ಕ್ರಿಮಿನಲ್​ ವಿಕಾಸ್​ ದುಬೆಯ ಪತ್ನಿ, ಮಗನೂ ಅರೆಸ್ಟ್​...

Vikas Dubey
Published on

ಲಖನೌ: ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆ ಗೈದ ನಟೊರಿಯಸ್​ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಇಂದು ಮಧ್ಯಪ್ರದೇಶ ಪೊಲೀಸರು ಉಜ್ಜಯನಿಯ ಮಹಾಕಾಲ ದೇವಸ್ಥಾನದಲ್ಲಿ ಬಂಧಿಸಿದ್ದಾರೆ.

ವಿಕಾಸ್​ ದುಬೆಯನ್ನು ಈಗಾಗಲೇ ಉತ್ತರ ಪ್ರದೇಶ ಪೊಲೀಸ್​ ಸ್ಪೆಶಲ್​ ಟಾಸ್ಕ್​ ಫೋರ್ಸ್​​ನ ವಶಕ್ಕೆ ನೀಡಲಾಗಿದ್ದು, ಮಧ್ಯಪ್ರದೇಶದಿಂದ ರಸ್ತೆ ಮಾರ್ಗವಾಗಿಯೇ ಉತ್ತರ ಪ್ರದೇಶಕ್ಕೆ ಆತನನ್ನು ಕರೆತರಲಾಗಿದೆ.

ಇದೀಗ ವಿಕಾಸ್​ ದುಬೆಯ ಪತ್ನಿ ಹಾಗೂ ಮಗನನ್ನೂ ಲಖನೌನಲ್ಲಿ ಉತ್ತರ ಪ್ರದೇಶ ಪೊಲಿಸರು ಬಂಧಿಸಿದ್ದಾಗಿ ವರದಿಯಾಗಿದೆ.

ಲಖನೌದ ಕೃಷ್ಣಾ ನಗರದ ಪ್ರದೇಶದಲ್ಲಿ ವಿಕಾಸ್​ ದುಬೆಯ ಪತ್ನಿ ಮತ್ತು ಮಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net