ಏಷ್ಯಾಕಪ್​ನಲ್ಲಿ ಭಾರತ-ಪಾಕ್​ ಸೂಪರ್​-4 ಪಂದ್ಯಕ್ಕೂ ಮಳೆ ಮುನ್ಸೂಚನೆ! ರದ್ದಾಗುವುದನ್ನು ತಪ್ಪಿಸಲು ವಿಶೇಷ ಯೋಜನೆ

ಕೊಲಂಬೊ: ಏಷ್ಯಾಕಪ್​ನ ಲೀಗ್​ ಹಂತದಲ್ಲಿ ಪಲ್ಲೆಕಿಲೆಯಲ್ಲಿ ಭಾರತ-ಪಾಕ್​ ನಡುವಿನ ಮುಖಾಮುಖಿ ಮಳೆಯಿಂದಾಗಿ ರದ್ದುಗೊಂಡಿತ್ತು. ಇದೀಗ ಟೂರ್ನಿಯ ಸೂಪರ್​-4 ಹಂತದಲ್ಲಿ ಮುಂದಿನ ಭಾನುವಾರ ಉಭಯ ತಂಡಗಳ ನಡುವಿನ ಮರುಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಪಂದ್ಯ ಕೊಲಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದರೂ, ಮಳೆ ಭೀತಿಯಿಂದ ಮುಕ್ತವಾಗಿಲ್ಲ. ಹವಾಮಾನ ಮುನ್ಸೂಚನೆಯ ಪ್ರಕಾರ ಭಾನುವಾರ ಕೊಲಂಬೊದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಅಧಿಕವಾಗಿದೆ. ಇದಕ್ಕಾಗಿ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ವಿಶೇಷ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಇತ್ತೀಚೆಗೆ ವಾತಾವರಣ ಸುಧಾರಿಸಿದ ಮತ್ತು ಲಾಜಿಸ್ಟಿಕ್ಸ್​ … Continue reading ಏಷ್ಯಾಕಪ್​ನಲ್ಲಿ ಭಾರತ-ಪಾಕ್​ ಸೂಪರ್​-4 ಪಂದ್ಯಕ್ಕೂ ಮಳೆ ಮುನ್ಸೂಚನೆ! ರದ್ದಾಗುವುದನ್ನು ತಪ್ಪಿಸಲು ವಿಶೇಷ ಯೋಜನೆ