

ಪ್ರತಿ ವರ್ಷ ತರಗತಿಗಳು ಮುಗಿದು ಮುಖ್ಯ ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನ ನಡೆಯುವ ಕಾರ್ಯಕ್ರಮ ಶಾಲಾ ವಾರ್ಷಿಕೋತ್ಸವ ಯಾರಿಗೆ ನೆನೆಪಿರಲ್ಲ ಹೇಳಿ. ಸಮಾರಂಭದಲ್ಲಿ ಡ್ಯಾನ್ಸ್, ಡ್ರಾಮಾ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಹೀಗೆ ಹಲವು ಭಾಗಗಳಿರುತ್ತವೆ. ಈಗ ಇದನ್ನು ಹೇಳಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ.
ವೈರಲ್ ವಿಡಿಯೋದಲ್ಲಿ ಹುಡುಗಿಯರು ಟೀಂ ಮಹಾಭಾರತದ ಟೈಟಲ್ ಟ್ರ್ಯಾಕ್ಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎಲ್ಲರು ಕೆಂಪು ಬಣ್ಣದ ಬಟ್ಟೆ ತೊಟ್ಟು ಮಹಾಭಾರತದ ಸಾರಾಂಶವನ್ನು ತಿಳಿಸುವ ಹಾಡಿಗೆ ಹೆಜ್ಜೆ ಹಾಕುತ್ತಾ ಹೃದಯಸ್ಪರ್ಶಿಯಾಗುವಂತ ಅದ್ಭುತ ಪ್ರದರ್ಶನ ನೀಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ 50 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ‘ಹೈ ಕಥಾ ಸಂಗ್ರಾಮ್ ಕಿ’ ಹಾಡಿನ ಈ ಅಭಿನಯವನ್ನು ನೀವೂ ಹೊಗಲದೆ ಇರಲು ಸಾಧ್ಯವಾಗುವುದಿಲ್ಲ, ಇದು ಉತ್ತಮ ನೃತ್ಯ, ಇದನ್ನು ನೋಡಿದ ನಂತರ ನಿಜಕ್ಕೂ ನನಗೆ ಗೂಸ್ಬಂಪ್ಸ್ ಬಂತು, ಎಲ್ಲರೂ ಚೆನ್ನಾಗಿ ಮಾಡಿದ್ದಾರೆ, ಅತ್ಯುತ್ತಮ ಶಿಕ್ಷಕರು ಮತ್ತು ಶಾಲೆಯನ್ನು ಪ್ರಶಂಸಿಸಬೇಕು, ಇತರ ಶಾಲೆಗಳು ಸಹ ಕಲಿಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ.