

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋನ ಆರನೇ ವಾರದಲ್ಲಿ ನಡೆದ ಡಬಲ್ ಎಲಿಮಿನೇಷನ್ನಲ್ಲಿ ಸ್ಪರ್ಧಿಗಳಾಗಿದ್ದ ಭಾಗ್ಯಶ್ರೀ ಮತ್ತು ಇಶಾನಿ ಹೊರಬಂದರು. ಬಿಗ್ ಮನೆಯಿಂದ ಔಟ್ ಆದ ಬಳಿಕ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾದ ಇಶಾನಿ ಬಿಗ್ಬಾಸ್ ಮನೆಯೊಳಗಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಮನೆಯೊಳಗೆ ಇದ್ದ ಅಷ್ಟು ದಿನಗಳ ಪಯಣವನ್ನು ಮೆಲುಕು ಹಾಕಿದ ಇಶಾನಿ, ತಮಗೆ ಮನೆಯಲ್ಲಿ ಉಳಿಯಲು ಒಂದು ಚಾನ್ಸ್ ಕೊಡಬಹುದಿತ್ತು ಎಂದು ಅಭಿಪ್ರಾಯಿಸಿದರು. ಈ ಮಧ್ಯೆ ಪ್ರತಾಪ್ ಮತ್ತು ವಿನಯ್ ನಡುವೆ ಉಂಟಾದ ಒಂದು ಬಿರುಸಿನ ವಾಗ್ದಾಳಿಯಲ್ಲಿ ವಿನಯ್ ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್ಗೆ ಗುರಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಶಾನಿ ಈಗ ಪ್ರತಿಕ್ರಿಯಿಸಿದ್ದಾರೆ.
ಡ್ರೋಣ್ ಪ್ರತಾಪ್ಗೆ ಹೊರಗಡೆ ನನಗೂ 35 ಕಂಪೆನಿಯಿದೆ ಎಂದು ವಿನಯ್ ಹೇಳಿದ್ದನ್ನು ನೆನಪಿಸಿಕೊಂಡ ಇಶಾನಿ, "ಇದು ತುಂಬ ಹಾಸ್ಯಸ್ಪದವಾಗಿದೆ, ಟ್ರೋಲ್ ಮಾಡಿದ್ದಾರೆ ಎಂದರೆ ಏನೂ ಹೇಳಲಿ? ಜನಗಳಿಗೆ ಏನು ಅನಿಸುತ್ತೋ ಅದನ್ನೇ ಮಾಡಿದ್ದಾರೆ" ಎಂದು ಹೇಳಿದರು. ಇತರೆ ಸ್ಪರ್ಧಿಗಳ ಕುರಿತು ಇಶಾನಿ ಬಿಚ್ಚಿಟ್ಟ ಹಲವು ಸಂಗತಿಗಳನ್ನು ತಿಳಿಯಲು ಕೆಳಗಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ, ಪೂರ ವಿಶೇಷ ಸಂದರ್ಶನವನ್ನು ವೀಕ್ಷಿಸಿ.