More

    ಡಿಜೆ ಹಳ್ಳಿ ಗಲಭೆ ಮತ್ತು ‘ಸಮಾಜ ಅನಕ್ಷರಸ್ಥರು ಮತ್ತು ದಡ್ಡರಿಂದಲೇ ತುಂಬಿ ಹೋಗಿದೆ’ ಎಂಬ ಶಾಸಕ ಜಮೀರ್​ ಹೇಳಿಕೆ

    ಭಾರತದಲ್ಲಿ ಈ ಪರಿಯ ಕದನ ಕುತೂಹಲ ಮುಸಲ್ಮಾನರಲ್ಲೂ ಎಂದಿಗೂ ಇರಲಿಲ್ಲ. ಹಳ್ಳಿ-ಹಳ್ಳಿಗಳಲ್ಲಿರುವ ಮುಸಲ್ಮಾನರು ಸ್ಥಳೀಯ ಹಿಂದೂಗಳೊಂದಿಗೆ ಸಹಜವಾದ ಸುಮಧುರವಾದ ಬಾಂಧವ್ಯವನ್ನೇ ಹೊಂದಿದ್ದರು. ಅದರಲ್ಲೂ ಬರೇಲ್ವಿ ಪಂಥಕ್ಕೆ ಸೇರಿದ ಸುನ್ನಿಗಳದ್ದಂತೂ ಭಾರತೀಯತೆಗೆ ಹೊಂದುವ ಆಚರಣೆಗಳೇ ಆಗಿಬಿಟ್ಟಿದ್ದರಿಂದ ಎಲ್ಲವೂ ಚೆನ್ನಾಗಿಯೇ ಇತ್ತು.

    ಡಿಜೆ ಹಳ್ಳಿ ಗಲಭೆ ಮತ್ತು 'ಸಮಾಜ ಅನಕ್ಷರಸ್ಥರು ಮತ್ತು ದಡ್ಡರಿಂದಲೇ ತುಂಬಿ ಹೋಗಿದೆ' ಎಂಬ ಶಾಸಕ ಜಮೀರ್​ ಹೇಳಿಕೆಬೆಂಗಳೂರಿನಲ್ಲಿ ಒಂದು ಫೇಸ್​ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್​ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. ಆದರೇನು? ಆಕ್ರೋಶಕ್ಕೊಳಗಾಗಿದ್ದ ಜನತೆಗೆ ಅವೆಲ್ಲ ಅರ್ಥವಾಗಿತ್ತಲ್ಲ, ಅಷ್ಟೇ ಸಾಕು. ಜನ ಪೊಲೀಸ್ ಸ್ಟೇಷನ್ನಿನ ಮೇಲೆ ಮುಗಿಬಿದ್ದರು. ಸ್ವತಃ ಶಾಸಕರ ಮನೆಯೇ ಬೆಂಕಿಗೆ ಆಹುತಿಯಾಯ್ತು. ‘ದಲಿತನ ಮೇಲೆ ಮರದ ಕೊಂಬೆ ಬಿದ್ದು ಸಾವು’ ಎಂಬೆಲ್ಲ ಶೀರ್ಷಿಕೆ ನೀಡಲು ಹಿಂದೆ-ಮುಂದೆ ನೋಡದ ಕೆಲ ಮಾಧ್ಯಮಗಳು ದಲಿತ ಶಾಸಕನ ಮೇಲೆಯೇ ನಡೆದ ಈ ಹಲ್ಲೆಯನ್ನು ಆದಷ್ಟು ಬೇಗ ಮುಚ್ಚಿ ಹಾಕಿಬಿಡಲು ಯತ್ನಿಸಿದವು. ಎಲ್ಲಕ್ಕಿಂತಲೂ ದುರದೃಷ್ಟಕರ ಸಂಗತಿ ಎಂದರೆ ಮುಸಲ್ಮಾನರ ವಿರುದ್ಧ ಮಾತನಾಡಿದ್ದ ಎಂಬ ಒಂದೇ ಕಾರಣಕ್ಕೆ ತನ್ನದ್ದೇ ಶಾಸಕರ ಸೋದರಳಿಯನಿಗೂ ತಮಗೂ ಸಂಬಂಧವೇ ಇಲ್ಲವೆಂದುಬಿಟ್ಟಿತ್ತು ಕಾಂಗ್ರೆಸ್ಸು. ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘ಆತ ಬಿಜೆಪಿಯ ಕಾರ್ಯಕರ್ತ’ ಎಂದೂ ಪತ್ರಿಕಾಗೋಷ್ಠಿಯಲ್ಲಿ ಹೇಳಿಬಿಟ್ಟರು.

