೆಕೆಂಡುಗಳ ಈ ಕ್ಲಿಪ್ ಅನ್ನು ಅ4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಕೊರಿಯನ್ ಹುಡುಗಿ ಭಾರತೀಯ ಆಹಾರವನ್ನು ಪ್ರೀತಿಯಿಂದ ಖುಷಿಯಾಗಿ ಸೇವಿಸುತ್ತಿರುವುದರಿಂದ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತರ ದೇಶಗಳ ಜನರು ನಮ್ಮ ಭಾರತ, ನಮ್ಮ ಸಂಸ್ಕೃತಿ, ನಮ್ಮ ಆಲೋಚನೆಗಳು, ನಮ್ಮ ಮಾನವೀಯತೆ ಮತ್ತು ನಮ್ಮ ದೇಶವನ್ನು ಪ್ರೀತಿಸುತ್ತಾರೆ ನಾನು ನನ್ನ ಭಾರತವನ್ನು ಪ್ರೀತಿಸುತ್ತೇನೆ, ಇದು ವಡಾಪಾವ್ ಬರ್ಗರ್ ಅಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ಕಾಮೆಂಟ್ ಮಾಡಿದ್ದಾರೆ.