

ಮಕ್ಕಳ ಅನೇಕ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮಕ್ಕಳ ವಿಡಿಯೋ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿ ಕೆಲವು ವಿಡಿಯೋಗಳನ್ನು ಬಹಳ ಮುದ್ದು ಎಂಬಂತೆ ಇರುತ್ತವೆ. ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಅದರಲ್ಲಿ ತನ್ನ ಚೆಂದದ ತಂಗಿಗೆ ಅಣ್ಣ ಫೋಟೋಗೆ ಪೋಸ್ ಕೊಡುವಂತೆ ಕೇಳಿ ಕ್ಲಿಕ್ ಮಾಡಿದ್ದಾನೆ.
ಈ ವಿಡಿಯೋ ಅಮೆರಿಕ ಮೂಲದ ಕುಟುಂಬದವರದ್ದು ಎನ್ನಲಾಗಿದೆ. ವೈರಲ್ ವಿಡಿಯೋದಲ್ಲಿ ಐದು ವರ್ಷದ ಮಗು ತನ್ನ ಹೊಸ ಪೋಲರಾಯ್ಡ್ ಕ್ಯಾಮೆರಾದೊಂದಿಗೆ ತನ್ನ ತಂಗಿ ನೋರಾಳ ಚಿತ್ರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಮ್ಯಾಡಿಸನ್ ಮೆಲ್ಫಿ ಅವರು ತಮ್ಮ ಸಹೋದರಿಯ ಫೋಟೋಶೂಟ್ ಅನ್ನು ಎಷ್ಟು ಪ್ರೀತಿಯಿಂದ ಮಾಡುತ್ತಾರೆ ಎಂಬುದನ್ನು ನೋಡಬಹುದು.
ಮೊದಲು ತನ್ನ ತಂಗಿಯ ಬಳಿ ಕೆಲವು ಫೋಟೋಗಳನ್ನು ತೆಗೆಯಬಹುದೇ ಎಂದು ಕೇಳುತ್ತಾನೆ. ತಂಗಿಯಿಂದ ಅನುಮತಿ ಪಡೆದ ನಂತರವೇ ಕ್ಯಾಮೆರಾದಿಂದ ಭಾವಚಿತ್ರವನ್ನು ಕ್ಲಿಕ್ಕಿಸುತ್ತಾನೆ. ತಂಗಿಯೊಂದಿಗೆ ಮಾತನಾಡುವ ರೀತಿ ಎಷ್ಟು ಸೊಗಸಾಗಿದೆ ಎಂದರೆ ಅದನ್ನು ಕೇಳಿದರೆ ಯಾರಿಗಾದರೂ ಚೆಂದ ಎನ್ನಿಸುತ್ತದೆ. ಅಷ್ಟೇ ಅಲ್ಲ ತಂಗಿಗೆ ವಿವಿಧ ಭಂಗಿಗಳನ್ನು ಫೋಟೋಗೆ ಪೋಸ್ ಕೊಡಲು ತೋರಿಸುತ್ತಾರೆ.
ಇದುವರೆಗೂ ಈ ವಿಡಿಯೋವನ್ನು 10 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಒಟ್ಟಾರೆಯಾಗಿ ಈ ವಿಡಿಯೋ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಎರಡೂ ಮಕ್ಕಳ ಮೇಲೆ ಜನ ಪ್ರೀತಿಯನ್ನು ತೋರಿಸುತ್ತಾ ಆರೈಸುತ್ತಿದ್ದಾರೆ.