    ಶಾಸಕ ದಲಿತ ಎಂಬುದನ್ನು ಮರೆತು ಅವರ ಮನೆ ಮೇಲೆ ನಡೆಸಲಾದ ಹಲ್ಲೆಗೆ ವಿರೋಧ ವ್ಯಕ್ತಪಡಿಸದೆ ಸಿಗುವ ಮತಗಳಿಗಾಗಿ ಜೊಲ್ಲು ಸುರಿಸುವ ಮಂದಿಗೆ ಏನೆನ್ನಬೇಕು ಹೇಳಿ? ಹಾಗಂತ ಕಾಂಗ್ರೆಸ್ಸಿನ ಈ ಮಾನಸಿಕತೆ ಹೊಸತೇನೂ ಅಲ್ಲ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಿಂದಲೂ ಹಿಂದೂಗಳ ದನಿಯನ್ನು ಅಡಗಿಸುತ್ತಲೇ ಬಂದಿದೆ ಅದು. ಖಿಲಾಫತ್ ಚಳವಳಿಯೇ ಇರಲಿ, ಮೋಪ್ಲಾ ಕಾಂಡವೇ ಇರಲಿ ಕಾಂಗ್ರೆಸ್ ಎಂದಿಗೂ ಸ್ಪಷ್ಟ ದನಿಯಲ್ಲಿ ಮಾತನಾಡಿದ್ದೇ ಇಲ್ಲ. ಶ್ರದ್ಧಾನಂದರ ಹತ್ಯೆಯ ಹೊತ್ತಲ್ಲಿ, ನೌಕಾಲಿ ದಂಗೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿನ ನಿಲುವು ಕಾಂಗ್ರೆಸ್ಸಿಗೇ ಅರ್ಥವಾಗುವಂಥದ್ದಾಗಿರಲಿಲ್ಲ. ಈಗಲೂ ಹಾಗೆಯೇ. ಗೊಂದಲದ ಗೂಡಾಗಿಬಿಟ್ಟಿದೆ ಆ ಪಕ್ಷ. ಸಾಮಾನ್ಯ ಹಿಂದೂವಿಗೂ ಎಸ್​ಡಿಪಿಐ ಪ್ರೇರಿತ ಈ ದಂಗೆ ತಪ್ಪೆಂದು ಅರ್ಥವಾಗುತ್ತದೆ. ಆದರೆ, ಅದನ್ನು ದೃಢವಾಗಿ ಹೇಳುವಲ್ಲಿ ಕಾಂಗ್ರೆಸ್ಸೇಕೆ ಸೋಲುತ್ತಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತನಿಗೆ ಗೊಂದಲವೆನಿಸುವಂತಾಗಿಬಿಟ್ಟಿದೆ!

    ಇಷ್ಟಕ್ಕೂ ಈ ಇಡಿಯ ಘಟನೆಗೆ ಕಿಡಿ ಹಚ್ಚಿದ್ದು ಮುಸಲ್ಮಾನರೇ. ಹಿಂದೂ ದೇವತೆಗಳನ್ನು ಅವಹೇಳನಗೈಯ್ಯುವ ಫೇಸ್​ಬುಕ್ ಪೋಸ್ಟ್​ಗಳನ್ನು ಮುಲಾಜಿಲ್ಲದೆ ಹಾಕುವ ಇವರುಗಳಿಗೆ ಸರಿಯಾದ ಉತ್ತರ ಕೊಟ್ಟರೆ ಕೋಪ!

