ಕಡೆಗೂ ಈ ಒಟಿಟಿಗೆ ಎಂಟ್ರಿ ಕೊಟ್ಟ ವಿಜಯ್​ ಸೇತುಪತಿ 'ಮಹಾರಾಜ'

ವಿಜಯವಾಣಿ - 2024-07-08T130756.485
Published on

ತಮಿಳುನಾಡು: ಜೂನ್​ 14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ತಮಿಳು ನಟ ವಿಜಯ್ ಸೇತುಪತಿ ಅಭಿನಯದ ಬ್ಲಾಕ್​ಬಸ್ಟರ್​ 'ಮಹಾರಾಜ' ಸಿನಿಮಾ ಇದೀಗ ಅಧಿಕೃತವಾಗಿ ಒಟಿಟಿ ಪ್ಲಾಟ್​ಫಾರ್ಮ್​ಗೆ ಎಂಟ್ರಿ ಕೊಟ್ಟಿದೆ. ಸೇತುಪತಿ ಅಭಿನಯದ 50ನೇ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಹೆಚ್ಚಿನ ಭರವಸೆ ಮೂಡಿಸಲಿಲ್ಲ. ಇಂದಿಗೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮಹಾರಾಜ ಇದೀಗ ಸಿನಿಪ್ರೇಕ್ಷಕರ ಕಾತರಕ್ಕೆ ಕಡೆಗೂ ತೆರೆ ಎಳೆದಿದೆ.

ನಿಥಿಲನ್ ಸಾಮಿನಾಥನ್ ನಿರ್ದೇಶನದ 'ಮಹಾರಾಜ' ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರತಿಕ್ರಿಯೆ ಲಭಿಸಿತು. ಥಿಯೇಟರ್​​ನಲ್ಲಿ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಚಿತ್ರತಂಡ ಚಿಕ್ಕ ಸಂಭ್ರಮವನ್ನು ಕೂಡ ಆಚರಿಸಿತು. ಇನ್ನು ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಬಹಳ ದಿನದಿಂದ ಕಾಯುತ್ತಿದ್ದ ಚಿತ್ರಪ್ರೇಮಿಗಳಿಗೆ ಕಡೆಗೂ ಖುಷಿ ಸುದ್ದಿ ಸಿಕ್ಕಿದ್ದು, ಇದೀಗ ಮಹಾರಾಜ ನೆಟ್​​ಫ್ಲಿಕ್ಸ್​ಗೆ ಲಗ್ಗೆಯಿಟ್ಟಿದೆ.

ಇದೇ ಜುಲೈ 12ರಂದು ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ಲೈವ್​ ಸ್ಟ್ರೀಮಿಂಗ್ ಆಗಲಿದ್ದು, ತಮಿಳು, ತೆಲುಗು, ಮಲಯಾಳ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವೀಕ್ಷಿಸಲು ಲಭ್ಯವಾಗಲಿದೆ. ಚಿತ್ರದಲ್ಲಿ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ನಟ್ಟಿ (ನಟರಾಜ್), ಭಾರತಿರಾಜ, ಅಭಿರಾಮ್, ಸಿಂಗಂಪುಲಿ, ಅರುಲ್ದಾಸ್, ಮುನಿಷ್ಕಾಂತ್, ವಿನೋತ್ ಸಾಗರ್, ಬಾಯ್ಸ್ ಮಣಿಕಂದನ್, ಕಲ್ಕಿ, ಸಚನಾ ನಿಮಿದಾಸ್ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net