More

    ಟೆಕ್ಕಿಗಳೇ ಹುಷಾರ್​!: ಬೆಂಗಳೂರಿನ ಎರಡು ಟಾಪ್​ ಟೆಕ್​ ಕಂಪನಿಗಳಲ್ಲೇ ಕರೊನಾ ಕಾಣಿಸಿಕೊಂಡಿದ್ದು

    ಬೆಂಗಳೂರು: ಚೀನಾದಲ್ಲಿ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡ ಕರೊನಾ ವೈರಸ್​ ದೇಶ ಮತ್ತು ರಾಜ್ಯಕ್ಕೆ ಬಂದಾಗಿದೆ. ಬೆಂಗಳೂರಿನಲ್ಲಿ ನಾಲ್ಕು ಜನರಲ್ಲಿ ವೈರಸ್​ ಇರುವುದು ಧೃಡವಾಗಿದೆ. ನಾಲ್ವರಲ್ಲಿ ಇಬ್ಬರು ಪ್ರಸಿದ್ಧ ಟೆಕ್​ ಕಂಪನಿಯ ಸಿಬ್ಬಂದಿಗಳು ಎನ್ನುವ ಮಾಹಿತಿ ಲಭ್ಯವಾಗಿದೆ.

    ಟೆಕ್​​ ಕಂಪನಿಯೊಂದರಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ 46 ವರ್ಷದ ಉದ್ಯೋಗಿ ಇತ್ತೀಚೆಗೆ ಅಮೆರಿಕದ ಆಸ್ಟಿನ್ ಮತ್ತು ಟೆಕ್ಸಾಸ್​ ನಗರಕ್ಕೆ​ ಪ್ರವಾಸ ಕೈಗೊಂಡಿದ್ದರು. ದುಬೈ ಮಾರ್ಗವಾಗಿ ಬೆಂಗಳೂರಿಗೆ ಮಾರ್ಚ್​ 1ರಂದು ಬಂದಿಳಿದಿದ್ದರು. ಅಮೆರಿಕದಿಂದ ಬಂದ ಅವರಲ್ಲಿ ವೈರಸ್​ ಇರುವುದು ಧೃಡವಾಗಿದೆ. ಅವರ ಜತೆಯಲ್ಲಿ ಅವರ ಪತ್ನಿ (47) ಮತ್ತು ಮಗಳಲ್ಲಿಯೂ (13) ಸಹ ವೈರಸ್​ ಇರುವುದು ಧೃಡವಾಗಿದೆ.

    ಮತ್ತೊಂದು ಟೆಕ್​ ಕಂಪನಿಯ ಉದ್ಯೋಗಿ(50)ಯೊಬ್ಬರು ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ಲಂಡನ್​ ಮಾರ್ಗವಾಗಿ ಬೆಂಗಳೂರಿಗೆ ಬಂದಿಳಿದಿದ್ದರು. ಅವರಲ್ಲಿಯೂ ಸಹ ಸೋಂಕು ಇರುವುದು ಪತ್ತೆಯಾಗಿದೆ.

    ಸೋಂಕು ತಗುಲಿರುವ ಟೆಕ್​ ಕಂಪನಿಯ ಸಿಬ್ಬಂದಿಯು ಕಚೇರಿಯ ನಾಲ್ಕನೇ ಫ್ಲೋರ್​ನಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ವಿದೇಶದಿಂದ ಬಂದ ನಂತರ ಎರಡು ದಿನಗಳ ಕಾಲ ಅವರು ಕಚೇರಿಗೆ ತೆರಳಿದ್ದು, ನಂತರ ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸೋಂಕು ತಗುಲಿದ ನಂತರ ಅವರು 2,666 ಜನರ ಜತೆ ಸಂಪರ್ಕ ಬೆಳೆಸಿದ್ದರು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ಫ್ಲೋರ್​ನ ಎಲ್ಲ ಸಿಬ್ಬಂದಿಗೆ 14 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವಂತೆ ಸಂಸ್ಥೆ ನಿರ್ದೇಶಿಸಿದೆ. ಮಾರ್ಚ್​ 24ರ ನಂತರ ಕಚೇರಿಯಲ್ಲಿ ಕೆಲಸ ಮುಂದುವರೆಸುವಂತೆ ತಿಳಿಸಲಾಗಿದೆ.

    ಸೋಂಕು ಧೃಡವಾಗಿರುವ ಮತ್ತೊಂದು ಸಂಸ್ಥೆಯ ಸಿಬ್ಬಂದಿಯು ವಿದೇಶದಿಂದ ಮರಳಿದ ನಂತರ ಕಚೇರಿಗೆ ಹಾಜರಾಗಿಲ್ಲ ಮತ್ತು ಸಹೋದ್ಯೋಗಿಗಳನ್ನು ಭೇಟಿ ಮಾಡಿಲ್ಲವಾದ್ದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್​)

    ಇವರು ಅಂತಿಂಥಾ ಕಳ್ಳರಲ್ಲ, ಬಿಯರ್ ಅಂದ್ರೆ ಪ್ರಾಣ ಬಿಡೋ ಈ ದಂಪತಿ ಕಥೆ ಕೇಳಿ ಬೇಸ್ತು ಬೀಳ್ಬೇಡಿ!

    ಕರೊನಾ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡ ಉದ್ಯೋಗಿಗಳಿಗೆ ರಜೆ ನೀಡಿ: ಖಾಸಗಿ ಸಂಸ್ಥೆಗಳಿಗೆ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts