ಕಾಫಿ ತಯಾರಿಸಲು ಹೊಲಿಗೆಯಂತ್ರ ಬಳಕೆ; 1 ಕೋಟಿಗೂ ಹೆಚ್ಚು ಮಂದಿ ಮೆಚ್ಚಿದ Video Viral

Untitled design - 2024-10-30T190151.664
Published on

ಜನರು ಕಾಫಿಯನ್ನು ಹೇಗೆಲ್ಲಾ ಮಾಡಬಹುದು. ಕಾಫಿ ಮಾಡುವ ವಿಧಾನವನ್ನು ಹೇಳಿ ಎಂದರೆ 1 ಅಥವಾ 2 ರೀತಿ ನಮ್ಮಗೆ ಥಟ್​ ಎಂದು ಹೊಳೆಯಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಕಾಫಿ ಮಾಡಿರುವ ಶೈಲಿ ವೈರಲ್​ (Video Viral) ಆಗಿದೆ. ತಮ್ಮ ಬಳಿ ಇರುವ ಹೊಲಿಗಯಂತ್ರದಲ್ಲಿ ಹೊಸ ಪ್ರಯೋಗ ಮಾಡಿರುವುದನ್ನು ನೀವು ನೋಡಬಹುದು.

ವೈರಲ್​ ವಿಡಿಯೋದಲ್ಲಿ ಹೊಲಿಗೆ ಯಂತ್ರದಲ್ಲಿ ಕಾಫಿ ತಯಾರಿಸುವುದನ್ನು ಕಾಣಬಹುದು. ಸೂಜಿ ಇರುವ ಜಾಗದಲ್ಲಿ ಬೇರೆ ಏನೋ ವಸ್ತುವೊಂದನ್ನು ಅಳವಡಿಸಲಾಗಿದೆ. ಅದರ ಸಹಾಯದಿಂದ ಆತ ಕಾಫಿ ಮಾಡಿದ್ದಾನೆ. ಹೊಲಿಗೆ ಯಂತ್ರವು ಪ್ರಾರಂಭವಾದ ತಕ್ಷಣ ಅದು ಕೆಳಭಾಗದಲ್ಲಿ ಕಾಫಿಯನ್ನು ಬೆರೆಸಲು ಪ್ರಾರಂಭಿಸುತ್ತದೆ. ಸುಮಾರು 10 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ವ್ಯಕ್ತಿಯು ಒಂದು ಕಪ್ ಕಾಫಿಯನ್ನು ತೆಗೆದು ಇನ್ನೊಂದು ಕಪ್ ಅನ್ನು ಯಂತ್ರದ ಕೆಳಗೆ ಇಡುವುದನ್ನು ನೋಡಬಹುದು.

ಅಂದ್ಹಾಗೆ ಆ ವ್ಯಕ್ತಿಯು ಕಾಫಿ ಮತ್ತು ಸಕ್ಕರೆಯನ್ನು ಹೊಲಿಗೆ ಯಂತ್ರದ ಸಹಾಯದಿಂದ ಚೆನ್ನಾಗಿ ಬ್ಲೆಂಡ್​ ಮಾಡಿದ್ದಾನೆ. ನಂತರ ಅದಕ್ಕೆ ಬಿಸಿ ಹಾಲನ್ನು ಸೇರಿಸಿದ್ದಾನೆ. ಕಾಫಿ ಕುಡಿಯಲು ಸಿದ್ಧವಾಗಿದೆ.

ವೈರಲ್​ ಆದಾಗಿನಿಂದ ಇದುವರೆಗೂ ಈ ಪೋಸ್ಟ್​ ಅನ್ನು 1 ಕೋಟಿ 40 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 94 ಸಾವಿರ ಲೈಕ್​ ಮಾಡಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಭಾರತೀಯ ಜುಗಾಡ್​​​​ ನಾವು ಅದರಲ್ಲಿ ಉತ್ತಮರು, ನನ್ನ ಅಧಿಕಾರ ದುರುಪಯೋಗವಾಗುತ್ತಿದೆ, ಭಾರತವು ಆರಂಭಿಕರಿಗಾಗಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಹೊಲಿಗೆ ಯಂತ್ರದ ಸರಿಯಾದ ಬಳಕೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net