

ತುಮಕೂರು: ಜಿಲ್ಲೆಯಾದ್ಯಂತ 9 ಚಿತ್ರಮಂದಿರಗಳಲ್ಲಿ 'ವಿಜಯಾನಂದ' ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳು ಥಿಯೇಟರ್ಗಳ ಬಳಿ ಪ್ಲೆಕ್ಸ್, ಕಟೌಟ್ಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಡಾ.ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ ಸಹಿ ಹಂಚಿದರು.
ಡಾ.ವಿಜಯ ಸಂಕೇಶ್ವರ ಅವರು ಯುವಕರ ಸ್ಪೂರ್ತಿ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು. ಕುಟುಂಬ ಸಮೇತ ಬಂದು ಸಿನಿಮಾ ನೋಡಿ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಶುಭಕೋರಿದರು.
ತುಮಕೂರು ಜಿಲ್ಲೆಯ 9 ಚಿತ್ರಮಂದಿರಗಳಲ್ಲಿ ವಿಜಯಾನಂದ ಸಿನಿಮಾ ಬಿಡುಗಡೆಯಾಗಿದೆ.
ತುಮಕೂರು: ಐನಾಕ್ಸ್- ಎಸ್.ಮಾಲ್
ತುಮಕೂರು: ಗಾಯಿತ್ರಿ ಚಿತ್ರಮಂದಿರ
ತಿಪಟೂರು: ಗಣೇಶ ಟಾಕೀಸ್
ಕುಣಿಗಲ್: ಪದ್ಮ ಸಿನಿಮಾಸ್
ಮಧುಗಿರಿ: ಶಾಂತಲಾ ಚಿತ್ರಮಂದಿರ
ಕೊರಟಗೆರೆ: ಶಿವಗಂಗ ಚಿತ್ರಮಂದಿರ
ಗುಬ್ಬಿ: ಚನ್ನಬಸವೇಶ್ವರ ಚಿತ್ರಮಂದಿರ
ಶಿರಾ: ಭಾಗ್ಯಲಕ್ಮೀ ಚಿತ್ರಮಂದಿರ
ತುರುವೇಕೆರೆ: ಕೃಷ್ಣ ಚಿತ್ರಮಂದಿರ