    ಜಗತ್ತಲ್ಲೆಲ್ಲೂ ಹಾಗೇ. ಚಾರ್ಲಿ ಹೆಬ್ಡು ನೆನಪಿರಬೇಕಲ್ಲ. ಅದೂ ಕೂಡ ಹೀಗೆಯೇ ಆದದ್ದು. ತಾವು ಮತ್ತೊಂದು ಪಂಥವನ್ನು ನಿಂದಿಸುವಾಗ, ಆಚರಣೆಗಳನ್ನು ಆಡಿಕೊಳ್ಳುವಾಗ, ದೇವರುಗಳನ್ನು ಹೀಯಾಳಿಸುವಾಗ ಯಾವ ತಪ್ಪೂ ಇವರಿಗೆ ಕಂಡು ಬರುವುದಿಲ್ಲ. ಆದರೆ, ಯಾರಾದರೂ ತಮ್ಮನ್ನು ಮುಟ್ಟಬಂದರೆ ಮಾತ್ರ ನಖಶಿಖಾಂತ ಉರಿದು ಹೋಗುತ್ತಾರೆ. ರಾಜಕಾರಣದ ಪಡಸಾಲೆಗಳಲ್ಲಿ ತಿರುಗಾಡುವ ನನ್ನ ಮುಸ್ಲಿಂ ಮಿತ್ರರೊಬ್ಬರು ಈ ಸಂದರ್ಭದಲ್ಲಿಯೇ ಹಾಕಿದ್ದ ಫೇಸ್​ಬುಕ್ ಪೋಸ್ಟೊಂದು ಗಮನಿಸಿ ನಗು ಬರುತ್ತಿತ್ತು. ಅವರ ಪ್ರಕಾರ ಶಾಸಕರಳಿಯ ಮಾಡಿದ್ದು ತಪ್ಪು. ಆದರೆ, ಮುಸಲ್ಮಾನ ದಂಗೆಕೋರರ ಬಳಿ ಮಾತ್ರ ಶಾಂತಿಯಿಂದ ಇರುವಂತೆ ಕೋರಿಕೊಳ್ಳುತ್ತಿದ್ದರು. ವಾಸ್ತವವಾಗಿ ಅವರು ಕೇಳಿಕೊಳ್ಳಬೇಕಾದ್ದು ಅಕ್ಷರಶಃ ಉಲ್ಟಾ. ಶಾಸಕರ ಅಳಿಯನಿಗೆ ಸಂಯಮ ಕಾಯ್ದುಕೊಳ್ಳಲು ಹೇಳಬೇಕಿತ್ತು ಮತ್ತು ಸೋದರ ಮುಸಲ್ಮಾನರು ಮಾಡುತ್ತಿರುವುದನ್ನು ತಪ್ಪು ಎಂದು ಹೇಳಬೇಕಿತ್ತು. ಆದರೇನು? ಮುಸಲ್ಮಾನ ಎಷ್ಟೇ ಪ್ರಜ್ಞಾವಂತನಾದರೂ ಆತನೊಳಗೆ ಅರಿವಿಲ್ಲದೆ ಇಣುಕುವ ಮತಾಂಧತ್ವ ತನ್ನ ಧರ್ವಿುಯರ ವಿರುದ್ಧ ಮಾತನಾಡುವ ಧೈರ್ಯವನ್ನು ಕೊಡಲಾರದು. ಈ ಕಾರಣಕ್ಕಾಗಿಯೇ ಶಾಸಕ ಜಮೀರ್ ಅವರ ಸಮಾಜದ ಮನಸ್ಥಿತಿಯನ್ನು ಹೊರಗೆಡವಿದ್ದು, ‘ಸಮಾಜ ಅನಕ್ಷರಸ್ಥರು ಮತ್ತು ದಡ್ಡರಿಂದಲೇ ತುಂಬಿ ಹೋಗಿದೆ’ ಎಂದಿದ್ದಾರೆ.

