ಮನುಷ್ಯರಂತೆ ಎರಡು ಕಾಲುಗಳ ಮೇಲೆ ನಿಂತ ಕರಡಿ; ಚೀನಾದ Viral Video ನೋಡಿ ಇದು ನಕಲಿ ಅಲ್ಲವೇ ಎಂದ ನೆಟ್ಟಿಗರು

Untitled design - 2025-01-13T192841.703
Published on

ಬೀಜಿಂಗ್​​: ಕರಡಿಗಳು ನೋಡಲು ಎಷ್ಟು ಮುದ್ದಾಗಿರುತ್ತವೆಯೋ ಅದರ ಎಲ್ಲಾ ಕ್ರಿಯೆಗಳು ಅಷ್ಟೇ ಮನೋಹರವಾಗಿರುತ್ತವೆ. ಅದಕ್ಕಾಗಿಯೇ ಕೆಲವೊಮ್ಮೆ ಕರಡಿಗಳು ತಮ್ಮ ವಿಚಿತ್ರ ಕಾರ್ಯಗಳಿಂದ ಜನರನ್ನು ಆಶ್ಚರ್ಯಗೊಳಿಸುತ್ತವೆ. ಇದೀಗ ಅಂತಹದ್ದೇ ಕರಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಈ ವಿಡಿಯೋ ಚೀನಾದ ಮೃಗಾಲಯದ್ದು ಎಂದು ಹೇಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕರಡಿ ಮನುಷ್ಯರಂತೆ ಎರಡು ಕಾಲುಗಳ ಮೇಲೆ ನಿರಂತರವಾಗಿ ನಿಂತಿರುವುದನ್ನು ನೀವು ನೋಡಬಹುದು. ಹೆಚ್ಚು ಸಮಯ ನಿಲ್ಲಲು ತನ್ನನ್ನು ತಾನು ಚೆನ್ನಾಗಿ ಸಮತೋಲನಗೊಳಿಸುತ್ತಿದೆ. ಇದಲ್ಲದೆ ಅದರ ದೈಹಿಕ ರಚನೆಯು ಇತರ ಕರಡಿಗಳಿಗಿಂತ ಭಿನ್ನವಾಗಿದೆ. ಕರಡಿ ತನ್ನ ಎರಡು ಕಾಲುಗಳ ಮೇಲೆ ನಿರಂತರವಾಗಿ ನಿಂತು ತನ್ನ ಮುಂಭಾಗದ ಕಾಲುಗಳನ್ನು ಮತ್ತೆ ಮತ್ತೆ ಎತ್ತುತ್ತಿರುವುದನ್ನು ಕಾಣಬಹುದು.

ಈ ವಿಡಿಯೋವನ್ನು ಇದುವರೆಗೆ 1.3 ಮಿಲಿಯನ್​ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದವರು ಇದು ನಿಜವಾದ ಕರಡಿಯೋ ಇಲ್ಲವೋ ಎಂಬ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಏಕೆಂದರೆ ಈ ಹಿಂದೆ ಚೀನಾ ಮೃಗಾಲಯದಲ್ಲಿ ಸುಳ್ಳಿನ ಪಾಂಡಾಗಳಿರುವುದು ಬೆಳಕಿಗೆ ಬಂದಿತ್ತು. ಒಳ್ಳೆಯ ಪ್ರಯತ್ನ ಆದರೆ ಮನುಷ್ಯನು ಕರಡಿ ವೇಷಭೂಷಣದಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ, ಇದು ತುಂಬಾ ತೆಳುವಾದ ಕರಡಿ, ಇದು ನಿಜವಾದ ಕರಡಿ ಎಂದು ನಾನು ಭಾವಿಸುತ್ತೇನೆ ಏಕೆಂದರೆ ತನ್ನ ಕಾಲುಗಳ ಮೇಲೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತಿದೆ, ಕೆಟ್ಟ ನಟನೆಗಾಗಿ ಹಣವನ್ನು ಕಡಿತಗೊಳಿಸಿ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net