

ಕೋಲಾರ: ಕುಗ್ರಾಮಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವ ಸಲುವಾಗಿ ತಿಂಗಳಿಗೊಮ್ಮೆ ಗ್ರಾಮ ವಾಸ್ಥವ್ಯ ವಾಡಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಗಾಂಧಿ ಪ್ರತಿಮೆ ಎದುರು ಮನ್ವಂತರ ಪ್ರಕಾಶನ ಶನಿವಾರ ಆಯೋಜಿಸಿದ್ದ ಹೊಸ ವರ್ಷ ಹೊಸ ಸಂಕಲ್ಪ ಕಾರ್ಯಕ್ರಮದಲ್ಲಿ ವಾತನಾಡಿ, ತೀರಾ ಹಿಂದುಳಿದ, ಗಡಿಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಿ ಆ ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗುವುದು. ಪರಿಸರ ಉಳಿಸುವ ಸಂಕಲ್ಪ ಪ್ರತಿಯೊಬ್ಬರೂ ವಾಡಬೇಕು. ಇದಕ್ಕೆ ಪಕ್ಷಾತೀತವಾಗಿ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಕೆರೆ, ಅರಣ್ಯ ಮತ್ತು ಬೆಟ್ಟಗುಡ್ಡಗಳಿದ್ದು, ಅವುಗಳ ಜತೆಗೆ ರಸ್ತೆ ಬದಿಯಲ್ಲಿ ಗಿಡ ಬೆಳೆಸಿ ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುವಾರ್ ವಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸುತ್ತೇನೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ. ಇದಕ್ಕೆ ನಾವೇ ಮೊದಲು ವಾದರಿಯಾಗಬೇಕು. ಕಾರ್ಯಕರ್ತರು ಮತ್ತು ಅಭಿವಾನಿಗಳು ನನ್ನನ್ನು ಅಭಿನಂದಿಸಲು ಹಾರ, ತುರಾಯಿ ತರುವುದು ಬೇಡ. ಮರಳು ವಾಫಿಯಾಗೆ ಕಡಿವಾಣ ಹಾಕಿ ಕೆರೆ, ಕಾಲುವೆ ಉಳಿಸಬೇಕಿದೆ. ಎಲ್ಲರು ಸೇರಿ ಪರಿಸರ ಸಂರಕ್ಷಣೆಗೆ ಸಂಕಲ್ಪ ವಾಡೋಣ ಎಂದರು.
ಕೋಲಾರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಓಂಶಕ್ತಿ ಚಲಪತಿ ವಾತನಾಡಿ, ನಗರದ ಸುತ್ತ ವರ್ತುಲ ರಸ್ತೆ ನಿರ್ಮಿಸಿ ಟ್ರಾಫಿಕ್ ಮತ್ತಿತರ ಸಮಸ್ಯೆಗಳಿಗೆ ಕಡಿವಾಣ ಹಾಕಲಾಗುವುದು. 18 ಕಿಮೀ ದೂರದ ಈ ವಾರ್ಗಕ್ಕೆ 314 ಕೋಟಿ ರೂಪಾಯಿ ಅಗತ್ಯವಿದ್ದು, ವಾಸ್ಟರ್ ಪ್ಲಾನ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮನ್ವಂತರ ಪ್ರಕಾಶನ ಸಂಸ್ಥಾಪಕ ಪಾ.ಶ್ರೀ.ಅನಂತರಾಮ್, ಆಧ್ಯಾತ್ಮಿಕ ವಿಭಾಗದ ರಾಜ್ಯ ಸಂಚಾಲಕ ಎಸ್.ಮಂಜುನಾಥ್, ಖಜಾಂಚಿ ಎಸ್.ಎನ್.ಪ್ರಕಾಶ್, ಜಿಲ್ಲಾ ಪತ್ರಕರ್ತರ ಸಂದ ಅಧ್ಯಕ್ಷ ವಿ.ಮುನಿರಾಜು, ಕರವೇ ಜಿಲ್ಲಾಧ್ಯಕ್ಷ ರಾವೇಂದ್ರ, ಕನ್ನಡಪರ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ಅ.ಕೃ.ಸೋಮಶೇಖರ್, ಕೂಡಾ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ರೆಡ್ ಕ್ರಾಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ನಂದೀಶ್, ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಮಮತಾರೆಡ್ಡಿ, ವಿವಿಧ ಸಂಘಟನೆ ಮುಕಂಡರಾದ ಎ.ಬಾಲನ್, ಎಲ್.ನಿರಂಜನ್, ರವೀಂದ್ರ ಸಿಂಗ್, ನಾಗರಾಜ್, ಬಿ.ಎನ್.ಸುರೇಶ್, ತ್ಯಾಗರಾಜ್, ಬಾ.ಹಾ.ಶೇಖರಪ್ಪ, ಕುರುಬರ ಪೇಟೆ ವೆಂಕಟೇಶ್, ಅರುಣಮ್ಮ, ಆದಿಮ ಗೋವಿಂದಪ್ಪ ಇತರರು ಇದ್ದರು.
ಗಡಿಶಾಲೆಗಳಿಗೆ ಕಾಯಕಲ್ಪ: ಗಾಂಧಿವನದ ಗಾಂಧಿ ಪ್ರತಿಮೆ ಮುಂಭಾಗ ಮೇಲ್ಛಾವಣಿಗೆ ಶೀಟ್ ಹೊದಿಸಿ ಅಭಿವೃದ್ಧಿಪಡಿಸಲಾಗುವುದು. ಗಡಿಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯ ಎಲ್ಲ ಕಡೆಯಿಂದ ಜಾನಪದ ಕಲಾವಿದರನ್ನು ಕರೆಸಿ ಅದ್ಧೂರಿಯಾಗಿ ಆಚರಿಸಲು ಸಹಕರಿಸುತ್ತೇನೆ ಎಂದು ಸಂಸದ ಮುನಿಸ್ವಾಮಿ ಭರವಸೆ ನೀಡಿದರು.