    ಹಿಂದೂಗಳೆನಿಸಿಕೊಂಡವರೇನೂ ಕಡಿಮೆ ಇಲ್ಲ. ಮುಸಲ್ಮಾನರಿಗೆ ಬುದ್ಧಿ ಹೇಳುತ್ತಲೇ ಶಾಸಕರಳಿಯ ಮಾಡಿದ್ದನ್ನು ನಾನು ಒಪ್ಪಲಾರೆ ಎಂದೆನ್ನುವ ಅನೇಕ ಪೋಸ್ಟುಗಳು ಆನಂತರದ ದಿನಗಳಲ್ಲಿ ಓಡಾಡಿದವು. ಸಾಮಾಜಿಕ ಜಾಲತಾಣಗಳು ವ್ಯಾಪಕವಾದ ನಂತರ ಯಾರೂ ಯಾರನ್ನೂ ಹೇಗೆ ಬೇಕಾದರೂ ನಿಂದಿಸುವ ಮುಕ್ತ ಪರವಾನಗಿ ಸಿಕ್ಕಿಬಿಟ್ಟಿದೆ. ಇದೇ ಮುಸಲ್ಮಾನರು ಮೋದಿಯವರ ಕುರಿತಂತೆ ಬಳಸಿದ ಭಾಷೆಗಳು ಯಾರಿಗೆ ಗೊತ್ತಿಲ್ಲ ಹೇಳಿ? ಅಮಿತ್ ಷಾಗೆ ಕರೊನಾ ದೃಢಪಟ್ಟಿದೆ ಎಂದು ಗೊತ್ತಾದೊಡನೆ ಅವರ ಸಾವನ್ನು ಹಾರೈಸುವ ಎಷ್ಟೊಂದು ಹೇಳಿಕೆಗಳು ಹೊರಟಿದ್ದನ್ನು ಮರೆಯುವುದಾದರೂ ಹೇಗೆ? ಒಂದು ಮತದ ಕುರಿತಂತೆ ಅಗೌರವದ ಮಾತುಗಳನ್ನು ಆಡಿದರು ಎಂದ ಮಾತ್ರಕ್ಕೆ ಅವರು ಮೈಲಿಗೆಯಾಗುತ್ತಾರೇನು? ಅಥವಾ ಜಗತ್ತಿನಾದ್ಯಂತ ಇರುವ 700 ಕೋಟಿ ಮಂದಿ ಅವರನ್ನು ಅನವಶ್ಯಕವಾಗಿ ಹೊಗಳಿಬಿಟ್ಟರೆ ಅವರು ಶ್ರೇಷ್ಠರಾಗಿಬಿಡುತ್ತಾರೇನು? ಇದು ಸಾಧ್ಯವೇ ಇಲ್ಲದ ಸಂಗತಿ. ಬಿಸಿಲು ಹೆಚ್ಚಾದಾಗ ಸೂರ್ಯನಿಗೆ ಮನಸೋ ಇಚ್ಛೆ ಬೈಯ್ಯುವ ಅದೇ ಜನ ನಾಲ್ಕು ದಿನ ಸೂರ್ಯ ಕಾಣದೇ ಹೋದಾಗ ಎಲ್ಲರ ದೇಹಾರೋಗ್ಯ ಹಾಳಾಗಿಬಿಟ್ಟಿದೆ ಎಂದೂ ಬೈಯ್ಯುತ್ತಾರೆ. ಹೀಗೆ ನಿಂದಿಸುತ್ತಿದ್ದಾರೆಂಬ ಕಾರಣಕ್ಕೆ ಸೂರ್ಯಾರಾಧಕರು ದಾಂಧಲೆ ಎಬ್ಬಿಸಿಬಿಟ್ಟರೆ ನಷ್ಟ ಸೂರ್ಯನಿಗೋ ಅಥವಾ ಅವನ ಆರಾಧಕರಿಗೋ ಎನ್ನುವುದೇ ಪ್ರಶ್ನೆ.

    ಜಗತ್ತಿನ ಇತಿಹಾಸದಲ್ಲಿ ಶಾಸಕರ ಸೋದರಳಿಯನಂತೆ ಸಾವಿರಾರು ಮಂದಿ ಆಗಿಹೋಗಬಹುದು. ಆದರೆ ನಿಜಕ್ಕೂ ಶ್ರೇಷ್ಠತೆ ಇದ್ದರೆ ಪೈಗಂಬರ್​ರಂತೆ ಒಬ್ಬರು ಮಾತ್ರವೇ ಹುಟ್ಟುವುದು ಸಾಧ್ಯ. ಹೀಗಿರುವಾಗ ಈ ಒಟ್ಟಾರೆ ಪ್ರಕರಣವನ್ನು ನೋಡಬೇಕಾದ ದೃಷ್ಟಿಕೋನವೇ ಭಿನ್ನವಾಗಿತ್ತಲ್ಲವೇ? ದಿನಬೆಳಗಾದರೆ ಭಗವಾನ್​ನಂತಹ ಬುದ್ಧಿಜೀವಿಗಳು ಶ್ರೀರಾಮನನ್ನು ಆಡಿಕೊಳ್ಳುತ್ತಾರೆ. ರಾಮನ ವ್ಯಕ್ತಿತ್ವದ ಕುರಿತಂತೆ ಸಂದೇಹಗಳನ್ನು ವ್ಯಕ್ತಪಡಿಸುತ್ತಾರೆ. ಕೊನೆಗೆ ರಾಮನ ಹುಟ್ಟೂರು ಅಯೋಧ್ಯೆಯಲ್ಲಿ ಆತನ ಮಂದಿರವನ್ನೇ ಧ್ವಂಸಗೊಳಿಸಿ ಮಸೀದಿಯನ್ನೂ ಕಟ್ಟಿಬಿಡುತ್ತಾರೆ. ಇತಿಹಾಸವನ್ನು ಅವಲೋಕಿಸಿ ನೋಡಿ. ರಾಮನ ಕುರಿತಂತೆ ಅಪದ್ಧಗಳನ್ನಾಡಿದವರ ಹೆಸರು ಇಂದು ಉಳಿದಿಲ್ಲ. ಆದರೆ ರಾಮ ಮನೆ-ಮನೆಯಲ್ಲೂ ಇದ್ದಾನೆ. ಮೊನ್ನೆ ಮಂದಿರಕ್ಕೆ ಭೂಮಿಪೂಜನವಾಗುವಾಗ ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ರಾಮನಿಗೆ ಜೈಕಾರ ಹಾಕಿದ್ದಾರೆ. ಸತ್ಯ ಶಾಶ್ವತ ಎನ್ನುವುದು ಈ ಕಾರಣಕ್ಕೆ. ಆದರೆ ನೀವು ಸುಳ್ಳಿನ ಪರವಾಗಿ ನಿಂತಿದ್ದರೆ ಅದನ್ನು ಸತ್ಯವೆಂದು ಸಾಬೀತುಪಡಿಸಲು ಮಾತ್ರ ತಿಪ್ಪರಲಾಗ ಹಾಕಬೇಕು. ಜನ ಅದನ್ನು ಸತ್ಯವೆಂದು ಭ್ರಮಿಸುವಂತೆ ಮಾಡಬೇಕು. ಯಾರಾದರೊಬ್ಬರು ‘ಸತ್ಯವಲ್ಲ’ ಎಂದು ಹೇಳಲು ಯತ್ನಿಸಿದರೆ ಅವರನ್ನು ಕೊಲ್ಲಬೇಕು. ಇದು ಸಹಜ ಪ್ರಕ್ರಿಯೆ. ಈಗ ಗಲಾಟೆ ಮಾಡುವವರೇ ತಾವು ಯಾವ ಪಾಳಯದಲ್ಲಿದ್ದೇವೆ ಎಂಬುದನ್ನು ನಿರ್ಣಯಿಸಿಕೊಳ್ಳಬೇಕು ಅಷ್ಟೇ. ದನ್ನೂ ಓದಿ: ವಿಶ್ವಗುರು: ಆಕ್ರಮಣಕ್ಕೆ ಸಜ್ಜಾಗಿ ನಿಂತಿದೆ ಭಾರತ!

