ನಮಾಜ್​, ಧಾರ್ಮಿಕ ಹೆಸರಿನಲ್ಲಿ ಸರ್ಕಾರ ನಿಯಮ ಉಲ್ಲಂಘಿಸುವುದನ್ನು ಖಂಡಿಸಿದ ಮೌಲಾನಾ ಮಹಮೂದ್

Namaz
Published on

ನವದೆಹಲಿ: ನಮಾಜ್​ ಅಥವಾ ಧಾರ್ಮಿಕ ಹೆಸರಿನಲ್ಲಿ ಸಾಮಾಜಿಕ ಅಂತರ ಅಥವಾ ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸುವುದು ಮತ್ತು ಉತ್ತೇಜಿಸುವುದನ್ನು ಜಮಿಯತ್​ ಉಲೆಮಾ-ಇ-ಹಿಂದ್​ ಮಹಾ ಕಾರ್ಯದರ್ಶಿ ಮೌಲಾನಾ ಮಹಮೂದ್ ಅವರು ಖಂಡಿಸಿದ್ದಾರೆ.​

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, ಕರೊನಾ ವೈರಸ್​ ಹರಡುವುದನ್ನು ತಡೆಗಟ್ಟಲು ಭಾರತೀಯ ಮುಸ್ಲಿಮರೆಲ್ಲರೂ ಒಗ್ಗೂಡಿದ್ದಾರೆ. ಇದೀಗ ತಬ್ಲಿಘಿ ಜಮಾತ್​ನಿಂದ ಅಂಟಿಕೊಂಡಿರುವ ಕಳಂಕವನ್ನು ತೊಲಗಿಸಬೇಕಾಗಿದೆ ಎಂದು ಕರೆ ನೀಡಿದರು.

ಭಾರತದಲ್ಲಿ ಲಕ್ಷಾಂತರ ಮಸೀದಿಗಳಿವೆ. ಕರೊನಾ ಮಣಿಸಲು ಸರ್ಕಾರ ನೀಡಿರುವ ಆದೇಶವನ್ನು ಎಲ್ಲರೂ ಪಾಲಿಸುತ್ತಿದ್ದಾರೆ. ಭಾರತೀಯ ಮುಸ್ಲಿಮರು ನೂರಕ್ಕೆ ನೂರರಷ್ಟು ದೇಶದ ಜತೆಗಿರುತ್ತಾರೆ ಎಂದು ಮೌಲಾನ ಮದನಿ ಸ್ಪಷ್ಟನೆ ನೀಡಿದರು. ಅಲ್ಲದೆ, ನಮಾಜ್​ ಹೆಸರಿನಲ್ಲಿ ಯಾರು ನಿಯಮವನ್ನು ಉಲ್ಲಂಘಿಸುತ್ತಾರೋ ಅವರು ಹರಾಮ್​ಗಳು ಎಂದು ಕಿಡಿಕಾರಿದರು.

ಕರೊನಾ ಮಣಿಸಲು ಲಾಕ್​ಡೌನ್​ ಅನುಸರಿಸಬೇಕಾಗಿಲ್ಲ. ಮುಸ್ಲಿಂರನ್ನು ಧಾರ್ಮಿಕ ಚಟುವಟಿಕೆಯಿಂದ ದೂರವಿಡಲು ಮಾಡಿರುವ ಕುತಂತ್ರವಿದು ಎಂಬ ತಬ್ಲಿಘಿ ಜಮಾತ್​ ಮರ್ಕಜ್​ ಮುಖ್ಯಸ್ಥ ಮೌಲಾನಾ ಸಾದ್​ ಆಡಿಯೋ ವಿಚಾರವಾಗಿ ಮಾತನಾಡಿ, ಇಂತಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.

ಆಡಿಯೋ ಸರಿ ಇದೆಯೋ? ಇಲ್ಲವೋ? ಎಂಬುದನ್ನು ಪರೀಕ್ಷಿಸಬೇಕು. ಒಂದು ವೇಳೆ ಆಡಿಯೋ ಅಧಿಕೃತ ಎಂದಾದರೆ ಅದರಲ್ಲಿರುವ ಸಂದೇಶ ಖಂಡಿತವಾಗಿಯು ತಪ್ಪು ಮತ್ತು ಅಪರಾಧ ಎಂದು ಟೀಕಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net