

ಆನೆಗಳು ಎಷ್ಟು ದೊಡ್ಡದಾಗಿ ಕಾಣುತ್ತವೆಯೋ ಅದರ ಹೃದಯವೂ ಅಷ್ಟೇ ಶ್ರೀಮಂತವಾಗಿರುತ್ತದೆ. ಆನೆಯನ್ನು ಕಾಡಿನ ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಪರಿಗಣಿಸಲಾಗಿದೆ. ಆದರೆ ಗಜರಾಜನಿಗೆ ಒಮ್ಮೆ ಕೋಪ ಬಂದರೆ ಬೇಗ ಶಾಂತವಾಗುವುದಿಲ್ಲ. ನಾವು ಇದನ್ನು ಚೆನ್ನಾಗಿ ತಿಳಿದಿದ್ದೇವೆ. ಆದರೂ ಕೆಲವೊಮ್ಮೆ ಅಪಾಯಕಾರಿ ಎಂದು ತಿಳಿದಿದ್ದರು ಮೂರ್ಖತನದ ಕೆಲಸಗಳನ್ನು ಮಾಡುತ್ತಾರೆ. ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Viral Video).
ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಪದೇ ಪದೆ ಆನೆಯನ್ನು ಚುಡಾಯಿಸಲು ಮತ್ತು ಕಿರುಕುಳ ನೀಡಲು ಹೇಗೆ ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ನೋಡಬಹುದು. ಆನೆ ಶಾಂತಿಯುತವಾಗಿ ಹೊರಡಲು ಪ್ರಯತ್ನಿಸುತ್ತಿದೆ ಆದರೆ ಯುವಕ ಅದರ ಸುತ್ತಲೂ ಸುಳಿದಾಡುತ್ತಿದ್ದಾನೆ ಮತ್ತು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾನೆ. ಹಲವಾರು ಬಾರಿ ಆನೆ ಅವನ ಮೇಲೆ ದಾಳಿ ಮಾಡಲು ವೇಗವಾಗಿ ಓಡುತ್ತದೆ ಆದರೆ ನಿಲ್ಲುವುದನ್ನು ನೀವು ನೋಡಬಹುದು.
ಅಂತಿಮವಾಗಿ ಆನೆಯು ಯುವಕನನ್ನು ನಿರ್ಲಕ್ಷಿಸಿ ದೂರ ಹೋಗುತ್ತದೆ. ಆದರೂ ಆ ಹುಡುಗ ಆನೆಯನ್ನು ಬಿಡುವುದಿಲ್ಲ. ಆನೆಯನ್ನು ಹಿಂಬಾಲಿಸುತ್ತಾ ತನ್ನ ಚಾಲಿಯನ್ನು ಮುಂದುವರಿಸುತ್ತಾನೆ. ಈ ವಿಡಿಯೋ ನೋಡಿದ್ರೆ ಸಿಟ್ಟು ಬರುವುದಂತೂ ಖಚಿತ. ವಿಡಿಯೋ ಕೊನೆಯಲ್ಲಿ ಇಡೀ ಆನೆಗಳ ಹಿಂಡು ಒಟ್ಟಿಗೆ ಕಾಣಿಸಿಕೊಂಡಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ IFS ಅಧಿಕಾರಿ ಪ್ರವೀಣ್ ಕಸ್ವಾನ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಾಣಿಯನ್ನು ಗುರುತಿಸಿ. ನೀವು ಚಿಕ್ಕವರಾಗಿರಬಹುದು ಮತ್ತು ಆನೆಯನ್ನು ಮೀರಿಸಬಹುದು, ಆದರೆ ಈ ಸಿಟ್ಟಿಗೆದ್ದ ಪ್ರಾಣಿಯು ಕೆಲವು ದಿನಗಳವರೆಗೆ ಮನುಷ್ಯನನ್ನು ನೋಡಿದರೆ ಅದು ಸಾಮಾನ್ಯವಾಗಿ ವರ್ತಿಸುವುದಿಲ್ಲ. ನಿಮ್ಮ ಮೋಜಿಗಾಗಿ ಅರಣ್ಯ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂದು ಬರೆದಿದ್ದಾರೆ.
ವೈರಲ್ ಆದ್ ಒಂದು ದಿನದಲ್ಲಿ ಈ ವಿಡಿಯೋವನ್ನು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬಹುತೇಕರು ಯುವಕನ ಮೇಲೆ ಕೋಪಗೊಂಡಿದ್ದಾರೆ ಮತ್ತು ಅದನ್ನು ಅಪರಾಧ ಎಂದು ಹೇಳುತ್ತಿದ್ದಾರೆ. ಅನೇಕರು ಯುವಕನ ವಿರುದ್ಧ ಕಾನೂನು ಕ್ರಮಕ್ಕೆ ನೇರವಾಗಿ ಒತ್ತಾಯಿಸಿದ್ದಾರೆ.(ಏಜೆನ್ಸೀಸ್)