VIDEO | ಯುವತಿಯನ್ನು ಬಿಗಿಯಾಗಿ ಸುತ್ತಿಕೊಂಡ ಹೆಬ್ಬಾವು; ದೃಶ್ಯ ಕಂಡು ನಿಬ್ಬೆರಗಾದ ನೆಟ್ಟಿಗರು

Untitled design - 2023-08-04T192357.873
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಲವಾರು ಘಟನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಇದೇ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದ್ದು, ಮಹಿಳೆಯ ದೇಹದ ಮೇಲೆ ಹೆಬ್ಬಾವು ಸುತ್ತುವರಿದ ದೃಶ್ಯ ಇದೀಗ ನೋಡುಗರ ಮೈಜುಮ್​ ಎನ್ನಿಸಿದೆ.

ವೈರಲ್​ ಆದ ವಿಡಿಯೋದಲ್ಲಿ ಮಹಿಳೆಯೊಬ್ಬರು ರೆಟಿಕ್ಯೂಲೆಟೆಡ್​​ ಹೆಬ್ಬಾವನ್ನು ತಮ್ಮ ಮೈ ಮೇಲೆ ಹರಿದಾಡಲು ಬಿಟ್ಟಿದ್ದಾರೆ. ಈ ದೃಶ್ಯವನ್ನು 'ದ ರೆಪ್ಟೈಲ್​ ಝೂ' ಎಂಬ ಪುಟ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದೆ.

ವಿಡಿಯೋ ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದು, ಮಹಿಳೆಯ ಧೈರ್ಯವನ್ನು ಮೆಚ್ಚಿ ಕಮೆಂಟ್ ಮಾಡಿದ್ದಾರೆ. ಸದ್ಯ ಇದೀಗ ವಿಡಿಯೋ ಅಧಿಕ ಸಂಖ್ಯೆಯಲ್ಲಿ ಶೇರ್ ಆಗಿದ್ದು, ಕಮೆಂಟ್​ಗಳನ್ನು ಕೂಡ ಪಡೆದುಕೊಂಡಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net