    ಇಷ್ಟಕ್ಕೂ ಭಾರತದಲ್ಲಿ ಈ ಪರಿಯ ಕದನ ಕುತೂಹಲತನ ಮುಸಲ್ಮಾನರಲ್ಲೂ ಎಂದಿಗೂ ಇರಲಿಲ್ಲ. ಹಳ್ಳಿ-ಹಳ್ಳಿಗಳಲ್ಲಿರುವ ಮುಸಲ್ಮಾನರು ಸ್ಥಳೀಯ ಹಿಂದೂಗಳೊಂದಿಗೆ ಸಹಜವಾದ ಸುಮಧುರವಾದ ಬಾಂಧವ್ಯವನ್ನೇ ಹೊಂದಿದ್ದರು. ಅದರಲ್ಲೂ ಬರೇಲ್ವಿ ಪಂಥಕ್ಕೆ ಸೇರಿದ ಸುನ್ನಿಗಳದ್ದಂತೂ ಭಾರತೀಯತೆಗೆ ಹೊಂದುವ ಆಚರಣೆಗಳೇ ಆಗಿಬಿಟ್ಟಿದ್ದರಿಂದ ಎಲ್ಲವೂ ಚೆನ್ನಾಗಿಯೇ ಇತ್ತು. ಕಳೆದ ನಾಲ್ಕಾರು ದಶಕಗಳಲ್ಲಿ ಇದನ್ನು ಬುಡಮೇಲುಗೊಳಿಸುವ ಮತ್ತು ಮುಸಲ್ಮಾನರನ್ನು ಕಟ್ಟರ್ ಧರ್ವಿುಯರನ್ನಾಗಿಸುವ ಪ್ರಯತ್ನ ಭರದಿಂದ ಸಾಗಿದೆ. ಈ ಪ್ರಯತ್ನದಲ್ಲಿ ವಹಾಬಿಗಳ ಪಾತ್ರ ಬಲುದೊಡ್ಡದು. ಹಾಗೆ ನೋಡಿದರೆ ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲಿಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಈ ಹೋರಾಟಗಳ ನಂತರ ಮುಸಲ್ಮಾನ್ ತರುಣರಿಗೆ ವಹಾಬಿ ಚಿಂತನೆಗಳ ಮೇಲೆ ಅದೆಷ್ಟು ಆಸಕ್ತಿ ಬೆಳೆಯಲಾರಂಭಿಸಿದೆ ಎಂದರೆ ಹಳ್ಳಿ-ಹಳ್ಳಿಯಲ್ಲೂ ಈ ಜಮಾತಿನ ಜನ ತಮ್ಮ ವಿಚಾರಧಾರೆಯನ್ನು ಹಬ್ಬಿಸಲು ಪ್ರವಾಸ ಆರಂಭಿಸಿಬಿಟ್ಟಿದ್ದಾರೆ. ಮುಸಲ್ಮಾನರೊಳಗಿನ ಅನೇಕ ಶಾಂತಿ ಪ್ರತಿಪಾದಕ ಪಂಥಗಳು ಕೈಚೆಲ್ಲುವ ಹಂತಕ್ಕೆ ಬಂದುಬಿಟ್ಟಿವೆ. ಇದು ಸ್ವತಃ ಮುಸಲ್ಮಾನರಿಗೇ ಒಳಿತೆನಿಸುವ ಬೆಳವಣಿಗೆಯಂತೂ ಅಲ್ಲ. ದನ್ನೂ ಓದಿ: ವಿಶ್ವಗುರು: ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

    ಜಾಗತಿಕವಾಗಿ ಕಂಡು ಬರುತ್ತಿರುವ ಬದಲಾವಣೆಗಳು ಮತ್ತು ಇಸ್ಲಾಂ ಸಾಗುತ್ತಿರುವ ಹಾದಿ ಇವೆಲ್ಲವೂ ಕೂಡ ಹೊಸ ಸವಾಲನ್ನಂತೂ ಖಂಡಿತ ತರಲಿದೆ. ಇತ್ತೀಚೆಗೆ ಇಸ್ರೇಲ್ ಯುಎಇಯೊಂದಿಗೆ ಮಾಡಿಕೊಂಡ ಒಪ್ಪಂದವೇ ಇದಕ್ಕೆ ಸ್ಪಷ್ಟ ಉದಾಹರಣೆ. ಸದಾ ಇಸ್ಲಾಮನ್ನು ಉಳಿಸಲು ಮುಂಚೂಣಿಯಲ್ಲಿ ನಿಂತಿರುತ್ತಿದ್ದ ಸೌದಿ ಅರೇಬಿಯಾ ಈ ಬಾರಿ ಪಾಕಿಸ್ತಾನದ ಬೆನ್ನೆಲುಬನ್ನೇ ಮುರಿಯಲು ತಾನು ಕೊಟ್ಟ ಒಂದು ಬಿಲಿಯನ್ ಡಾಲರ್ ಸಾಲವನ್ನು ಮರಳಿ ಪಡೆದಿದೆ! ಸೌದಿ ಅರೇಬಿಯಾಕ್ಕೆ ಹೆದರಿಕೆ ಹುಟ್ಟಿಸುವ ಪ್ರಯತ್ನವಾಗಿ ಟರ್ಕಿಯೊಂದಿಗೆ ಸಂಬಂಧ ಬೆಳೆಸಿಕೊಳ್ಳುವ ಮಾತುಗಳನ್ನಾಡಿ ಅದು ಸಾಕಷ್ಟು ಹೊಡೆತ ತಿಂದಿದೆ. ಹಾಗಂತ ಸುಮ್ಮನಿಲ್ಲ. ಕಾಶ್ಮೀರ ಮತ್ತು ಭಾರತದ ಇತರೆಡೆ ದಂಗೆಗಳನ್ನು ಹಬ್ಬಿಸಲು ಅದು ಈಗ ಟರ್ಕಿಯ ಮೊರೆ ಹೋಗಿದೆ. ಟರ್ಕಿಯ ಅಧ್ಯಕ್ಷ ತಾನೀಗ ಇಸ್ಲಾಮಿನ ಮಹಾರಕ್ಷಕನಾಗಿ ಹೊರಹೊಮ್ಮಬೇಕೆಂಬ ಧಾವಂತದಲ್ಲಿದ್ದಾರೆ. ಇವೆಲ್ಲದರ ನೇರ ಮತ್ತು ಅಡ್ಡ ಪರಿಣಾಮಗಳು ಭಾರತದಲ್ಲಿ ಇರುವ ಮುಸಲ್ಮಾನರ ಮೇಲೆ ನಿಸ್ಸಂಶಯವಾಗಿ ಆಗಲಿದೆ. ಈ ಎಲ್ಲ ಹಿನ್ನೆಲೆಯನ್ನಿಟ್ಟುಕೊಂಡು ಬೆಂಗಳೂರಿನ ದಂಗೆಗಳನ್ನು ನೋಡಬೇಕೇ ಹೊರತು ಒಂದು ಫೇಸ್​ಬುಕ್ ಪೋಸ್ಟ್​ನ ಆಧಾರದ ಮೇಲಂತೂ ಅಲ್ಲವೇ ಅಲ್ಲ! ದನ್ನೂ ಓದಿ: ವಿಶ್ವಗುರು: ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!

    ಇಡಿಯ ಪ್ರಕರಣದಲ್ಲಿ ಎಸ್​ಡಿಪಿಐನ ಪಾತ್ರ ಬಲು ಮುಖ್ಯ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಶಾಸಕ ದೊಡ್ಡ ಪ್ರಮಾಣದ ಗೆಲುವು ಸಾಧಿಸಲು ಅನುಕೂಲ ಮಾಡಿಕೊಟ್ಟಿದ್ದು ಇದೇ ಪಕ್ಷ. ಆದರೀಗ ಕಾರ್ಪೆರೇಶನ್ ಚುನಾವಣೆಗೂ ಮುನ್ನ ಹೀಗೊಂದು ದಂಗೆಗೆ ಕಾರಣವಾಗಿ ಮುಸಲ್ಮಾನರ ವೋಟುಗಳನ್ನು ಅದು ಕ್ರೋಡೀಕರಿಸಿಕೊಳ್ಳುತ್ತಿರು ವುದನ್ನು ನೋಡಿದರೆ ಕಾಂಗ್ರೆಸ್ಸು ನಿಸ್ಸಂಶಯವಾಗಿ ಬಲವಾದ ಹೊಡೆತ ತಿನ್ನಲಿದೆ. ಅಪ್ಪಿ-ತಪ್ಪಿ ಕಾಂಗ್ರೆಸ್ ನಾಯಕರು ಶಾಸಕನ ಪರವಾಗಿ ನಿಂತು ದಂಗೆಕೋರರ ವಿರುದ್ಧ ಸಣ್ಣ ಹೇಳಿಕೆಯನ್ನು ಕೊಟ್ಟುಬಿಟ್ಟಿದ್ದರೂ ಕಾಂಗ್ರೆಸ್ಸು ಮುಸಲ್ಮಾನರ ವೋಟುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿತ್ತಲ್ಲದೆ ಎಸ್​ಡಿಪಿಐ ಪ್ರಬಲವಾಗಿ ಬೆಳೆದುಬಿಟ್ಟಿರುತ್ತಿತ್ತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಮುಳುವಾಗಿ ಆಂಧ್ರದಲ್ಲಿ ಓವೈಸಿ ಸಹೋದರರಂತೆ ಇಲ್ಲಿಯೂ ಎಸ್​ಡಿಪಿಐನ ಕುಳಗಳು ಬಲವಾಗಿ ಬೇರೂರಿಬಿಟ್ಟಿರುತ್ತಿದ್ದವು. ಇಡಿಯ ಪ್ರಕರಣಕ್ಕೆ ಈ ಒಂದು ತಿರುವೂ ಕೂಡ ಇದೆ.

    ಇವೆಲ್ಲವುಗಳ ನಂತರವೂ ಸಾಮಾನ್ಯ ನಾಗರಿಕನಲ್ಲಿ ಒಂದು ಪ್ರಶ್ನೆಯಂತೂ ಹಾಗೆಯೇ ಉಳಿದುಬಿಡುತ್ತದೆ. ಯಾವುದಾದರೊಬ್ಬ ವ್ಯಕ್ತಿಯನ್ನು ಸಂಬಂಧವೇ ಇಲ್ಲದ ಮತ್ತೊಬ್ಬ ವ್ಯಕ್ತಿ ನಿಂದಿಸಿಬಿಟ್ಟರೆ ಆ ವ್ಯಕ್ತಿಗೆ ಕಳಂಕ ತಟ್ಟಿಯೇ ಬಿಡುತ್ತದಾ? ಮತ್ತು ಹಾಗೆ ನಿಂದಿಸಿದ ವ್ಯಕ್ತಿಯನ್ನು ಕೊಂದುಬಿಟ್ಟರೆ ಅಥವಾ ಅವನ ಧರ್ವಿುಯರನ್ನು ನಾಶಗೊಳಿಸಿದರೆ ಆ ವ್ಯಕ್ತಿಯ ಗೌರವ ಹೆಚ್ಚುತ್ತದಾ? ಅಲ್ಲದೆ ಈ ರೀತಿ ತಮ್ಮೊಳಗೆ ಇತರರನ್ನು ನಾಶಗೈಯ್ಯುವ ಆಲೋಚನೆಯನ್ನೇ ತುಂಬಿಕೊಂಡಿರುವಂಥ ಈ ಮಂದಿ ನಾಗರಿಕ ಸಮಾಜದಲ್ಲಿ ಇತರರೊಂದಿಗೆ ಬದುಕುವ ಅರ್ಹತೆ ಉಳಿಸಿಕೊಂಡಿದ್ದಾರಾ? ಇಂತಹ ಅನೇಕ ಜೀವಪರ ಪ್ರಶ್ನೆಗಳನ್ನು ಕೇಳುವ, ಟೌನ್​ಹಾಲ್​ಗಳ ಮುಂದೆ ದಿನಬೆಳಗಾದರೆ ಬಂದು ಕೂರುವ ಎಡಪಂಥೀಯ ಬುದ್ಧಿಜೀವಿಗಳೆಲ್ಲ ಈಗೇಕೆ ಬಿಲಸೇರಿಕೊಂಡುಬಿಟ್ಟಿದ್ದಾರೆ? ಅವರ ಪೌರುಷವೇನಿದ್ದರೂ ಯಾರನ್ನು ಕೊಲೆಗೈಯ್ಯುವುದನ್ನು ಸಮರ್ಥಿಸದ ತಾಳ್ಮೆ ಮತ್ತು ಸಹನೆಯನ್ನೇ ಮೈಗೂಡಿಸಿಕೊಂಡಿರುವ ಹಿಂದೂಗಳ ಮೇಲೆ ಮಾತ್ರವೇನಾ? ಬೆಂಗಳೂರಿನ ದಂಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉತ್ತರ ಕಂಡುಕೊಳ್ಳದಿದ್ದರೆ ನಮ್ಮ ಪಾಲಿನ ಬರಲಿರುವ ದಿನಗಳು ನಿಜಕ್ಕೂ ಕಠೋರವಾಗಿರಲಿವೆ!

    ವಿಶ್ವಗುರು: ರಾಮರಾಜ್ಯ ಭ್ರಾಮಕ ಕಲ್ಪನೆಯಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts