

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅದರಲ್ಲಿರುವ ಇತಿಹಾಸ ಶಿಕ್ಷಕಿಯ ವರ್ತನೆಯು ಭಾರೀ ಟೀಕೆಗೆ ಗುರಿಯಾಗಿದೆ. ನೆಟ್ಟಿಗರು ಕಾಮೆಂಟ್ಗಳ ಸುರಿಮಳೆ ಮೂಲಕ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿಕ್ಷಕಿಯನ್ನು ಮಧು ಸಿಂಗ್ ಎಂದು ಗುರುತಿಸಲಾಗಿದೆ. ಇತಿಹಾಸದ ಬಗ್ಗೆ ಆನ್ಲೈನ್ ತರಗತಿ ತೆಗೆದುಕೊಂಡಿದ್ದ ವಿಡಿಯೋವನ್ನು ಮಧು ಸಿಂಗ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಶಿಕ್ಷಕಿ, ತನ್ನ ಸ್ತನಗಳನ್ನು ಪ್ರೆಸ್ ಮಾಡುವ ಮೂಲಕ ಅನುಚಿತವಾಗಿ ವರ್ತಿಸಿದ್ದಾಳೆ. ಆಘಾತಕಾರಿ ಸಂಗತಿ ಏನೆಂದರೆ, ಬ್ರಾ ಧರಿಸಿ ಆನ್ಲೈನ್ ಕ್ಲಾಸ್ ತೆಗೆದುಕೊಂಡಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇದೀಗ ಈ ವಿಡಿಯೋ ಎಲ್ಲ ರೀತಿಯ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿಯ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಇದೇ ವಿಡಿಯೋ ಮೀಮ್ಸ್, ಟ್ರೋಲ್ ಹಾಗೂ ವಿನೋದಾತ್ಮಕ ವಿಷಯವಾಗಿ ಪರಿವರ್ತನೆಗೊಂಡಿದೆ.
ಇಂದಿನ ದಿನಗಳಲ್ಲಿ ಹಣಕ್ಕಾಗಿ ಎಂಥಹ ಕೀಳುಮಟ್ಟಕ್ಕೆ ಇಳಿದಿದ್ದಾರೆ ನೋಡಿ. ಇವರು ಶಿಕ್ಷಕರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ.
ಇದು ಮಧು ಸಿಂಗ್. ಈಕೆ ಮಕ್ಕಳನ್ನು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಾರೆ. ಕಳೆದ ಕೆಲವು ದಿನಗಳಿಂದ ಈಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದಾಳೆ. ಆನ್ಲೈನ್ ತರಗತಿಯಲ್ಲಿ ಈಕೆ ತನ್ನ ಬಟ್ಟೆಗಳನ್ನು ವಿಚಿತ್ರ ರೀತಿಯಲ್ಲಿ ಧರಿಸುತ್ತಾಳೆ. ತಮ್ಮ ಚಾನೆಲ್ ಹೊಸದಾಗಿರುವ ಕಾರಣ, ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಈಕೆ ಅಶ್ಲೀಲತೆಯ ಹಾದಿಯನ್ನು ಆಶ್ರಯಿಸಿದ್ದಾರೆ. ಇಂಥವರು ಶಿಕ್ಷಕರಿಗೆ ಕಳಂಕ ತಂದಿಲ್ಲವೇ? ಇದೀಗ ಆಕೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳು ಬರುತ್ತಿವೆ. ನೀವು ಏನು ಹೇಳುತ್ತೀರಿ? ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನೆ ಮಾಡಿದ್ದಾರೆ.
ಇನ್ನು ವೈರಲ್ ಆಗಿರುವ ವಿಡಿಯೋಗೆ 12 ಲಕ್ಷ ವೀಕ್ಷಣೆ ಬಂದಿದೆ. ಇದನ್ನು ನೋಡಿ ಕಲಿಯುವಂಥದ್ದೇನಿದೆ? ಈಕೆಯನ್ನು ತಕ್ಷಣ ಜೈಲಿಗೆ ತಳ್ಳಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಕೆಲವರು ಶಿಕ್ಷಕಿಯನ್ನು ಫನ್ನಿ ಮೀಮ್ಸ್ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)