ದಳಪತಿ ವಿಜಯ್​ 'ಮಾಸ್ಟರ್' ಬಿಡುಗಡೆಗೆ ಹೊಸ ದಿನಾಂಕ ನಿಗದಿ

122
Published on

ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದೆ. ಕನ್ನಡದಲ್ಲಿನ ಸ್ಟಾರ್ ನಟರ ಸಿನಿಮಾಗಳು ಸದ್ಯಕ್ಕೆ ಬಿಡುಗಡೆ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿವೆ. ಇನ್ನು ಕೆಲವು ಮುಂದಿನ ವರ್ಷಕ್ಕೆ ಮುಂದೂಡಿ ಕೈಕಟ್ಟಿ ಕುಳಿತಿವೆ. ಅದೆಲ್ಲದರ ನಡುವೆ ವಿಜಯ್​ ಜನ್ಮದಿನ ಜೂನ್​ 22ರಂದು ಬಿಡುಗಡೆಯಾಗಬೇಕಿದ್ದ ತಮಿಳಿನ ಮಾಸ್ಟರ್​ ಸಿನಿಮಾ ಇದೀಗ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ.

ಹೌದು, ದಳಪತಿ ವಿಜಯ್​ ನಾಯಕತ್ವದಲ್ಲಿ ಸಿದ್ಧವಾದ ಮಾಸ್ಟರ್ ಈಗಾಗಲೇ ತಮಿಳುನಾಡಿನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಸಾಲಿನಲ್ಲಿ ಮೊದಲ ಪಟ್ಟಿಯಲ್ಲಿತ್ತು. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡು ಎರಡು ವಾರ ಕಳೆದಿರುತ್ತಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಬಿಡುಗಡೆಗೆ ಕೊಕ್ಕೆ ಬಿತ್ತು. ಅದರಂತೆ ಇದೀಗ ದೀಪಾವಳಿ ಪ್ರಯುಕ್ತ ನವೆಂಬರ್​ 12ಕ್ಕೆ ಸಿನಿಮಾ ಬಿಡುಗಡೆ ಮಾಡಿಕೊಳ್ಳಲು ತಂಡ ಪ್ಲ್ಯಾನ್​ ಮಾಡಿದೆ ಎನ್ನಲಾಗುತ್ತಿದೆ.

ಲೋಕೇಶ್ ಕನಗರಾಜ್​ ನಿರ್ದೇಶನದಲ್ಲಿ ಸಿದ್ಧವಾಗಿರುವ ಗ್ಯಾಂಗ್​ಸ್ಟರ್​ ಡ್ರಾಮಾ ಶೈಲಿಯ ಸಿನಿಮಾದಲ್ಲಿ ವಿಜಯ್​ ಸೇತುಪತಿ ಖಳನಟನಾಗಿ ನಟಿಸಿದ್ದಾರೆ. ಕ್ಸೇವಿಯರ್ ಬಿಟ್ಟೋ ನಿರ್ಮಾಣ ಮಾಡಿದ್ದು, ಅನಿರುದ್ಧ ರವಿಚಂದ್ರನ್​ ಸಂಗೀತ ನೀಡಿದ್ದಾರೆ. ಮಾಳವಿಕಾ ಮೋಹನನ್​ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net