ಬರ್ತ್​ಡೇ ಗರ್ಲ್​​ಗೆ ಬಂಪರ್​ ಗಿಫ್ಟ್​​; ಕೇಕ್​​ನಲ್ಲಿತ್ತು ದುಡ್ಡಿನ ಸರಮಾಲೆ! Viral Video

Untitled design - 2024-10-25T183622.606
Published on

ಪ್ರಸ್ತುತ ಜೀವನಶೈಲಿಯಲ್ಲಿ ಜನ್ಮದಿನದಂದು ಕೇಕ್​ ಕತ್ತರಿಸುವುದು ಮತ್ತು ಬರ್ತ್​ಡೇ ಇರುವವರಿಗೆ ಉಡುಗೊರೆ ನೀಡಿ ಸರ್ಪ್ರೈಸ್​​​ ನೀಡುವುದು ಸಾಮಾನ್ಯವಾಗಿದೆ. ಇಂತಹದ್ದೆ ಒಂದು ಸಂಗತಿ ಸ್ನೇಹಿತರೆಲ್ಲಾ ಸೇರಿ ಗೆಳತಿಗೆ ಬರ್ತಡೇ ಗಿಫ್ಟ್ ನೀಡಿರುವ ವಿಡಿಯೋವೊಂದು​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ( Viral Video) ಆಗಿದೆ. ಇದನ್ನು ನೋಡಿದ ನೆಟ್ಟಿಗರಿಂದ ಪ್ರಶ್ನೆಗಳ ಮಹಾಪೂರವೇ ಹರಿದುಬಂದಿದೆ.

ವೈರಲ್​ ವಿಡಿಯೋದಲ್ಲಿ ಹುಟ್ಟುಹಬ್ಬದ ಕೇಕ್​​ ಕತ್ತರಿಸುಲು ಸಿದ್ಧವಿರುವ ಹುಡುಗಿಗೆ ಸುತ್ತಲು ಇರುವ ಸ್ನೇಹಿತರು ಏನೋ ಹೇಳುತ್ತಾರೆ. ಬಳಿಕ ಆ ಹುಡುಗಿ ಕೇಕ್​ ಮೇಲಿನ ಡಿಜೈನ್​ ತೆಗೆದುಹಾಕುವುದನ್ನು ನೀವು ನೋಡಬಹುದು. ಕೇಕ್​​ ಅನ್ನು ಅಲಂಕಾರ ಮಾಡಲು ಬಳಸಿದ ಆ ಚಿಕ್ಕ ರಿಂಗ್​​ ಅನ್ನು ತೆಗೆದಾಗ ಒಂದರ ಹಿಂದೆ ಒಂದರಂತೆ 500 ರೂಪಾಯಿ ನೋಟುಗಳು ಬರುತ್ತಲೇ ಇರುತ್ತದೆ. ಅದನ್ನು ನೋಡಿದ ಹುಡುಗಿ ಆಶ್ಚರ್ಯದಿಂದ ಇದು ಯಾವಾಗ ಮುಗಿಯುತ್ತದೆ ಎಂದು ಕೇಳುವುದನ್ನು ಕಾಣಬಹುದು. ಮುಗಿದ ಬಳಿಕ ಸ್ನೇಹಿತರು ಆ 500 ರೂಪಾಯಿಯ ಮಾಲೆಯನ್ನು ಆಕೆಯ ಕತ್ತಿಗೆ ಹಾಕುತ್ತಾರೆ.

ಆ ಹುಡುಗಿ ಕೇಕ್​​ನಿಂದ ತೆಗೆದ ದುಡ್ಡಿನಮಾಲೆಯ್ಲಿ ಒಟ್ಟು 29 ನೋಟುಗಳಿದ್ದವು ಎನ್ನಲಾಗಿದೆ. ಇಂತಹ ಸ್ನೇಹಿತರು ಎಲ್ಲಿ ಸಿಗುತ್ತಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವಿಡಿಯೋ ಹಂಚಿಕೊಂಡಗಿನಿಂದ ಇಲ್ಲಿಯವರೆಗೆ 7 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ, ಅನೇಕರು ಪ್ರತಿಕ್ರಿಯಿಸಿದ್ದಾರೆ. ಒಟ್ಟು 14,500 ರೂಗಳನ್ನು ತೆಗೆದುಕೊಂಡಿದ್ದಾರೆ, ಅಂತಹ ಸ್ನೇಹಿತರು ಎಲ್ಲೂ ಸಿಗುವುದಿಲ್ಲ, ನನ್ನ ಜನ್ಮದಿನದಂದು ನಮಗೆ ಈ ಕೇಕ್ ಬೇಕು, ಅದೃಷ್ಟ ಇರುವವರು ಅಂತಹ ಸ್ನೇಹಿತರನ್ನು ಪಡೆಯುತ್ತಾರೆ, ಈಗ ನಾನು ಅಂತಹ ಸ್ನೇಹಿತರನ್ನು ಹುಡುಕಲು ಬಯಸುತ್ತೇನೆ ಎಂದು ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net