

ಬೆಳಗಾವಿ: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಬೆಳಗಾವಿಗರು ನಗರದಲ್ಲಿ ಬೃಹತ್ ಮೆರವಣಿಗೆ ಮಾಡುವ ಮೂಲಕ ಅಭಿಮಾನ ಮೆರೆದರು.
ಸ್ಥಳೀಯ ಕ್ಯಾಂಪ್ ಪ್ರದೇಶದಲ್ಲಿ ಗ್ಲೋಬ್ ಥಿಯೇಟರ್ನಿಂದ ಐನಾಕ್ಸ್ ಥಿಯೇಟರ್ವರೆಗೆ ವಿಜಯಾನಂದ ಸಿನಿಮಾದ ಪೋಸ್ಟರ್ ಹಿಡಿದು, ಪಟಾಕಿ ಸಿಡಿಸಿ ಜಯಘೋಷ ಕೂಗಿ ಸಂಭ್ರಮಿಸಿದರು.
ವಿಜಯಾನಂದ ಚಿತ್ರದ ಮೊದಲ ಪ್ರದರ್ಶನಕ್ಕೆ ಬೆಳಗಾವಿಯಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆದಿತ್ಯ ಮಿಲ್ಕ್ ನಿರ್ದೇಶಕರಾದ ದೀಪಾ ಸಿದ್ನಾಳ, ವ್ಯವಸ್ಥಾಪಕ ನಿರ್ದೇಶಕ ಶಿವಕಾಂತ ಸಿದ್ನಾಳ, ಉಪಾಧ್ಯಕ್ಷ ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ, ಬಿ.ಎಸ್.ಚನ್ನಬಸಪ್ಪ ಮಳಿಗೆ ಮಾಲೀಕರಾದ ಬಿ.ಸಿ.ಚಂದ್ರಶೇಖರ ಸೇರಿದಂತೆ ಹಲವು ಗಣ್ಯರು ಐನಾಕ್ಸ್ ಥಿಯೇಟರ್ನಲ್ಲಿ ಕೇಕ್ ಕತ್ತರಿಸುವ ಮೂಲಕ ಚಿತ್ರಪ್ರದರ್ಶನಕ್ಕೆ ಶುಭಕೋರಿದರು.