

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಒಂದೇ ಸೂರಿನಡಿ ಗ್ರಾಹಕರಿಗೆ ಲಭ್ಯವಾಗುವ ‘ಫರ್ನೀಚರ್ ಹಾಗೂ ಲೈಫ್‌ಸ್ಟೈಲ್ ಎಕ್ಸ್‌ಪೋ’ ಜಾಲಹಳ್ಳಿಯ ಎಚ್‌ಎಂಟಿ ಆಟದ ಮೈದಾನದಲ್ಲಿ ನಡೆಯುತ್ತಿದ್ದು, ರಿಯಾಯಿತಿ ದರದಲ್ಲಿ ಸಿಗುವ ಉತ್ಪನ್ನಗಳಿಗೆ ಗ್ರಾಹಕರು ಮಾರುಹೋಗಿದ್ದಾರೆ.
ಎಕ್ಸ್ಪೋ ಇಂಡಿಯಾ ಈವೆಂಟ್ಸ್ ಅಂಡ್ ಎಕ್ಸಿಬಿಷನ್ ಸಂಘಟಿಸಿರುವ ಬೃಹತ್ ಪೀಠೋಪಕರಣ ಮೇಳವು, ವಿಜಯವಾಣಿ ಸಹಯೋಗದಲ್ಲಿ ನಡೆಯುತ್ತಿದೆ. ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ವಿವಿಧ ಸಾಮಗ್ರಿಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮೇಳದಲ್ಲಿ ವಿವಿಧ ಸಾಮಗ್ರಿಗಳ ಮೇಲೆ ಶೇ. 75ರವರೆಗೂ ರಿಯಾಯಿತಿ ಘೋಷಿಸಲಾಗಿದೆ.
ಮೇಳದಲ್ಲಿ ಸೋಫಾ ಸೆಟ್, ಆಂಟಿಕ್/ಲೆದರ್ ಸೋಫಾ, ಹಾಸಿಗೆ, ಕುಶನ್ಸ್, ಡೈನಿಂಗ್ ಟೇಬಲ್, ಜೂಲಾ, ಗಾರ್ಡನ್ ಫರ್ನಿರ‍್ಸ್, ಅಲಂಕಾರಿಕ ದೀಪಗಳು ಲಭ್ಯವಿವೆ. ಕೈಮಗ್ಗದ ಬಟ್ಟೆಗಳು, ಕರಕುಶಲ ವಸ್ತುಗಳು, ಮಡಿಕೆಯಿಂದ ತಯಾರಿಸಿರುವ ಕಲಾಕೃತಿಗಳು, ಸಿರಾಮಿಕ್ ವಸ್ತುಗಳು, ಕಾಶ್ಮೀರಿ ಶಾಲುಗಳು, ಖಾದಿ ಬಟ್ಟೆಗಳು, ನೆಲಹಾಸು, ಬಣ್ಣದ ಚಿತ್ರಪಟಗಳು, ಆಟಿಕೆಗಳು ಪ್ರದರ್ಶನದಲ್ಲಿವೆ. ಕರ್ನಾಟಕ ಸೇರಿ, ವಿವಿಧ ರಾಜ್ಯಗಳ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರೆ. ಹೊಸ ವಿನ್ಯಾಸ ಹಾಗೂ ನವೀನ ಮಾದರಿಯ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಖರೀದಿಗೆ ಅವಕಾಶವಿದೆ. ಪ್ರತಿ ದಿನ ಬೆಳಿಗ್ಗೆ, 10.30ರಿಂದ ರಾತ್ರಿ 9.00ರವರೆಗೆ ವಹಿವಾಟು ನಡೆಸಬಹುದಾಗಿದೆ.
ಎಲ್ಲ ಖರೀದಿಯನ್ನು ಯುಪಿಐ, ಡಿಜಿಟಲ್ ಪಾವತಿ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳನ್ನು ಮಾನ್ಯ ಮಾಡಲಾಗುತ್ತದೆ. ಮೇಳಕ್ಕೆ ಆಗಮಿಸುವವರ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ.