

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಗಂಗೋತಿ ನ್ಯಾಷನಲ್ ಪಾರ್ಕ್ನಲ್ಲಿ ವಿರಳ ಜಾತಿಗೆ ಸೇರಿದ ಹಾರುವ ಅಳಿಲು ಪತ್ತೆಯಾಗಿದೆ. 70 ವರ್ಷಗಳ ಹಿಂದೆಯೇ ಈ ಜಾತಿಯ ಅಳಿಲುಗಳನ್ನು ಅಳಿವಿನಂಚಿನ ಪ್ರಾಣಿ ಎಂದು ಐಯುಸಿಎನ್ ಕೆಂಪು ಪಟ್ಟಿಗೆ ಸೇರಿಸಿತ್ತು.
ಇದನ್ನೂ ಓದಿ: ವಿಶ್ವಗುರು: ಡಿಜೆ ಹಳ್ಳಿ ಗಲಭೆ, ಅನೇಕ ಪ್ರಶ್ನೆಗಳು!
ಈ ಹಾರುವ ಅಳಿಲನ್ನು ಇಂಗ್ಲಿಷ್ನಲ್ಲಿ ವೂಲಿ ಫ್ಲೈಯಿಂಗ್ ಸ್ಕ್ವಿರಲ್ ಎಂದು ಹೇಳಲಾಗುತ್ತಿದೆ. ಇವುಗಳು ಹಾರುವಾಗ ಎರಡೂ ಕೈ, ಕಾಲುಗಳನ್ನು ರೆಕ್ಕೆಯಂತೆ ಅಗಲಿಸಿ ಹಾರಾಡುತ್ತವೆ. ಈ ಹಾರುವ ಜಾತಿಗೆ ಸೇರಿದ ಅಳಿಲುಗಳ ಪೈಕಿ ಶೇಕಡ 90 ರಷ್ಟು ಇರುವುದು ಏಷ್ಯಾಖಂಡದಲ್ಲೇ ಆಗಿದೆ. ಹಾರುವ ಅಳಿಲುಗಳು ಹೇಗೆ ಹಾರುತ್ತವೆ ಅನ್ನೋದಕ್ಕೆ ಹಳೆಯ ವಿಡಿಯೋ ಒಂದರ ಲಿಂಕ್ ಮೇಲಿದೆ. ಅದನ್ನು ವೀಕ್ಷಿಸಬಹುದು. (ಏಜೆನ್ಸೀಸ್)