ಬ್ಯೂಟಿಷಿಯನ್​ ಕೋರ್ಸ್​ ತರಬೇತಿಗೆ ಅರ್ಜಿ ಆಹ್ವಾನ: ಸ್ವಂತ ಪಾರ್ಲರ್​ ಸ್ಥಾಪಿಸಲು ಸರ್ಕಾರದಿಂದ ಸಹಾಯಧನ

Beautician Course
Published on

ಬೆಂಗಳೂರು: ಬಹು ಉದ್ದಿಮೆಗಳ ತರಬೇತಿ ಕೇಂದ್ರ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ವತಿಯಿಂದ ಬ್ಯೂಟಿಷಿಯನ್​ ಕೋರ್ಸ್​ನಲ್ಲಿ ಒಂದು ತಿಂಗಳ ಪ್ರಾಯೋಗಿಕ ಕೌಶಲ ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ರಾಷ್ಟ್ರೀಕೃತ ಅಥವಾ ಕೆಲವು ಆಯ್ದ ಖಾಸಗಿ/ ಶೆಡ್ಯೂಲ್​ ವಾಣಿಜ್ಯ ಬ್ಯಾಂಕ್​ಗಳಿಂದ ಸಾಲ ಪಡೆಯುವ ಮೂಲಕ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮ (ಪಿಎಂಇಜಿಪಿ ಯೋಜನೆ) ಅಡಿಯಲ್ಲಿ ಉದ್ಯೋಗ ಮಾಡಬಹುದು ಅಥವಾ ಸ್ವಂತ ಬ್ಯೂಟಿ ಪಾರ್ಲರ್​ ಸ್ಥಾಪಿಸಬಹುದು. ಶೇ.35ರವರೆಗೆ ಸರ್ಕಾರದ ಸಹಾಯಧನ ಪಡೆಯಬಹುದು.

ಕೈಚೀಲಗಳು, ಲಕೋಟೆಗಳು, ಫೈಲ್​ ಕವರ್​ಗಳು, ಸ್ಟೇಷನರಿ ಇತ್ಯಾದಿ, ಪ್ರಾಕೃತಿಕ ಬಣ್ಣ ತಯಾರಿಕೆ ಇತ್ಯಾದಿ ತರಬೇತಿಗಳಂತಹ ಕೋರ್ಸ್​ಗಳಿಗೆ ಈ ಯೋಜನೆಯಡಿಯಲ್ಲಿ ಸ್ವಂತ ಘಟಕ ಸ್ಥಾಪಿಸಲು ಅವಕಾಶ ಒದಗಿಸಲಾಗುತ್ತದೆ. ಹೆಚ್ಚಿನ ವಿವರಕ್ಕೆ ದೂ: 080 25650285, 95434 25994 ಅಥವಾ 93815 88877 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net