

ಬೆಂಗಳೂರು: ಬ್ಯಾಂಕ್ನಿಂದ ಸಾಲ ಪಡೆದು ತೀರಿಸದೆ ಭಾರತದಿಂದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ, ಪ್ರತಿ ಹಬ್ಬಕ್ಕೂ ತಪ್ಪದೇ ಶುಭಾಶಯ ಹೇಳುವುದನ್ನು ಮಾತ್ರ ಬಿಟ್ಟಿಲ್ಲ. ಹೀಗೆ ಶುಭಾಶಯ ಕೋರುತ್ತಿರುವ ಮಲ್ಯರನ್ನು ನೆಟ್ಟಿಗರು ತಮಾಷೆ ಮಾಡುತ್ತಿರುವುದು ಕೂಡ ನಡೆಯುತ್ತಿದೆ.
ಉದ್ಯಮಿ ವಿಜಯ್ ಮಲ್ಯರ ಹೆಸರಿನಲ್ಲಿರುವ ವೆರಿಫೈಡ್ ಟ್ವಿಟರ್ ಖಾತೆಯಿಂದ ಸಾಮಾನ್ಯವಾಗಿ ಪ್ರತಿ ಹಬ್ಬಕ್ಕೂ ಶುಭಾಶಯ ಹೇಳಲಾಗುತ್ತಿದೆ. ಆದರೆ ವಿಜಯ್ ಮಲ್ಯ ಅದೇ ಕಾರಣಕ್ಕೆ ಟೀಕೆ ಹಾಗೂ ತಮಾಷೆಗೆ ಒಳಗಾಗುತ್ತಿದ್ದಾರೆ. ವಿಶೇಷವೆಂದರೆ, ಮಲ್ಯರ ಖಾತೆಯಿಂದ ಶುಭಾಶಯದ ಹೊರತಾಗಿ ಬೇರೆ ಟ್ವೀಟ್ಗಳಿರುವುದು ಅತಿ ಕಡಿಮೆ.
ಹಬ್ಬಕ್ಕೆ ವಿಷ್ ಮಾಡುವ ಮಲ್ಯರನ್ನು ಕೆಲವರು, ಭಾರತಕ್ಕೆ ಬನ್ನಿ ಒಟ್ಟಿಗೆ ಸೆಲೆಬ್ರೇಟ್ ಮಾಡೋಣ ಎಂದು ಕಾಲೆಳೆದರೆ, ಇನ್ನು ಕೆಲವರು ಬ್ಯಾಂಕ್ ರಜೆ ಇರುವ ಸಮಯದಲ್ಲಿ ಮಾತ್ರ ನೀವು ವಿಷ್ ಮಾಡುವುದಾ? ಎಂದೂ ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರು ಏನೇ ಅಂದರೂ ಹಬ್ಬದಂದು ಮಲ್ಯ ವಿಷ್ ಮಾಡುವುದು ಮಾತ್ರ ನಿಂತಿಲ್ಲ.