More

    ಇಲ್ಲಿ ಮಳೆ ಸುರಿದದ್ದೋ, ಮೋಡವೇ ಇಳಿದದ್ದೋ? ತೆಲಂಗಾಣದಲ್ಲಿ ನಡೆಯಿತು ವಿಚಿತ್ರ ಘಟನೆ!

    ತೆಲಂಗಾಣ: ತೆಲಂಗಾಣದ ಶಿರಡಿ ನಗರ ಮತ್ತು ಕುಕಟ್ಪಲ್ಲಿಯ ಧರಣಿ ನಗರದ ಬೀದಿಗಳಲ್ಲಿ ಭಾರಿ ಮಳೆ ಸುರಿದಿದ್ದು, ಇದರಿಂದಾಗಿ ಭಾರಿ ಪ್ರಮಾಣದಲ್ಲಿ ರಸ್ತೆಗಳ ಮೇಲೆ ಬಿಳಿ ಬಣ್ಣದ ವಸ್ತು ಜಮಾವಣೆಗೊಂಡಿತ್ತು. ನೋಡಲು ಅಕ್ಷರಶಃ ಮೋಡಗಳೇ ಇಳಿದದ್ದೋ ಎನ್ನುವಂತಿದೆ. ಆದರೆ ಇಲ್ಲಿ ಆಗಿರುವ ಘಟನೆಯೇ ಬೇರೆ!

    ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ಭಾರತ-ಪಾಕ್​ ಸೂಪರ್​-4 ಪಂದ್ಯಕ್ಕೂ ಮಳೆ ಮುನ್ಸೂಚನೆ! ರದ್ದಾಗುವುದನ್ನು ತಪ್ಪಿಸಲು ವಿಶೇಷ ಯೋಜನೆ

    ನಗರದಲ್ಲಿ ಒಂದು ದಿನದ ಹಿಂದೆ ಸುರಿದ ಭಾರಿ ಮಳೆಯ ನಡುವೆಯೇ ಶಿರಡಿ ನಗರ ಮತ್ತು ಕುಕಟ್ಪಲ್ಲಿಯ ಧರಣಿ ನಗರದ ಬೀದಿಗಳಲ್ಲಿ ಭಾರಿ ರಾಸಾಯನಿಕ ನೊರೆ ಸಂಗ್ರಹವಾಗಿದೆ. ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಈ ನೊರೆ ಸಂಗ್ರಹವಾಗಿದೆ.

    ಇಲ್ಲಿ ಮಳೆ ಸುರಿದದ್ದೋ, ಮೋಡವೇ ಇಳಿದದ್ದೋ? ತೆಲಂಗಾಣದಲ್ಲಿ ನಡೆಯಿತು ವಿಚಿತ್ರ ಘಟನೆ!

    ಕಾಲೋನಿಗಳ ಪಕ್ಕದಲ್ಲಿ ಹಾದುಹೋಗುವ ಮಳೆ ನೀರು ಚರಂಡಿಗಳ ಮೂಲಕ ಹತ್ತಿರದ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯದೊಂದಿಗೆ ಬೆರೆತು ನೊರೆ ರೂಪುಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾರಿ ಮಳೆಯಿಂದಾಗಿ ಉಂಟಾದ ನೊರೆ ಸ್ಥಳೀಯ ಜನರಿಗೆ ಸಾಕಷ್ಟು ಕಷ್ಟ ನೀಡಿದೆ. ಸ್ಥಳೀಯರ ಪ್ರಕಾರ, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನಿನ್ನೆ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು.

    ಇಲ್ಲಿ ಮಳೆ ಸುರಿದದ್ದೋ, ಮೋಡವೇ ಇಳಿದದ್ದೋ? ತೆಲಂಗಾಣದಲ್ಲಿ ನಡೆಯಿತು ವಿಚಿತ್ರ ಘಟನೆ!

    ಇದನ್ನೂ ಓದಿ: ಜಲಕ್ರಾಂತಿಯ ಊರು ಚನ್ನಪಟ್ಟಣದಲ್ಲಿ ಬರದ ಛಾಯೆ ಮಳೆ ಕೊರತೆ, ಬಿತ್ತನೆ ಹಿನ್ನಡೆ

    ತೆಲಂಗಾಣದ ಕೇಂದ್ರ ಜಿಲ್ಲೆಗಳು, ಉತ್ತರ ಮತ್ತು ಪೂರ್ವ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಿದೆ. ಹೈದರಾಬಾದ್ ಹವಾಮಾನ ಕೇಂದ್ರದ ನಿರ್ದೇಶಕಿ ನಾಗರತ್ನ ಮಾತನಾಡಿ, “ಪ್ರಸ್ತುತ, ಹವಾಮಾನ ಪರಿಸ್ಥಿತಿಯು ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾದ ಕರಾವಳಿಯ ವಾಯುವ್ಯ ಮತ್ತು ಪಕ್ಕದ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡವಿದೆ ಮತ್ತು ಅದರ ಸಂಬಂಧಿತ ಮೇಲ್ಭಾಗದ ವಾಯು ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 7.6 ಕಿ.ಮೀ ವರೆಗೆ ವಿಸ್ತರಿಸಿದೆ.

    ಇದನ್ನೂ ಓದಿ: ಚಿತ್ತಾಪುರ ತಾಲೂಕಿನಲ್ಲಿ ಮಳೆಯಾರ್ಭಟ; ಹಲವು ಸೇತುವೆ ಮುಳುಗಡೆ

    ಇನ್ನು ಕರ್ನಾಟಕದಲ್ಲೂ ನಾನಾ ಕಡೆಗಳಲ್ಲಿ ಮಳೆಯ ಆರ್ಭಟ ಶುರುವಾಗಿದ್ದು ದಕ್ಷಿಣ ಕನ್ನಡ, ಬೀದರ್, ಯಾದಗಿರಿ, ಮುಂತಾದ ಜಿಲ್ಲೆಗಳಲ್ಲಿ ಮಳೆ ಪ್ರಾರಂಭವಾಗಿದೆ. ಆದರೂ ಕರ್ನಾಟಕದ ಕೆಲ ಭಾಗಗಳಲ್ಲಿ ಇನ್ನೂ ಬರದ ಛಾಯೆ ವ್ಯಾಪಿಸಿದೆ.ಇನ್ನು, ಕೆಲ ರೈತರು ಮಳೆ ಬಾರದೇ ಬೆಳೆ ಕಳೆದುಕೊಂಡರೆ, ಇನ್ನೂ ಕೆಲ ರೈತರು ಮಳೆ ಬಂದ ಕಾರಣ ಬೆಳೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ಎದುರಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts