'ಖುಷಿ' ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಹೊಸ ಅಪ್ಡೇಟ್​ ಕೊಟ್ಟ ನಟ ವಿಜಯ್​ ದೇವರಕೊಂಡ

Untitled design - 2023-08-04T194516.837
Published on

ಆಂಧ್ರಪ್ರದೇಶ: ಟಾಲಿವುಡ್​ ಅಂಗಳದಲ್ಲಿ ಬಹಳ ದಿನಗಳಿಂದ ಸದ್ದು ಮಾಡುತ್ತಿರುವ ವಿಜಯ್ ದೇವರಕೊಂಡ ಮತ್ತು ಸಮಂತಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ 'ಖುಷಿ' ಚಿತ್ರ, ಇದೀಗ ಹೊಸ ಮಾಹಿತಿಗಳೊಂದಿಗೆ ಸಿನಿಪ್ರಿಯರ ಮುಂದೆ ಹಾಜರಾಗುತ್ತಿದೆ. ಸದ್ಯ ಈ ಕುರಿತು ಸ್ವತಃ ವಿಜಯ್​ ದೇವರಕೊಂಡ ತಮ್ಮ ಅಭಿಮಾನಿಗಳಿಗೆ ಹೊಸ ಅಪ್ಡೇಟ್​ ನೀಡಿದ್ದಾರೆ.

ರೋಮ್ಯಾಂಟಿಕ್-ಕಾಮಿಡಿ ಜಾನರ್​ನಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶನ ಮಾಡಿದ್ದಾರೆ. 2 ನಿಮಿಷ 41 ಸೆಕಂಡ್​ಗಳನ್ನು ಒಳಗೊಂಡ ಟ್ರೇಲರ್​ ಶೀಘ್ರವೇ ಬಿಡುಗಡೆಯಾಗಲಿದ್ದು, ಸೆನ್ಸಾರ್​ ಮಂಡಳಿ ಚಿತ್ರಕ್ಕೆ 'ಯು' ಪ್ರಮಾಣ ಪತ್ರವನ್ನು ನೀಡಿದೆ. ಈ ಸಂಗತಿಯನ್ನು ವಿಜಯ್​ ದೇವರಕೊಂಡ ಇದೀಗ ತಮ್ಮ ಫ್ಯಾನ್ಸ್​ಗಳೊಂದಿಗೆ ಹಂಚಿಕೊಂಡಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್​ ದೇವರಕೊಂಡ, ಸಮಂತಾ, ಮುರಳಿ ಶರ್ಮಾ, ಜಯರಾಮ್, ಸಚಿನ್ ಖೇಡಕರ್, ಶರಣ್ಯ ಪ್ರದೀಪ್, ಮತ್ತು ವೆನ್ನೆಲ ಕಿಶೋರ್ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರತಂಡದ ಪ್ರಕಾರ 'ಖುಷಿ' ಸೆಪ್ಟೆಂಬರ್ 1, 2023 ರಂದು ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net