ವಿಜಯವಾಣಿ ಜನಮತ: ತಿಳಿಯಿರಿ ನಿಮ್ಮ ಬ್ಯಾಂಕ್ ಬಗ್ಗೆ!

BANK MAIN
Published on

ಇದುವರೆಗೂ ಬ್ಯಾಂಕುಗಳು ನಮ್ಮ ಇತಿಹಾಸ ಕೇಳಿ (ಓಇ) ಮಾಹಿತಿಯನ್ನು ಪಡೆದು ಕೊಳ್ಳುತ್ತಿದ್ದವು. ಆದರೆ, ಈಗ ನಮ್ಮ ಸರದಿ. ಏನೆಂದರೆ, ಗ್ರಾಹಕರಾದ ನಾವು ಬ್ಯಾಂಕಿನ ಇತಿಹಾಸ, ಚರಿತ್ರೆ, ಭವಿಷ್ಯದ ಯೋಜನೆ ಮುಂತಾದ ಮಾಹಿತಿಯನ್ನು ಪಡೆದು ಕೊಳ್ಳುವ ಕಾಲ ಸನ್ನಿಹಿತವಾಗಿದೆ.

ಗ್ರಾಹಕರಾದ ನಾವು ಓಆ (ಓಟಡಿ ್ಗu ಆಚ್ಞk)ಯನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಅವರುಗಳು ಯಾರಿಗೆ ನಮ್ಮ ಹಣವನ್ನು ಸಾಲವಾಗಿ ಕೊಡುತ್ತಾರೆ, ಹಣ ವಸೂಲಿಯಾಗುತ್ತಿದೆಯಾ? ಯಾರು ಹಣ ವಾಪಸು ಕೊಡುತ್ತಿಲ್ಲ? ಮುಂತಾದ ಮಾಹಿತಿಯನ್ನು ನಮಗೆ ಅವರು ತಿಳಿಸುವುದು ಅಗತ್ಯವಾಗಿದೆ. ಸಂಬಂಧಪಟ್ಟ ಆರ್​ಬಿಐ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲರ ಅನುಕೂಲಕ್ಕಾಗಿ ಬ್ಯಾಂಕಿನಲ್ಲಿ ಎಲ್ಲರಿಗೂ ಕಾಣುವಂತೆ ಮಾಹಿತಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ ಎಂದು ಗ್ರಾಹಕರು ಕೇಳುವುದು ತಪ್ಪೇನಿಲ್ಲ ಅಲ್ವೇ...!

| ವಿ.ವಿಜಯೇಂದ್ರ ರಾವ್, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net