More

    100 ಕೋಟಿ ಡಾಲರ್ ನಿಧಿ ಭಾರತಕ್ಕೆ ನೀಡಲು ಒಪ್ಪಿತು ವಿಶ್ವ ಬ್ಯಾಂಕ್

    ನವದೆಹಲಿ: ಕರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಭಾರತ ಹಲವು ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಆ ಕಾರ್ಯಗಳನ್ನು ಸುಸೂತ್ರವಾಗಿ ನಡೆಸುವುದಕ್ಕೆ ಅನುಕೂಲವಾಗುವಂತೆ ವಿಶ್ವಬ್ಯಾಂಕ್ ಗುರುವಾರ 100 ಕೋಟಿ ಡಾಲರ್​ ತುರ್ತು ಹಣಕಾಸಿನ ನೆರವು ನೀಡಲು ಒಪ್ಪಿಗೆ ನೀಡಿದೆ.

    ವಿಶ್ವ ಬ್ಯಾಂಕ್ ಘೋಷಿಸಿರುವ ಮೊದಲ ಹಣಕಾಸು ನೆರವು ಯೋಜನೆ 1.9 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದು, ಇದರ ಭಾಗವಾಗಿಯೇ ಭಾರತಕ್ಕೂ ನೆರವು ಲಭಿಸುತ್ತಿದೆ. ಭಾರತವೂ ಸೇರಿ 25 ರಾಷ್ಟ್ರಗಳಿಗೆ ಈ ನೆರವು ಸಿಗುತ್ತಿದೆ. ಭಾರತಕ್ಕೆ ಅಧಿಕ ನೆರವು ಲಭಿಸುತ್ತಿದೆ. ಉತ್ತಮ ಸ್ಕ್ರೀನಿಂಗ್, ಕಾಂಟ್ಯಾಕ್ಟ್ ಟ್ರೇಸಿಂಗ್​, ಲ್ಯಾಬ್ ಡಯಾಗ್ನೋಸ್ಟಿಕ್ಸ್​, ಪಿಪಿಇ ಕಿಟ್ ಸಿದ್ಧಪಡಿಸುವುದು, ಐಸೋಲೇಷನ್ ವಾರ್ಡ್ ಸಿದ್ಧಪಡಿಸುವುದಕ್ಕೆ ಈ ಹಣವನ್ನು ಉಪಯೋಗಿಸಬಹುದು. ತ್ವರಿತಗತಿಯಲ್ಲಿ ಕೆಲಸವನ್ನು ಪೂರೈಸಿಕೊಳ್ಳಬಹುದು ಎಂದು ವಿಶ್ವಬ್ಯಾಂಕ್ ಹೇಳಿದೆ.

    ದಕ್ಷಿಣ ಏಷ್ಯಾದಲ್ಲಿ ವಿಶ್ವಬ್ಯಾಂಕ್ ಭಾರತವನ್ನು ಹೊರತು ಪಡಿಸಿ ಪಾಕಿಸ್ತಾನಕ್ಕೆ 200 ದಶಲಕ್ಷ ಡಾಲರ್​, ಅಫ್ಘಾನಿಸ್ತಾನಕ್ಕೆ 100 ದಶಲಕ್ಷ ಡಾಲರ್​, ಮಾಲ್ಡೀವ್ಸ್​ಗೆ 7.3 ದಶಲಕ್ಷ ಡಾಲರ್​, ಶ್ರೀಲಂಕಾಕ್ಕೆ 128.6 ದಶಲಕ್ಷ ಡಾಲರ್​ ನೆರವನ್ನು ನೀಡಲು ಒಪ್ಪಿಗೆ ಸೂಚಿಸಿದೆ. ಮುಂದಿನ 15 ತಿಂಗಳ ಅವಧಿಯಲ್ಲಿ 160 ಶತಕೋಟಿ ಹಣಕಾಸು ನೆರವು ನೀಡುವ ನಿಟ್ಟಿನಲ್ಲಿ ಬ್ಯಾಂಕ್ ಕೆಲಸ ಮಾಡುತ್ತಿರುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ. (ಏಜೆನ್ಸೀಸ್)

    ಕರೊನಾ ತಡಗೆ ಏಪ್ರಿಲ್ 5ರ ಸಂಕಲ್ಪ ಏನು- ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ವಿವರಿಸಿದ್ದಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts