ವೈರಲ್ ವಿಡಿಯೋ: ಕಾಡಿನಲ್ಲಿ ಸಫಾರಿ ಹೊರಟವನನ್ನು ಎದುರುಗೊಂಡು ಮುದ್ದಾಡಿದ ಜಿರಾಫೆ!

Giraffe
Published on

ಜೋಹಾನ್ಸ್​ಬರ್ಗ್: ಕಾಡಿನಲ್ಲಿ ಸಫಾರಿ ಹೋಗುವವರು ಬಹಳಷ್ಟು ಜನ ನಿರಾಸೆಗೊಂಡು ಬರುತ್ತಾರೆ. ಏಕೆಂದರೆ ಅವರಿಗೆ ಕಾಡು ಪ್ರಾಣಿಗಳು ನೋಡಿಲಿಕ್ಕೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ಕೆಲವರು ಅಚ್ಚರಿ ಎನಿಸುವ ಸಂಗತಿಗಳನ್ನು ನೋಡಿರುತ್ತಾರೆ, ಅನುಭವಿಸಿರುತ್ತಾರೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ ನ್ಯಾಷನಲ್ ಪಾರ್ಕ್​​ನಲ್ಲಿ Timmy Moser ಎಂಬಾತ ತನ್ನ ಗೆಳತಿಯೊಂದಿಗೆ ಸೈಕ್ಲಿಂಗ್ ಮೂಲಕ ಸಫಾರಿ ಹೊರಟಾಗ ಜಿರಾಫೆಯೊಂದು ಎದುರುಗೊಂಡಿದೆ. ದೈತ್ಯ ಪ್ರಾಣಿಯೊಂದು ಎದುರು ಬಂದಿರುವುದನ್ನು ನೋಡಿ ಅವಕ್ಕಾದ Timmy Moser ಕೆಲಕಾಲ ದಂಗಾಗಿದ್ದಾನೆ. ಆದರೆ ಜಿರಾಫೆ ಆತನನ್ನು ಕಂಡು ಅವನೊಂದಿಗೆ ಕೆಲ ಹೊತ್ತು ಮುದ್ದಾಟ ನಡೆಸಿದೆ.

ಈ ಘಟನೆಯನ್ನು ಅಲ್ಲೇ ಇದ್ದ ಆತನ ಗೆಳತಿ ವಿಡಿಯೋ ಮಾಡಿಕೊಂಡಿದ್ದಾಳೆ. ನಂತರ ಇನ್ಸ್ಟಾಗ್ರಾಮ್​ಗೆ ಅಪ್ಲೋಡ್ ಮಾಡಿದ್ದಾರೆ. ನಂತರ ವೈರಲ್ ಆಗಿದೆ. ಅಂತೂ ಅಪರೂಪದ ಜಿರಾಫೆಯೊಂದು ಎದುರಾಗಿ Timmy Moser ಗೆ ಆತ್ಮೀಯತೆ ತೋರಿರುವುದು ಮುಗ್ದ ಪ್ರಾಣಿಗಳು ತಮ್ಮ ಪ್ರೀತಿ ಪಾತ್ರರೊಡನೇ ಹೇಗೆ ವರ್ತಿಸುತ್ತಾವೆ ಎಂಬುದನ್ನು ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net