

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಮಲ ಪಕ್ಷ ಕಮಾಲ್ ಮಾಡಿದೆ. ಅ.28ರಂದು ಪಾಲಿಕೆಗೆ ಚುನಾವಣೆ ನಡೆದಿತ್ತು. ಇಂದು(ಸೋಮವಾರ) ಮತ ಎಣಿಕೆ ನಡೆದಿದ್ದು, ಒಟ್ಟು 35 ವಾರ್ಡ್ಗಳಲ್ಲಿ ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರ-5, ಎಐಎಂಐಎಂ-2 ಹಾಗೂ ಜೆಡಿಎಸ್-1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಆ ಮೂಲಕ ಬಿಜೆಪಿ ಬಹುಮತದ ಹೊಸ್ತಿಲಿಗೆ ಬಂದು ನಿಂತಿದ್ದು, ಸ್ಪಷ್ಟ ಬಹುಮತ ಸಾಬೀತಿಗೆ 1 ಸ್ಥಾನ ಮಾತ್ರ ಬಾಕಿ ಇದೆ. ಈ ಮಧ್ಯೆ ವಿಜೇತ ಪಕ್ಷೇತರರ ಪೈಕಿ ಕೆಲವರು ಬಿಜೆಪಿ ಬಂಡಾಯ ಅಭ್ಯರ್ಥಿಗಳಿದ್ದು, ಬಹುತೇಕ ಬಿಜೆಪಿಯೇ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತವಾದಂತಾಗಿದೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಜೇತರಾದವರ ಹೆಸರು
ವಾರ್ಡ್ ನಂ.1: ಕಾಂಗ್ರೆಸ್ - ಆಶೀಪ್ ಶಾನವಾಲೆ
ವಾರ್ಡ್ ನಂ.2: ಪಕ್ಷೇತರ - ಅಲ್ತಾಪ್ ಇಟಗಿ
ವಾರ್ಡ್ ನಂ.3: ಬಿಜೆಪಿ- ಸುನಿತಾ ಒಡೆಯರ್
ವಾರ್ಡ್ ನಂ.4: ಜೆಡಿಎಸ್- ರಾಜು ಚೌಹಾನ್
ವಾರ್ಡ್ ನಂ.5: ಬಿಜೆಪಿ- ಎಂ.ಎಸ್. ಕರಡಿ
ವಾರ್ಡ್ ನಂ.6: ಬಿಜೆಪಿ- ಮಲ್ಲುಗೌಡ ಪಾಟೀಲ್
ವಾರ್ಡ್ ನಂ.7: ಬಿಜೆಪಿ- ರಾಹುಲ್ ಜಾಧವ
ವಾರ್ಡ್ ನಂ.8: ಪಕ್ಷೇತರ- ಅಶೋಕ ನ್ಯಾಮಗೌಡ
ವಾರ್ಡ್ ನಂ.9: ಬಿಜೆಪಿ- ರಾಜಶೇಖರ್ ಮಗಿಮಠ
ವಾರ್ಡ್ ನಂ.10: ಬಿಜೆಪಿ- ಸುನಂದ ಕುಮಸಿ
ವಾರ್ಡ್ ನಂ.11: ಬಿಜೆಪಿ- ವಿಠ್ಠಲ ಹೊಸಪೇಟ್
ವಾರ್ಡ್ ನಂ.12: ಬಿಜೆಪಿ- ರಶ್ಮಿ ಕೊರಿ
ವಾರ್ಡ್ ನಂ.13: ಬಿಜೆಪಿ- ದೇವಗಿರಿ ಮೋಹನ್
ವಾರ್ಡ್ ನಂ.14: ಬಿಜೆಪಿ- ಹನಮಂತ ಗೋಸಾವಿ
ವಾರ್ಡ್ ನಂ.15: ಬಿಜೆಪಿ- ಸ್ವಪ್ನಾ ಕನಮುಚನಾಳ
ವಾರ್ಡ್ ನಂ.16: ಕಾಂಗ್ರೆಸ್- ಅಂಜುಮಾರ್ ಮನಗೂಳಿ
ವಾರ್ಡ್ ನಂ.17: ಪಕ್ಷೇತರ- ಸುಮಿತ್ರ ಜಾಧವ
ವಾರ್ಡ್ ನಂ.18: ಕಾಂಗ್ರೆಸ್- ದಿನೇಶ್ ಹಳ್ಳಿ
ವಾರ್ಡ್ ನಂ.19: ಪಕ್ಷೇತರ- ನಿಶತ್ ನದಾಫ್
ವಾರ್ಡ್ ನಂ.20: ಕಾಂಗ್ರೆಸ್- ಶಹೀನ್ ಬಾಗಿ
ವಾರ್ಡ್ ನಂ.21: ಬಿಜೆಪಿ- ಮಲ್ಲಿಕಾರ್ಜುನ ಗದಗಿ
ವಾರ್ಡ್ ನಂ.22: ಬಿಜೆಪಿ- ಪ್ರೇಮಾನಂದ ಬಿರಾದಾರ್
ವಾರ್ಡ್ ನಂ.23: ಕಾಂಗ್ರೆಸ್- ಮಹಮ್ಮದ್ ನಾಡೇವಾಲಾ
ವಾರ್ಡ್ ನಂ.24: ಪಕ್ಷೇತರ- ವಿಮಲಾ ಖಾನೆ
ವಾರ್ಡ್ ನಂ.25: AIMIM- ಸುಪೀಯಾ ವಾಟಿ
ವಾರ್ಡ್ ನಂ.26: ಬಿಜೆಪಿ- ಕಿರಣ ಪಾಟೀಲ್
ವಾರ್ಡ್ ನಂ.27: ಕಾಂಗ್ರೆಸ್- ಶಹಿಸ್ತಾ ಖುರೇಶಿ
ವಾರ್ಡ್ ನಂ.28: AIMIM- ರಿಜ್ವಾನ್ ಬಾನು ಇನಾಮ್‌ದಾರ್
ವಾರ್ಡ್ ನಂ.29: ಬಿಜೆಪಿ- ವಿಜಯಕುಮಾರ್ ಬಿರಾದಾರ
ವಾರ್ಡ್ ನಂ.30: ಕಾಂಗ್ರೆಸ್- ಅಪ್ಪು ಪೂಜಾರಿ
ವಾರ್ಡ್ ನಂ.31: ಕಾಂಗ್ರೆಸ್- ಸಿದಾರಾ ಬೀಳಗಿ
ವಾರ್ಡ್ ನಂ.32: ಬಿಜೆಪಿ- ಶಿವರುದ್ರಪ್ಪ ಬಾಗಲಕೋಟ
ವಾರ್ಡ್ ನಂ.33: ಕಾಂಗ್ರೆಸ್- ಆರತಿ ಶಹಾಪುರ
ವಾರ್ಡ್ ನಂ.34: ಕಾಂಗ್ರೆಸ್- ಮೆಹಜಬಿನ್ ಹೊರ್ತಿ
ವಾರ್ಡ್ ನಂ.35: ಬಿಜೆಪಿ- ರಾಜಶೇಖರ್ ಕುರಿವಾರ